ಸತ್ತ ಮರಿಯನ್ನು ಹೊತ್ತು ರಸ್ತೆಗೆ ಬಂದ ತಾಯಾನೆ! ವೈರಲ್​ ಆದ ವಿಡಿಯೋ ನೀಡ್ತಿರೋ ಸಂದೇಶವೇನು ಗೊತ್ತಾ?!

2090
9900071610

ಪ್ರೀತಿ, ವಾತ್ಸಲ್ಯ ಅನ್ನೋದು ಕೇವಲ ಮನುಷ್ಯನ ಸ್ವತ್ತಲ್ಲ. ಪ್ರಾಣಿಗಳಿಗೂ ತಾವು ಹೆತ್ತ ಕರುಳಕುಡಿಗಳ ಮೇಲೆ ಅಷ್ಟೇ ಪ್ರೀತಿ ಇರುತ್ತೆ. ಇದಕ್ಕೆ ಸಾಕ್ಷಿ ಎಂಬಂತೆ ಆನೆಯೊಂದು ತನ್ನ ಮರಿಯ ಮೃತದೇಹವನ್ನು ಸಂಸ್ಕಾರ ಮಾಡುವಂತೆ ಹೊತ್ತೊಯ್ದ ದೃಶ್ಯ ವೈರಲ್​ ಆಗಿದ್ದು, ನೋಡುಗರ ಕಣ್ಣಲ್ಲಿ ನೀರು ತರಿಸುವಂತಿದೆ.

ad


ಭಾರತೀಯ ಅರಣ್ಯ ಇಲಾಖೆಯ ಅಧಿಕಾರಿ ಪ್ರವೀಣ ಕಾಸ್ವಾನ್ ಎಂಬುವವರು ಇಂತಹ ಮನಮುಟ್ಟುವ ವಿಡಿಯೋವೊಂದನ್ನು ತಮ್ಮ ಟ್ವೀಟರ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಆನೆಯೊಂದು ತನ್ನ ಸತ್ತಿರುವ ಪುಟ್ಟ ಮರಿಯನ್ನು ಬಾಯಲ್ಲಿ ಕಚ್ಚಿಕೊಂಡು ರಸ್ತೆ ದಾಟುತ್ತಿದೆ.


ಅಷ್ಟೇ ಅಲ್ಲ ರಸ್ತೆ ಬದಿಯಲ್ಲಿ ಆ ಪುಟ್ಟ ಆನೆಮರಿಯ ಶವವನ್ನು ಹಾಕಿ, ಕೆಲಕಾಲ ಸಂತಾಪ ಸೂಚಿಸುವಂತೆ ಮೌನವಾಗಿ ನಿಲ್ಲುತ್ತದೆ. ಇದೇ ವೇಳೆಗೆ ಕಾಡಿನ ಇತರ ಆನೆಗಳು ಹಾಗೂ ಮರಿಯಾನೆಗಳು ಹಿಂಡು ಹಿಂಡಾಗಿ ಬಂದು ಈ ಆನೆಯ ಜೊತೆಗೂಡುತ್ತವೆ. ಅಲ್ಲದೇ ದುಃಖತಪ್ತ ಆನೆಯನ್ನು ಸಂತೈಸುತ್ತವೆ.


ಬಳಿಕ ಮತ್ತೆ ತಾಯಿ ಆನೆ ತನ್ನ ಮರಿಯನ್ನು ಸ್ಥಳದಿಂದ ಎತ್ತಿಕೊಂಡು ಕಾಡಿನೊಳಕ್ಕೆ ಅಂತ್ಯಸಂಸ್ಕಾರಕ್ಕೆ ಕರೆದೊಯ್ಯುವಂತೆ ತೆಗೆದುಕೊಂಡು ಹೋಗುತ್ತದೆ. ಈ ವಿಡಿಯೋ ಇದೀಗ ವೈರಲ್​ ಆಗಿದ್ದು, ಮೂಕ ಪ್ರಾಣಿಗಳಲ್ಲಿಯೂ ಇರುವ ವಾತ್ಸಲ್ಯ, ಮರಿಗಳ ಮೇಲಿನ ಪ್ರೀತಿಗೆ ಸಾಕ್ಷಿ ಒದಗಿಸಿದೆ.


ಈ ದೃಶ್ಯ ಯಾವ ಕಾಡಿನದ್ದು, ಆನೆಮರಿ ಸಾವಿಗೆ ಕಾರಣವೇನು ಎಂಬ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಮೂಕಪ್ರಾಣಿಗಳಿಗೂ ಮನುಷ್ಯನಂತೆ ಭಾವನೆಗಳಿವೆ ಎಂಬ ಅಂಶವನ್ನು ಎತ್ತಿಹಿಡಿದಿದ್ದು, ಪ್ರಾಣಿಪ್ರಿಯರು ಈ ದೃಶ್ಯ ನೋಡಿ ಭಾವುಕರಾಗುತ್ತಿದ್ದಾರೆ.

ಆನೆಯೊಂದು ತನ್ನ ಸತ್ತಮರಿಯನ್ನು ಬಾಯಲ್ಲಿ ಕಚ್ಚಿಕೊಂಡು ತೆರಳುತ್ತಿರುವ ದೃಶ್ಯ ಎಲ್ಲೆಡೆ ವೈರಲ್​ ಆಗಿದೆ.

ಆನೆಯೊಂದು ತನ್ನ ಸತ್ತಮರಿಯನ್ನು ಬಾಯಲ್ಲಿ ಕಚ್ಚಿಕೊಂಡು ತೆರಳುತ್ತಿರುವ ದೃಶ್ಯ ಎಲ್ಲೆಡೆ ವೈರಲ್​ ಆಗಿದೆ.

BtvNews ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಸೋಮವಾರ, ಜೂನ್ 10, 2019

Sponsored :


9900071610