ಗುಂಡೂರಾವ್ ವಿರುದ್ಧ ಮುಂದುವರಿದ ಸಿಂಹ್ ಘರ್ಜನೆ!!

1425
MP Pratap Simha Outrage against Congress President Dinesh Gundurao.
MP Pratap Simha Outrage against Congress President Dinesh Gundurao.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸಂಸದ ಪ್ರತಾಪ್ ಸಿಂಹ್‌ ನಡುವಿನ ಪೇಸ್ ಬುಕ್ ಹಾಗೂ ಟ್ವಿಟರ್ ವಾರ್ ಮುಗಿಯುವ ಲಕ್ಷಣವೇ ಇಲ್ಲ. ಹೌದು ದಿನೇಶ್ ಗುಂಡೂರಾವ್ ವಿರುದ್ಧ ಮತ್ತೆ ತೀವ್ರ ವಾಗ್ದಾಳಿ ನಡೆಸಿರುವ ಸಂಸದ ಪ್ರತಾಪ್ ಸಿಂಹ್, ದಿನೇಶ್ ಗುಂಡೂರಾವ್ ನನ್ನ ಬಗ್ಗೆ ಸದಾಕಾಲ ಮಾಧ್ಯಮಗಳಿಗೆ ಹೇಳಿಕೆ ನೀಡುವ ಬದಲು ತಮ್ಮ ಕ್ಷೇತ್ರದ ಬಗ್ಗೆ ಗಮನ ಹರಿಸಲಿ‌.

ad

ಆ ಕ್ಷೇತ್ರವನ್ನು ಅವರು ನಾಲ್ಕು ಭಾರಿ ಪ್ರತಿನಿಧಿಸಿದ್ದರೂ ಯಾವುದೇ ಅಭಿವೃದ್ಧಿಯಾಗಿಲ್ಲ. ಮಂಗಳಮುಖಿಯರು ಹಫ್ತಾ ವಸೂಲಿ ಮಾಡುವಷ್ಟರ ಮಟ್ಟಿಗೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹೀಗಾಗಿ ತಮ್ಮ ಕ್ಷೇತ್ರದ ಕಡೆ ಗಮನ ಹರಿಸಲಿ ಎಂದಿದ್ದಾರೆ‌.

ಅಲ್ಲದೇ ಅಲ್ಲಿ ಬಸ್ ನಿಲ್ಲೋದಿಕ್ಕು ಕೂಡ ಸರಿಯಾದ ವ್ಯವಸ್ಥೆ ಇಲ್ಲ. ಇದನ್ನೆಲ್ಲ ಸರಿಪಡಿಸುವುದನ್ನು ಬಿಟ್ಟು ಅವರು ನನ್ನ ಬಗ್ಗೆ ಟೀಕಿಸುವುದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದಿದ್ದಾರೆ‌ .

 

ಇಷ್ಟೇ ಅಲ್ಲದೇ ಹುಣಸೂರಿನ ಲಕ್ಷ್ಮೀನರಸಿಂಹ ದೇವಾಲಯಕ್ಕೆ ತೆರಳಿ ಹನುಮ ಮಾಲೆ ವಿಸರ್ಜಿಸಿ ಮಾತನಾಡಿದ ಪ್ರತಾಪಸಿಂಹ್ ಅಲ್ಲಿ ಮೈಸೂರು ಎಸ್ಪಿ ರವಿ.ಚನ್ನಣ್ಣನವರ್ ಬಗ್ಗೆ ತಮ್ಮ ಅಸಮಧಾನ ಹೊರ ಹಾಕಿದ್ದಾರೆ. ಯಾರು ಏನೇ ಅಡ್ಡಿ ತಂದರೂ ನಿಗದಿತ ಸಮಯದಲ್ಲಿ ಹನುಮಜಯಂತಿ ನಡೆಸೇ ತೀರುತ್ತೇವೆ. ಹನುಮಜಯಂತಿಗೆ ಅಡ್ಡಿಯಾದವರಿಗೆ ತಾಯಿ ಚಾಮುಂಡಿ ಬುದ್ಧಿ ಕಲಿಸುತ್ತಾಳೆ.

 

ನಾನು ಊರಿಂದಾಚೆ ತೆರಳ ಬೇಕಾಗಿರೋದರಿಂದ ಹನುಮ ಮಾಲೆ ವಿಸರ್ಜಿಸಿದ್ದೇನೆ ಎಂದರು. ಒಟ್ಟಿನಲ್ಲಿ ದಿನೇಶ್ ಗುಂಡೂರಾವ್ ಸೇರಿ ತಮ್ಮ ವಿರೋಧಿಗಳ ವಿರುದ್ಧ ಪ್ರತಾಪ ಸಿಂಹ್ ಟ್ಬಿಟರ್ ಹಾಗೂ ಪೇಸ್ ಬುಕ್ ವಾರ್ ಮುಂದುವರಿಸಿದ್ದು ಪ್ರತಿನಿತ್ಯ ಹೊಸ-ಹೊಸ ಹೇಳಿಕೆಗಳ ಮೂಲಕ ವಿವಾದವನ್ನು ಹಸಿರಾಗಿರಿಸುವ ಪ್ರಯತ್ನವನ್ನು ಪ್ರತಾಪ‌ಸಿಂಹ್ ಮುಂದುವರಿಸಿದ್ದಾರೆ.

Sponsored :

Related Articles