ಕರ್ನಾಟಕದ ಸಂಸದೆಗೆ ಮೋದಿ ಭರ್ಜರಿ ಗಿಫ್ಟ್​! ಶೋಭಾರನ್ನು ಸಚೇತಕಿಯಾಗಿ ನೇಮಿಸಿದ ಪ್ರಧಾನಿ!!

2965

ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಈ ಬಾರಿ ಮುಖ್ಯ ಸಚೇತಕಿಯಾಗಿ ನೇಮಕವಾಗಿದ್ದಾರೆ. ಕೇಂದ್ರ ಸಂಪುಟದಲ್ಲಿ ಸ್ಥಾನ ಕೈತಪ್ಪಿದ ಬೇಸರದಲ್ಲಿದ್ದ ಉಡುಪಿ-ಚಿಕ್ಕಮಗಳುರು ಸಂಸದೆ ಶೋಭಾ ಕರಂದ್ಲಾಜೆಗೆ ಪ್ರಧಾನಿ ನರೇಂದ್ರ ಮೋದಿ ಅಚ್ಚರಿಯ ಹುದ್ದೆಯನ್ನೆ ನೀಡಿದ್ದಾರೆ.

ಇದೇ ಜೂನ್ 17ರಿಂದ ಜುಲೈ 28ರ ವರೆಗೆ ನಡೆಯಲಿರುವ ಲೋಕಸಭೆಯ ಅಧಿವೇಶನಕ್ಕೆ ಬಿಜೆಪಿ ಸಂಸದೀಯ ಕಾರ್ಯಕಾರಿ ಸಮಿತಿಯಲ್ಲಿ ಮುಖ್ಯ ಸಚೇತಕಿಯಾಗಿ ಶೋಭಾ ಆಯ್ಕೆಯಾದರೆ ಸಹಸಚೇತಕರಾಗಿ ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಿಂದ ಸತತ 3 ಬಾರಿ ಸಂಸದರಾಗಿರುವ ನಳೀನ್ ಕುಮಾರ್ ಕಟೀಲ್ ಆಯ್ಕೆಯಾಗಿದ್ದರೆ, ಅಲ್ಲದೆ ಧಾರವಾಡ ಸಂಸದ ಹಾಗೂ ಕಲ್ಲಿದ್ದಿಲು ಹಾಗೂ ಗಣಿ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಲೋಕಸಭೆ ಅಧಿವೇಶನಕ್ಕಾಗಿ ಸರ್ಕಾರಿ ಸಚೇತಕರನ್ನಾಗಿ ನೇಮಿಸಲಾಗಿದೆ.

ad

ಲೋಕಸಭೆ ಮುಖ್ಯ ಸಚೇತಕಿಯಾಗುವ ಮೂಲಕ ಶೊಭಾ ಕರಂದ್ಲಾಜೆ ಮುಂದಿನ ದಿನಗಳಲ್ಲಿ ಸಂಸದರಿಗೆ ವಿಪ್ ಜಾರಿ, ಲೋಕಸಭೆ ನಾಯಕತ್ವದಲ್ಲಿ ಚುನಾವಣೆಗಳು, ರಾಜ್ಯಸಭೆ ಸದಸ್ಯರ ಆಯ್ಕೆ ಸೇರಿ ಅನೇಕ ಮಹತ್ವದ ಕಾರ್ಯಗಳನ್ನು ನಿಭಾಯಿಸಲಿದ್ದಾರೆ.

ಇನ್ನು ಈಗಾಗಲೇ ರಾಜ್ಯದಿಂದ ಆಯ್ಕೆಯಾದ ನಾಲ್ವರಿಗೆ ಕೇಂದ್ರದ ಮೋದಿ ಸರ್ಕಾರ ಮಂತ್ರಿ ಸ್ಥಾನ ನಿಡಿದ್ದು D.V ಸದಾನಂದಗೌಡ, ಪ್ರಹ್ಲಾದ್ ಜೊಷಿ, ಸುರೇಶ್ ಅಂಗಡಿ ಹಾಗೂ ನಿರ್ಮಲಾ ಸೀತಾರಾಮನ್ ಕೇಂದ್ರ ಸಂಪುಟದಲ್ಲಿ ಸಚಿವರಾಗಿದ್ದಾರೆ.

ಇದೀಗ ಸಂಸದೆ ಶೋಭಾ ಅವರಿಗೆ ಮುಖ್ಯ ಸಚೇತಕಿ ಹುದ್ದೆ ನೀಡುವ ಮೂಲಕ ಕೇಂದ್ರ ಸರ್ಕಾರದಲ್ಲಿ ರಾಜ್ಯದವರ ಪಾಲು ಐದಕ್ಕೆ ಏರಿದಂತಾಗಿದೆ. ಆದರೆ ಶೋಭಾ ಅವರಿಗ ನೀಡಿರುವ ಹುದ್ದೆ ಸಂಪುಟಕ್ಕೆ ಸಂಬಂಧಿಸಿಲ್ಲ.

Sponsored :

Related Articles