ರೈಲ್ವೆ ನಿಲ್ದಾಣದಲ್ಲಿ ಸಂಸದೆಗೆ ಯುವಕನಿಂದ ಕಿರುಕುಳ!

1573

ಮುಂಬೈ: ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಪುತ್ರಿ, ಹಾಲಿ ಸಂಸದೆ ಸುಪ್ರಿಯಾ ಸುಳೆ ಅವರಿಗೆ ಯುವಕನೊಬ್ಬ ಕಿರುಕುಳ ನೀಡಿದ ಘಟನೆ ಮುಂಬೈ ದಾದರ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ad

ಈ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿರುವ ಅವರು ‘ದಾದರ್ ರೈಲ್ವೆ ನಿಲ್ದಾಣದಲ್ಲಿ ನನಗೆ ವಿಚಿತ್ರ ಅನುಭವವಾಯಿತು. ಕುಲ್ಜಿತ್ ಸಿಂಗ್ ಮಲ್ಹೋತ್ರಾ ಎಂಬ ಚಾಲಕ ಟ್ಯಾಕ್ಸಿ ಸೇವೆ ನೀಡುವ ನೆಪದಲ್ಲಿ ಎರಡು ಬಾರಿ ನನ್ನ ದಾರಿಗೆ ಅಡ್ಡವಾಗಿ ಕಿರುಕುಳ ನೀಡಿದ. ಅಲ್ಲದೆ ನಾನು ಆತನ ಫೋಟೊ ಚಿತ್ರಿಸಿದಾಗಲೂ ನಾಚಿಕೆಯಿಲ್ಲದೆ ಭಾವಚಿತ್ರಕ್ಕೆ ಪೋಸ್ ನೀಡಿದ್ದಾನೆ’ಎಂದು ರೈಲ್ವೆ ಮಂತ್ರಿಗೆ ಟ್ಯಾಗ್ ಮಾಡಿದ್ದಾರೆ.

ರೈಲ್ವೆ ಮಂತ್ರಿಗಳು ಇಂತಹ ಘಟನೆ ಬಗ್ಗೆ ಗಮನಹರಿಸಿ ಪ್ರಯಾಣಿಕರಿಗೆ ಈ ರೀತಿಯ ಅನುಭವಗಳಾಗದಂತೆ ಎಚ್ಚರಿಕೆ ವಹಿಸಬೇಕು. ರೈಲು ಅಥವಾ ವಿಮಾನ ನಿಲ್ದಾಣಗಳಲ್ಲಿ ಈ ರೀತಿಯ ಬಲವಂತದಿಂದ ಕ್ಯಾಬ್ ಸೇವೆ ನೀಡುವ ಸಂಸ್ಥೆಗಳಿಗೆ ಅನುಮತಿ ನೀಡಬಾರದು. ಒಂದು ಕಡೆ ನಿಂತಿರುವ ಟ್ಯಾಕ್ಸಿಗಳಿಗೆ ಮಾತ್ರ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಚಾಲಕ ಕುಲ್ಜಿಂತ್ ಸಿಂಗ್ ವಿರುದ್ಧ ತಕ್ಷಣ ಕ್ರಮಕೈಗೊಂಡಿರುವ ರೈಲ್ವೆ ಅಧಿಕಾರಿಗಳು ಆತನನ್ನು ಬಂಧಿಸಿ ದಂಡ ವಿಧಿಸಿದ್ದಾರೆ. ತ್ವರಿತವಾಗಿ ಆರೋಪಿ ವಿರುದ್ಧ ಕ್ರಮ ಕೈಗೊಂಡಿದ್ದಕ್ಕೆ ರೈಲ್ವೆ ಸುರಕ್ಷ ದಳದ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

Sponsored :

Related Articles