ನನಗೆ ಮತ್ತೊಮ್ಮೆ ಲವ್ವಾಗಿದೆ! ಬೋಲ್ಡ್​ ಹೇಳಿಕೆಯ ಮೂಲಕ ಅಭಿಮಾನಿಗಳಿಗೆ ಸಪ್ರೈಸ್​ ಕೊಟ್ಟ ಬಹುಭಾಷಾ ನಟಿ!!

3606
9900071610

ಇತ್ತೀಚಿಗಷ್ಟೇ ವಿಚ್ಛೇಧನದ ಮೂಲಕ ಸುದ್ದಿಯಾಗಿದ್ದ ನಟಿ ಅಮಲಾಪೌಲ್ ಈಗ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದೇನೆ ಎನ್ನುವ ಮೂಲಕ ಸುದ್ದಿಯಾಗಿದ್ದಾರೆ. ಹೌದು ಸೌತ್ ಇಂಡಸ್ಟ್ರಿಯ ಮಾದಕ ಬೆಡಗಿ ಅಮಲಾ ಪೌಲ್  ಹೀಗೆ ಸುದ್ದಿಯಾದ ನಟಿ.

ad

ಇತ್ತೀಚಿಗಷ್ಟೇ ಅಮಲಾ ಪೌಲ್ ಮಾಜಿ ಪತಿ  ವಿಜಯ್​ ಹೊಸ ಜೀವನಕ್ಕೆ ಕಾಲಿರಿಸಿದ್ದರು. ಅವರಿಗೆ ವಿಷ್ ಮಾಡುವ ಮೂಲಕ  ಅಚ್ಚರಿ ಮೂಡಿಸಿದ್ದ ಬೆಡಗಿ ನನ್ನ ಮಾಜಿ ಪತಿ ವಿಜಯ್​ ತುಂಬ ಒಳ್ಳೆಯವರು. ಅವರಿಗೆ ಒಳ್ಳೆಯದಾಗಲಿ ಎಂದಿದ್ದರು.

ಅದರ ಬೆನ್ನಲ್ಲೇ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಹೇಳಿಕೊಂಡಿರುವ ಅಮಲಾ ಪೌಲ್,  ನಾನು ತುಂಬ ದಿನಗಳಿಂದ ಒಬ್ಬ ವ್ಯಕ್ತಿಯ ಜೊತೆ ಪ್ರೀತಿಯಲ್ಲಿದ್ದೇನೆ. ಆದರೆ ಅವರು ಸಿನಿಮಾರಂಗದಲ್ಲಿ ಇಲ್ಲ. ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡ್ತಿದ್ದಾರೆ. ಸದ್ಯಕ್ಕೆ ಮದುವೆ ಬಗ್ಗೆ ನಾನು ಯೋಚಿಸಿಲ್ಲ. ಕೆರಿಯರ್ ಬಗ್ಗೆ ಮಾತ್ರ ಫೋಕಸ್ ಮಾಡ್ತಿದ್ದೇನೆ. ನನ್ನ ಲೈಫ್ ಈಗ ತುಂಬಾ ಚೆನ್ನಾಗಿದೆ  ಎಂದಿದ್ದಾರೆ.

ಇನ್ನು ಅಮಲಾ ಪೌಲ್ ಅವರ ಮಾಜಿ ಪತಿ ನಿರ್ದೇಶಕ ಎ.ಎಲ್ ವಿಜಯ್ ಮರು ವಿವಾಹವಾಗಿದ್ದು . ಚೆನ್ನೈ ಮೂಲದ ವೈದ್ಯೆಯೊಬ್ಬರ ಕೈಹಿಡಿದ ವಿಜಯ್,  ಹೊಸ ಜೀವನ ಅರಂಭಿಸಿದ್ದು ವಿಜಯ್ ಕುಟುಂಬಕ್ಕೆ ಖುಷಿ ತಂದಿದೆ. ನಿರ್ದೇಶಕ ವಿಜಯ್ ಹಾಗೂ ಅಮಲಾ ಪೌಲ್ 2014 ರಲ್ಲಿ ಪ್ರೀತಿಸಿ ಮದುವೆಯಾದರು. ಮೂರು ವರ್ಷ ಸಂಸಾರ ಮಾಡಿ 2017 ರಲ್ಲಿ ಡಿವೋರ್ಸ್ ಪಡೆದುಕೊಂಡರು. ನಂತರ ಅಮಲಾ ಸಿನಿಮಾಗಳಲ್ಲಿ ಬ್ಯುಸಿಯಾದರು. ಈಗ ಲವ್ವಲ್ಲಿ ಬಿದ್ದಿದ್ದು ಎರಡನೇ ಮದುವೆಯಾಗಲು ರೆಡಿಯಾಗಿದ್ದಾರೆ.

ಸದ್ಯ ಅಮಲಾ ಪೌಲ್ ಅಡೈ ಎಂಬ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರದ ಪೋಸ್ಟರ್ ಮತ್ತು ಟೀಸರ್ ಬಿಡುಗಡೆಯಾಗಿದ್ದು ಅಮಲಾ ಪೌಲ್ ಭಾರಿ ಸದ್ದು ಮಾಡಿದ್ದಾರೆ

 

Sponsored :


9900071610