ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ! ಕನ್ನಡಿಗ ಐಪಿಎಸ್ ಅಧಿಕಾರಿಗೆ ಕೇಂದ್ರದಿಂದ ಪದಕ ಘೋಷಣೆ!!

1053
9900071610

ಇಡಿ ರಾಜ್ಯವನ್ನೆ ಬೆಚ್ಚಿಬೀಳಿಸಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ತನಿಖೆ ಮಾಡಿ ಬೇದಿಸಿದ್ದಕ್ಕಾಗಿ,ಕನ್ನಡಿಗ ಐಪಿಎಸ್ ಅಧಿಕಾರಿ ಎಮ್ ಎನ್ ಅನುಚೇತ್ ಅವರಿಗೆ ಕೇಂದ್ರ ಸರ್ಕಾರ 2019 ನೇ ಸಾಲಿನ ಯೂನಿಯನ್ ಹೋಮ್ ಮಿನಿಸ್ಟರ್ ಪದಕ  ಲಭಿಸಿದೆ.

ad

ತ್ವರಿತಗತಿಯ ತನಿಖೆ ಮಾಡಿದವರಿಗೆ ಕೇಂದ್ರ ಸರ್ಕಾರ ಯುನಿಯನ್ ಹೋಮ್ ಮಿನಿಸ್ಟರ್ ಪದಕ ನೀಡಿ ಗೌರವಿಸುತ್ತದೆ.ಈ ಬಾರಿ ಪದಕ ಪಟ್ಟಿಯಲ್ಲಿ ಕರ್ನಾಟಕದ ಆರು ಪೊಲೀಸ್ ಅಧಿಕಾರಿಗಳ ಹೆಸರಿದೆ.ಎಸ್ ಐಟಿ ತನಿಖಾಧಿಕಾರಿಯಾಗಿದ್ದ ಎಮ್ ಎನ್ ಅನುಚೇತ್,Dyspಗಳಾದ ರಂಗಪ್ಪ.ಕೆ ರವಿಶಂಕರ್ ಸೇರಿ ನಾಲ್ವರಿಗೆ ಕೇಂದ್ರ ಸರ್ಕಾರ ಪದಕ ಘೋಷಣೆ ಮಾಡಿದೆ.
ಗೌರಿ ಹತ್ಯೆ ಬೇದಿಸಿದ್ದಕ್ಕಾಗಿ ಎಸ್ ಐಟಿ ತಂಡಕ್ಕೆ ರಾಜ್ಯ ಸರ್ಕಾರದಿಂದಲೂ 25 ಲಕ್ಷ ಬಹುಮಾನ ಘೋಷಣೆ.


ಸೆಪ್ಟೆಂಬರ್ 05,2017 ರಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ರನ್ನು ಅವರ ಮನೆ ಎದುರೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.ಈ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ಎಸ್ ಐ ಟಿ ತಂಡ ರಚಿಸಿತ್ತು,ಅದರಲ್ಲಿ ಬಿಕೆ ಸಿಂಗ್ ನೇತೃತ್ವ ವಹಿಸಿದ್ರೆ,ಅನುಚೇತ್ ರನ್ನು ತನಿಖೆ ಮುಖ್ಯಸ್ತರಾಗಿ ನೇಮಿಸಲಾಗಿತ್ತು.ಈ ಪ್ರಕರಣ ವನ್ನು ಎಸ್ಬ ಐ ಟಿ ತ್ವರಿತ ಗತಿಯಲ್ಲಿ ಬೇಧಿಸಿ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿತ್ತು.ಇದನ್ನು ಗಮನಿಸಿ ಅನುಚೇತ್ ಅವರಿಗೆ ಕೇಂದ್ರ ಪದಕ ಘೋಷಣೆ ಮಾಡಿದೆ,ಪದಕವನ್ನು ಇದೇ ಸ್ವಾತಂತ್ರ್ಯ ದಿನದಂದು ವೀಡಲಾಗುವುದು.

Sponsored :


9900071610