ರಾಜಮಾತೆ-ಯದುವೀರ್ ನಡುವೆ ಮುನಿಸು- ಅರಮನೆಯನ್ನು ಬಿಡದ ಅತ್ತೆ-ಸೊಸೆ ಜಗಳ!

18371
Mysuru: Angry Between Pramoda Devi and Yaduveer.

ಇದು ಸಾಂಸ್ಕೃತಿಕ ನಗರಿ ಮೈಸೂರಿನ ಜನರಿಗೆ ಶಾಕ್​​ ಕೊಡೋ ಸುದ್ದಿ. ಯದು ರಾಜಮನೆತನದಲ್ಲಿ ಬಿರುಕು ಮೂಡಿದೆ.

 

ad

ಪ್ರಮೋದಾ ದೇವಿ-ಯಧುವೀರ್​​ ಸಂಬಂಧ ಹಳಸಿದೆ ಅನ್ನೋ ಮಾತು ಹರಿದಾಡ್ತಿದೆ. ಅರಮನೆಯಲ್ಲೂ ಅತ್ತೆ-ಸೊಸೆ ಜಗಳ ಶುರುವಾಗಿದೆ. ಇದ್ರಿಂದ ರಾಜಮನೆತನ ಬಡವಾಗಿದೆ. ಫೆಬ್ರವರಿ 19ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಶ್ರೀಕಂಠದತ್ತ ನರಸಿಂಹರಾಜ್​​ ಒಡೆಯರ್ ಅವರ​ 4ನೇ ವರ್ಷದ ಜಯಂತಿ ಹಾಗೂ ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್​ ಪ್ರತಿಷ್ಠಾನ ಉದ್ಘಾಟನೆ ಸಮಾರಂಭ ಈ ಮುನಿಸಿಗೆ ಸಾಕ್ಷಿಯಾಗಿದೆ.  ಇಷ್ಟು ದೊಡ್ಡ ಕಾರ್ಯಕ್ರಮವಾದ್ರೂ ಅಂದು ಮಹಾರಾಜ ಯಧುವೀರ್​​ ಕೃಷ್ಣದತ್ತ ಚಾಮರಾಜ ಒಡೆಯರ್​​​ ಅವ್ರು ಗೈರಾಗಿದ್ದಾರೆ. ವಿಚಿತ್ರ ಅಂದ್ರೆ ಅದೇ ದಿನ ಮಗನ ನಾಮಕರಣ ಸಮಾರಂಭದ ಮುಹೂರ್ತವನ್ನು ಯಧುವೀರ್​​ ಇಟ್ಟಿದ್ದರು.

 

ಹಿತೈಷಿಗಳು ಬುದ್ಧಿವಾದ ಹೇಳಿದ್ದರಿಂದ ಕೊನೆ ಘಳಿಗೆಯಲ್ಲಿ ನಾಮಕರಣ ರದ್ದಾಗಿದೆ. ಫೆಬ್ರವರಿ 25 ಅಥವಾ ಮಾರ್ಚ್​ 8ರಂದು ನಾಮಕರಣ ಕಾರ್ಯಕ್ರಮ ನೆರವೇರಿಸುವ ಸಾಧ್ಯತೆ ಇದೆ. ಕಳೆದ ನಾಲ್ಕೈದು ತಿಂಗಳಿಂದ್ಲೇ ಪ್ರಮೋದಾದೇವಿ-ಯದುವೀರ್​​ ನಡುವೆ ಬಿರುಕು ಉಂಟಾಗಿತ್ತು ಎನ್ನಲಾಗಿದೆ. ತ್ರಿಷಿಕಾ ಗರ್ಭವತಿಯಾದ ದಿನದಿಂದಲೂ ಈ ತಿಕ್ಕಾಟ ಉಂಟಾಗಿತ್ತು. ಯಧುವೀರ್ ತನ್ನ​​​ ಪತ್ನಿ ಮಾತನ್ನೇ ಹೆಚ್ಚು ಕೇಳ್ತಾನೆ ಅಂತಾ ತಾಯಿ ಪ್ರಮೋದಾ ಬೇಸರ ಮಾಡಿಕೊಂಡಿದ್ದಾರೆ. ಮಾತೋಶ್ರೀ ಒಡಲಿನ ಮಾತಿಗೆ ಯಧುವೀರ್​​ ಕಿವಿಗೊಡ್ತಿಲ್ಲ ಅನ್ನೋ ಆರೋಪ ಕೇಳಿ ಬರ್ತಿದೆ.  ತಾಯಿ-ಮಗ ಮುಖ ನೋಡಿಕೊಳ್ಳದ ಸ್ಥಿತಿಗೂ ಇಬ್ಬರು ತಲುಪಿದ್ದರೆಂದು ಮೂಲಗಳು ಹೇಳ್ತಿವೆ. ಇಬ್ಬರ ನಡುವೆ ಮಾತುಕತೆ ನಿಂತು ತಿಂಗಳೇ ಕಳೆದಿವೆ ಎನ್ನುತ್ತಿವೆ ಅರಮನೆ ಮೂಲಗಳು. ಇದ್ರಿಂದ ನೊಂದು ಆಸ್ತಿಯನ್ನು ಯದುವೀರ್​ ಬದಲಿಗೆ ತನ್ನ ಪತಿ ಹೆಸರಿನ ಪ್ರತಿಷ್ಠಾನಕ್ಕೆ​ ಬರೆಯಲು ಪ್ರಮೋದಾದೇವಿ ಮುಂದಾಗಿದ್ದಾರೆ. ತನ್ನ ಹೆಸರು ಮತ್ತು ಸುಪರ್ದಿಗೆ ಸೇರಿದ ಚಿರ-ಸ್ಥಿರ ಆಸ್ತಿಯನ್ನು ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್​​ ಪ್ರತಿಷ್ಠಾನಕ್ಕೆ ಬರೆಯಲು ಪ್ರಮೋದಾ ಮುಂದಾಗಿದ್ದಾರೆ ಎನ್ನಲಾಗ್ತಿದೆ.

Sponsored :

Related Articles