ಅಭಿಮಾನಿಯ ಎದೆ,ಬಲಗೈ ಮೇಲೆ ಮೂಡಿಬಂತು ಸುಧಾಮೂರ್ತಿಯವರ ಚಿತ್ರ! ಮೈಸೂರಿನಲ್ಲಿದ್ದಾರೆ ಅಮ್ಮನ ಕಟ್ಟಾ ಅಭಿಮಾನಿ!!

443

ಸರಳ, ಭಾವಜೀವಿ ನೊಂದವರ ಪಾಲಿನ ಆಶಾಕಿರಣವಾಗಿರುವ ಇನ್ಫೋಸಿಸ್ ಒಡತಿ ಸುಧಾಮೂರ್ತಿ, ಕಷ್ಟ ಎಂದು ಬಂದವರ ಸಹಾಯಕ್ಕೆ ಸದಾ ಮುಂಚೂಣಿಯಲ್ಲಿರುತ್ತಾರೆ. ಇವರ ಹೃದಯ ವೈಶಾಲ್ಯತೆಗೆ ಇತ್ತೀಚಿಗೆ ಅವರು ಪ್ರವಾಹ ಸಂತ್ರಸ್ಥರಿಗೆ ನೀಡಿದ ಸಹಾಯಹಸ್ತವೇ ಸಾಕ್ಷಿ.

ad

ಹೌದು ಕರ್ನಾಟಕದಲ್ಲಿ ಕರುಣಾಮಯಿ ತಾಯಿ ಎಂದೇ ಪ್ರಖ್ಯಾತಿ ಹೊಂದಿರುವ ಸುಧಾಮೂರ್ತಿಯವರು ನಾಡು-ನುಡಿಗಾಗಿ ಸದಾ ಬೆಂಬಲವಾಗಿ ನಿಂತಿದ್ದಾರೆ. ಪ್ರವಾಹ ಸಂತ್ರಸ್ತರಿಗೆ ಕೋಟ್ಯಾಂತರ ರೂಪಾಯಿ ದಾನ ಮಾಡಿದ ಸುಧಾಮೂರ್ತಿಯವರ ಮೇಲಿನ ಅಭಿಮಾನದಿಂದ ಮೈಸೂರಿನ ವ್ಯಕ್ತಿಯೊಬ್ಬ ಇನ್ಫೋಸಿಸ್ ಅಧ್ಯಕ್ಷೆ ಡಾ.ಸುಧಾಮೂರ್ತಿಯವರ ಭಾವಚಿತ್ರವನ್ನ ತನ್ನ ಬಲಗೈ ಮತ್ತು ಎದೆಯ ಮೇಲೆ ಟ್ಯಾಟೋ ಹಾಕಿಸಿಕೊಳ್ಳುವುದರ ಮೂಲಕ ಅಭಿಮಾನ ಮೆರೆದಿದ್ದಾನೆ.

ಎದೆಯ ಮೇಲೆ ಸುಧಾಮೂರ್ತಿಯವರ ಭಾವಚಿತ್ರವಿರುವಂತ ದೊಡ್ಡದಾದ ಟ್ಯಾಟೂ ಹಾಗೂ ಬಲಗೈ ಮೇಲೊಂದು ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಸುಧಾಮೂರ್ತಿಯವರಿಗೆ ಗೌರವ ಸಲ್ಲಿಸಿರೋದಲ್ಲದೇ ಅವರ ಅಭಿಮಾನಿ ಎಂಬುದು ಸಾಬೀತಪಡಿಸಿದ್ದಾನೆ. ಮೈಸೂರಿನ ಜೆಸಿ ನಗರದ ನಿವಾಸಿಯಾಗಿರುವ ಲೋಕೇಶ್​​ ಎಂಬುವವರೇ ಸುಧಾಮೂರ್ತಿಯವರ ಅಭಿಮಾನಿ.

ಈತ ಸುಧಾಮೂರ್ತಿ ಯವರ ಮೇಲಿನ ಅಭಿಮಾನದಿಂದ ಅವರಿಗೆ ಶುಭವಾಗಲಿ ಅಂತ ಚಾಮುಂಡಿ ಬೆಟ್ಟಕ್ಕೆ ಬರಿಗಾಲಲ್ಲಿ ಹತ್ತಿ ವಿಶೇಷ ಪೂಜೆಯನ್ನೂ ಮಾಡಿಸಿದ್ದು, ಅವರ ಭಾವಚಿತ್ರವನ್ನ ಎದೆಯಲ್ಲಿ ಮತ್ತು ತನ್ನ ಬಲಗೈ ಮೇಲೆ ಟ್ಯಾಟೂ ರೂಪದಲ್ಲಿ ಹಾಕಿಸಿಕೊಂಡಿದ್ದಾನೆ.

ನಾನು ಅತಿಯಾಗಿ ಪ್ರೀತಿಸುವ ನನ್ನ ಅಮ್ಮ ನಂತೆಯೇ ಸುಧಾಮೂರ್ತಿಯವರನ್ನ ಪ್ರೀತಿಸ್ತಿನಿ. ಅವರೇ ನನಗೆ ಸ್ಫೂರ್ತಿ. ಅವರಿಗಿರುವ ಸಮಾಜ ಕಾಳಜಿ, ಪ್ರತಿಯೊಬ್ಬರನ್ನು ಪ್ರೀತಿಸುವ ಗುಣ, ಕಷ್ಟದಲ್ಲಿರುವರಿಗೆ ನೆರವಾಗುವುದು, ಅದ್ರಲ್ಲೂ ಸಾವಿರಾರು ಕೋಟಿಯ ಒಡತಿಯಾಗಿದ್ರೂ ಕೂಡ ಅವರ ಸರಳತೆ ಇದೆಲ್ಲಾ ನನಗೆ ಸ್ಫೂರ್ತಿ ಎಂದು ಲೋಕೇಶ್ ಮಮಕಾರದ ಮೂರ್ತಿಯಾಗಿರುವ ಸುಧಾಮೂರ್ತಿರವರ ಮೇಲೇ ಅಭಿಮಾನವನ್ನ ತಿಳಿಸಿದ್ದಾನೆ

Sponsored :

Related Articles