ಆಫ್ರಿಕಾನೆಲದಲ್ಲಿ ಮೈಸೂರು ಹುಡುಗನ ಸಾಧನೆ!

534
9900071610

 

ad

ಭಾರತೀಯ ಯುವಕನೊರ್ವ ಪ್ಯಾನ್ ಆಫ್ರಿಕಾ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡು ಸಾಧನೆಗೈಯ್ದಿದ್ದಾನೆ. ಮೈಸೂರು ಮೂ;ಕ ಅಬ್ದುಲ್​ ವಾಹಿದ್ ತನ್ವೀರ್ ಸಾಧನೆ ಮಾಡಿದ ಯುವಕ. ಈತ ಆಫ್ರಿಕಾ ಖಂಡದಲ್ಲಿ ನಡೆದ ಬೈಕ್ ರ್ಯಾಲಿಯಲ್ಲಿ ಮೊದಲ ಸ್ಥಾನ ಗೆದ್ದು ದೇಶಕ್ಕೆ ಹಾಗೂ ಕರ್ನಾಟಕಕ್ಕೆ ಗೌರವ ತಂದಿತ್ತಿದ್ದಾನೆ.

 

ಈ ಸಾಧನೆ ಬಳಿಕ ಹುಟ್ಟೂರಿಗೆ ಹಿಂತಿರುಗಿದ ಅಬ್ದುಲ್​ ಗೆ ಮೈಸೂರಿನಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು. ಆತನ ಕುಟುಂಬಸ್ಥರು, ಸ್ನೇಹಿತರು ಸ್ವಾಗತಿಸಿ ಬರಮಾಡಿಕೊಂಡರು.ಟಿ.ವಿ.ಎಸ್.ರೇಸಿಂಗ್ ಕಂಪನಿ ಸಹಭಾಗಿತ್ವದಡಿ ಈ ಸ್ಪರ್ಧೆಗೆ ತನ್ವೀರ್ ಭಾಗವಹಿಸಿದ್ದ.
ಅಲ್ಲದೇ ಈತ ಆಫ್ರಿಕಾ ಖಂಡದ ಬೈಕ್ ರೇಸ್ ನಲ್ಲಿ ಭಾಗಿಯಾಗಿದ್ದ ಏಕೈಕ ಭಾರತೀಯ ರೇಸರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಸುಮಾರು 50 ಸ್ಪರ್ಧಿಗಳಿದ್ದ ಈ ರೇಸ್ ನಲ್ಲಿ ಮೊದಲ ಸ್ಥಾನ ಪಡೆದ ಯುವಕ ಆಫ್ರಿಕಾ ನೆಲದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದಾನೆ.

Sponsored :


9900071610