ನಾಗಮಂಗಲ ಪೋಲೀಸರ ಭರ್ಜರಿ ಬೇಟೆ!! ಈ ಖತರ್ನಾಕ ಕಳ್ಳರು ಸಿಕ್ಕಿದ್ದು ಹೇಗೆ ನೋಡಿ.. ಸಿಕ್ಕ ವಸ್ತುಗಳ್ಯಾವವು?

5946

ಭರ್ಜರಿ ಕಾರ್ಯಾಚರಣೆ ನಡೆಸಿರೋ ಮಂಡ್ಯ ಜಿಲ್ಲೆಯ ನಾಗಮಂಗಲ ಪೊಲೀಸ್ರು, ಕೊಲೆ, ಸುಲಿಗೆ, ಮನೆ ಕಳವು, ವಾಹನ ಕಳ್ಳತನ ಸೇರಿದಂತೆ ಸುಮಾರು 23 ಪ್ರಕರಣಗಳಲ್ಲಿ ಭಾಗಿಯಾಗಿದ್ದ 9 ಮಂದಿಯನ್ನ ಬಂಧಿಸಿದ್ದಾರೆ. ಬಂಧಿತರಿಂದ 25,97,200 ರೂಪಾಯಿ ಮೌಲ್ಯದ ಚಿನ್ನ ಬೆಳ್ಳಿ, ವಿವಿಧ ಮಾದರಿ ವಾಹನಗಳನ್ನ ವಶಕ್ಕೆ ಪಡಿಸಿಕೊಂಡಿದ್ದಾರೆ.

ad

ಇದ್ರಲ್ಲಿ 350 ಗ್ರಾಂ ಚಿನ್ನದ ಆಭರಣಗಳು, 1ಕೆಜಿ 560ಗ್ರಾಂ ತೂಕದ ಬೆಳ್ಳಿ ಪದಾರ್ಥಗಳು, 1 ಸ್ಕಾರ್ಪಿಯೋ ಕಾರು, ಟ್ರ್ಯಾಕ್ಟರ್​ ಟ್ರೈಲರ್​, 4 ಆಟೋಗಳು, 7 ಬೈಕ್​ಗಳನ್ನು ವಶಕ್ಕೆ ಪಡೆದಿದ್ದಾರೆ. ಮಾರ್ಚ್​ 2ರಂದು ನಾಗಮಂಗಲ ತಾಲೂಕಿನ ತಾವರೇಕೆರೆ ಬಳಿ ಗಿರೀಶ್​ ಎಂಬ ವ್ಯಕ್ತಿಯ ಕೊಲೆಯಾಗಿತ್ತು. ಈ ಪ್ರಕರಣ ಬೆನ್ನತ್ತಿ ಹೊರಟ ನಾಗಮಂಗಲ ಸಿಪಿಐ ಡಿ.ಪಿ.ಧನರಾಜ್​ ನೇತೃತ್ವದ ಪೊಲೀಸ್ರ ತಂಡ, ನಾಗಮಂಗಲ ಪಟ್ಟಣದವ್ರೇ ಆದ ರಾಮ್​ಕುಮಾರ್​ ಅಲಿಯಾಸ್​ ರಾಮ, ಉದಯ್​, ಯಶವಂತ ಅಲಿಯಾಸ್ ಸಫಾರಿ, ಅಭಿ ಅಲಿಯಾಸ್​ ಅಭಿಷೇಕ್​, ಪ್ರದೀಪ ಅಲಿಯಾಸ್ ಪುಟ್ಟ, ವಿಶ್ವಾಸ್​ ಅಲಿಯಾಸ್​ ಮಿಲ್ಲು, ನಾಗರಾಜ ಅಲಿಯಾಸ್​ ಮೂಳೆ, ಶಿವಕುಮಾರ ಅಲಿಯಾಸ್​ ಪಾನಿಪೂರಿ ಕುಮಾರ, ನರಸಿಂಹಯ್ಯ ಅಲಿಯಾಸ್​ ದೇವರಾಜ, ಗೆಂಡೆ ಎಂಬುವವರನ್ನ ಬಂಧಿಸಿದ್ದಾರೆ. ಬಂಧಿಸಿ ವಿಚಾರಣೆಗೊಳಪಡಿಸಿದ ವೇಳೆ ಕೊಲೆಯಷ್ಟೇ ಅಲ್ಲದೆ, ಸುಲಿಗೆ, ಮನೆ ಕಳವು, ವಾಹನ ಕಳ್ಳತನ ಸೇರಿದಂತೆ ಸುಮಾರು 23 ಪ್ರಕರಣಗಳಲ್ಲಿ ಭಾಗಿಯಾಗಿರೋದಾಗಿ ತಪ್ಪೊಪ್ಪಿಕೊಂಡಿದ್ದಾರೆ ಅಂತಾ ಮಂಡ್ಯ ಎಸ್ಪಿ ಜಿ. ರಾಧಿಕಾ ತಿಳಿಸಿದ್ರು.

ವರದಿ: ಡಿ ಶಶಿಕುಮಾರ್. ಬಿಟಿವಿ ಮಂಡ್ಯ .

Sponsored :

Related Articles