ನಲಪಾಡ್ ಜಾಮೀನು ಅರ್ಜಿ ವಾದ ವಿವಾದ ಹೇಗಿತ್ತು ಗೊತ್ತಾ ? ಹ್ಯಾರಿಸ್ ಪುತ್ರನ ಬಗ್ಗೆ ಜಡ್ಜ್ ಹೇಳಿದ್ದೇನು ?

2336
Nalapad Issue: High Court Reserved its Verdict on 14th March
Nalapad Issue: High Court Reserved its Verdict on 14th March

ಯುಬಿ ಸಿಟಿಯ ಘರ್ಜಿ ಪಬ್ ನಲ್ಲಿ ವಿದ್ವತ್ ಗೆ ಹಲ್ಲೆ ನಡೆಸಿದ ಸಂಬಂಧ ಬಂಧನದಲ್ಲಿರುವ ಶಾಸಕರ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಜಾಮೀನು ಅರ್ಜಿ ಇಂದು ನ್ಯಾಯಾಲಯದಲ್ಲಿ ವಿಚಾರಣೆಗೆ ಬಂತು. ಈ ಸಂಧರ್ಭದಲ್ಲಿ ನಡೆದ ವಾದ ವಿವಾದದ ಕುತೂಹಲಕರವಾದ ಸಾರಾಂಶ ಇಲ್ಲಿದೆ :

ad

ನಲಪ್ಪಾಡ್ ಪರ ವಾದ ಮಾಡುತ್ತಿರುವ ವಕೀಲ ಸಿವಿ ನಾಗೇಶ್ : ಈ ಪ್ರಕರಣದಲ್ಲಿ ದೂರು ಪ್ರತಿದೂರು ದಾಖಲಾಗಿದೆ
ಫರ್ಜಿ ಕೆಫೆಯಲ್ಲಿ ನಡೆದಿರುವ ಘಟನೆ ಉದ್ದೇಶ ಪೂರ್ವಕವಾಗಿ ನಡೆದಿಲ್ಲ
ಸಡನ್ ಪ್ರವೊಕೆಷನ್ ನಿಂದ ನಡೆದಿರೋದು
ವಿದ್ವತ್ ಹಾಗೂ ನಲಪಾಡ್ ಇಬ್ಬರಿಗೂ ಪರಿಚಯವಿಲ್ಲ
ಪಾರ್ಟಿಯಲ್ಲಿ ಎಲ್ಲರೂ ಇದ್ದರು. ಇದು ಏಕಾಏಕಿ ನಡೆದಿರುವ ಗಲಾಟೆ. ವಿದ್ಯುತ್ ಮೇಲೆ ನಲಪಾಡ್ ಹಲ್ಲೆ ಮಾಡಿಲ್ಲ.

ನ್ಯಾಯಮೂರ್ತಿ :- ನಾನೇ ಖುದ್ದು ಸಿಸಿಟಿವಿ ನೋಡಿದ್ದೇನೆ. ನಲಪಾಡ್ ಹಲ್ಲೆ ಮಾಡಿರೋದು ಖಚಿತ. ಅದನ್ನು ಬಿಟ್ಟು ವಾದ ಮಂಡಿಸಿ ವಕೀಲ ಸಿ ವಿ ನಾಗೇಶ್ : ವಿದ್ವತ್ ‌ಮೇಲಿನ‌ ಹಲ್ಲೆ ಪ್ರಿ ಪ್ಲಾನ್ ಅಲ್ಲ. ಹಲ್ಲೆ ನಡೆಸುವ ಯಾವುದೇ ಉದ್ದೇಶ ನಲಪಾಡ್ ಗೆ ಇರಲಿಲ್ಲ. ವಿದ್ವತ್ ಅಡ್ಮಿಟ್ ಆದಾಗ ಮೊದಲು‌‌ ನೋಡಿದ್ದು ಡಾ.ಆನಂದ್. ನಲಪಾಡ್ ಅಂಡ್ ಗ್ಯಾಂಗ್ ಯಾವುದೇ ಆಯುಧ ಹೊಂದಿರಲಿಲ್ಲ. ವಕೀಲ ಸಿ ವಿ ನಾಗೇಶ್ : ಹಲ್ಲೆ ನಡೆಸೋ ಉದ್ದೇಶ ಇದ್ದಿದ್ದರೆ ಆಯುಧ ‌ಹಿಡಿದುಕೊಂಡು ಹೋಗುತ್ತಿದ್ದರು. ಪ್ರಕರಣದ ಬಗ್ಗೆ‌ ಮೂರು‌ ಮೆಡಿಕಲ್ ರಿಪೋರ್ಟ್ ‌ನೀಡಲಾಗಿದೆ. ಆನಂದ್ ಸಹ‌ಮೊದಲ ದಿನವೇ ಇದು ಸೀರಿಯಸ್ ಇಂಜ್ಯುರಿಸ್‌ ಹೇಳಿದ್ರು.

ಹಲ್ಲೆ ನಡೆದ ಸ್ಥಳದ ಸಿಸಿ ಕ್ಯಾಮರಾ ದೃಶ್ಯಗಳನ್ನು ಸಿವಿಲ್ ಕೋರ್ಟ್ ಗೆ ನೇರವಾಗಿ ನಿಮಗೆ ( ನ್ಯಾಯಮೂರ್ತಿ) ತೋರಿಸಿದ್ದಾರೆ. ನಮಗೂ ಸಿಸಿಟಿವಿ ನೀಡದೇ ಇರೋದ್ರಿಂದ ಸಿಸಿಟಿವಿಯ ಅಸಲಿಯತ್ತಿನ ಬಗ್ಗೆ ಅನುಮಾನ ಹುಟ್ಟು ಹಾಕಿದೆ. ಪ್ರಕರಣ ಆರಂಭದಲ್ಲಿಯೇ ಎಸ್ಪಿಪಿ ಮಾಡಲಾಗಿದೆ. ಸರ್ಕಾರ ಆಗಲಿ ಅಥವಾ ಆರೋಪಿ ತಂದೆ ಯಾವುದೇ ಪ್ರಭಾವ ಬೀರಿಲ್ಲ. ನಲಪಾಡ್ ನೇರವಾಗಿ ವಿದ್ವತ್ ಗೆ ಹಲ್ಲೆ ಮಾಡಿಲ್ಲ – ನಲಪಾಡ್ ನ ಸಹಚರರು ಹಲ್ಲೆ ಮಾಡಿದ್ದಾರೆಯಷ್ಟೇ ನ್ಯಾಯಮೂರ್ತಿ : ನಾಲಪಾಡ್ ಹಲ್ಲೆ ಮಾಡಿಲ್ಲವೆಂದು ಹೇಳುವುದನ್ನು ಬಿಡಿ. ಬೇರೆ ವಿಚಾರ ಹೇಳಿ

ವಕೀಲ ಸಿ ವಿ ನಾಗೇಶ್ : ಕೇಸ್ ಮೇಲೆ ಶಾಸಕ ‌ಹ್ಯಾರಿಸ್ ಫ್ಯಾಮಿಲಿ ಪ್ರಭಾವ ಬೀರುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಆದ್ರೆ ಎಸ್ಪಿಪಿ ನೇಮಕ ಮಾಡಿರುವುದು ರಾಜ್ಯ ಸರ್ಕಾರವೇ. ಇದ್ರಿಂದ್ಲೇ ಗೊತ್ತಾಗುತ್ತೆ ಆರೋಪಿಯನ್ನ ಉಳಿಸುವ ಯಾವ ಪ್ರಯತ್ನವೂ ನಡೆಯುತ್ತಿಲ್ಲ. ಪಂಚನಾಮೆಯಲ್ಲಿ ಏನು ಸಿಕ್ಕಿಲ್ಲ – ಕೇಸ್ ವೈಭವಿಕರಿಸಲದೇ ಇಲ್ದೇ ಇರೋ ವೆಪನ್ಸ್ ಹೆಸರೆಲ್ಲ ಹೇಳುತ್ತಿದ್ದಾರೆ – ಇದು ಸರಿಯಲ್ಲ. ಎರಡು ಕಡೆ ವಕೀಲರ ವಾದ ಆಲಿಸಿದ ನ್ಯಾಯಪೀಠ ತೀರ್ಪನ್ನು ಬುಧವಾರಕ್ಕೆ ಕಾಯ್ದಿರಿಸಿದೆ

Sponsored :

Related Articles