ನಾನಾ ಪಾಟ್ನೇಕರ್​ ಮೀಟೂ ಪ್ರಕರಣ! ಬಿ ರಿಪೋರ್ಟ್ ದಾಖಲಿಸಿದ ಪೊಲೀಸರು! ನ್ಯಾಯಾಲಯದ ಮೊರೆ ಹೋದ ತನುಶ್ರೀ!!

664

ಬಾಲಿವುಡ್​​ನಲ್ಲಿ ಸಂಚಲನ ಮೂಡಿಸಿದ್ದ ಮೊದಲ ಮೀಟೂ ಪ್ರಕರಣದಲ್ಲಿ ತನಿಖಾಧಿಖಾರಿಗಳು ಬಿ ರಿಪೋರ್ಟ್​ ಸಲ್ಲಿಸಿದ್ದಾರೆ. ಬಾಲಿವುಡ್ ನಟ ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮೀಟೂ ಅಭಿಯಾನದಡಿ ಲೈಂಗಿಕ ಕಿರುಕುಳದ ಪ್ರಕರಣ ಸಂಬಂಧಿಸಿದಂತೆ ಪೊಲೀಸರು ಬಿ- ರಿಪೋರ್ಟ್ ಸಲ್ಲಿಸಿದ್ದರು. ಆದರೆ ಪೊಲೀಸರ ಕ್ರಮದ ವಿರುದ್ಧ ನಟಿ ತನುಶ್ರೀ ಬಾಂಬೆ ಹೈಕೋರ್ಟ್​ ಮೊರೆ ಹೋಗಿದ್ದಾರೆ.

ad

ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ತನುಶ್ರೀ ದತ್ತಾ ಪರ ವಕೀಲ ನಿತಿನ್ ಸತ್ಪುತೆ,  ತನಿಖೆಯ ರಿಪೋರ್ಟ್ ಬಗ್ಗೆ ನಮಗೆ ಓಸ್ವಿವರ್ ಪೊಲೀಸ್ ಠಾಣೆಯಿಂದ ಯಾವುದೇ ಸರಿಯಾದ ಮಾಹಿತಿ ದೊರೆತಿಲ್ಲ. ಪೊಲೀಸರು ಬಿ ಅಥವಾ ಸಿ ಸಮರಿ ದಾಖಲಿಸಿಕೊಂಡರೆ ಅದು ಅಂತಿಮವಾಗುವುದಿಲ್ಲ. ಇದನ್ನು ನಾವು ನ್ಯಾಯಲಯದಲ್ಲಿ ಕೂಡ ನಿರಾಕರಿಸಬಹುದು. ಕೋರ್ಟ್‍ನಲ್ಲಿ ವಿಚಾರಣೆ ನಡೆಸಿದ ನಂತರ ಮತ್ತೆ ನ್ಯಾಯಾಲಯ ನಿರ್ಧಾರ ಮಾಡಿದರೆ, ಈ ಪ್ರಕರಣದ ಬಗೆಗೆ ಪೊಲೀಸರು ಪುನಃ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ.

ಕಳೆದ ವರ್ಷ ಬಾಲಿವುಡ್ ನಟ ನಾನಾ ಪಾಟೇಕರ್ ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ನಟಿ ತನುಶ್ರೀ ದತ್ತಾ ಆರೋಪಿಸಿ ದೂರು ದಾಖಿಲಿಸಿದ್ದರು. ಈ ವಿಚಾರವಾಗಿ ಪೊಲೀಸರಿಗೆ ನಾನಾ ಪಾಟೇಕರ್ ವಿರುದ್ಧ ಯಾವುದೇ ಆಧಾರ ಸಿಗದ ಹಿನ್ನೆಲೆ ಪ್ರಕರಣವನ್ನು ಅರ್ಧದಲ್ಲಿಯೇ ಕೈಬಿಡಲಾಗಿತ್ತು. ಇದು ಭಾರತದಲ್ಲಿಯೇ    ಸೋಲು ಕಂಡ ಮೊದಲ ಮೀಟೂ ಪ್ರಕರಣವಾಗಿತ್ತು.

ಕಳೆದ ವರ್ಷ ಹಾರ್ನ್ ಓಕೆ ಪ್ಲೀಸ್’ ಎಂಬ ಚಿತ್ರದ ವಿಶೇಷ ಹಾಡಿನ ಶೂಟಿಂಗ್ ವೇಳೆ ಡ್ಯಾನ್ಸ್ ಮಾಡುವಾಗ ನನಗೆ ಮುಜುಗರವಾಗುವಂತ ಸ್ಟೆಪ್ಸ್ ಗಳನ್ನು ಹಾಕಲು ಒತ್ತಾಯಿಸುವ ಮೂಲಕ ತನಗೆ ನಾನಾ ಪಾಟೇಕರ್ ಲೈಂಗಿಕ ಕಿರುಕುಳ ನೀಡಿದ್ದರು ಎಂದು ನಟಿ ತನುಶ್ರೀ ದತ್ತಾ ಮೀಟೂ ಅಭಿಯಾನದ ಅಡಿಯಲ್ಲಿ ಆರೋಪಿಸಿ ದೂರು ನೀಡಿದ್ದರು. ಜೊತೆಗೆ ಈ ರೀತಿ ಕಿರುಕುಳ ನೀಡಿದ್ದಕ್ಕೆ ನಾನಾ ಪಾಟೇಕರ್ ಅವರ ಮಾತುಗಳನ್ನು ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಸಹ ಕೇಳಿರಲಿಲ್ಲ. ಇನ್ನೂ ಈ ವಿಚಾರದಿಂದಾಗಿ ಚಿತ್ರದಿಂದಲೇ ತನುಶ್ರೀ ಅವರು ಹೊರನಡೆದಿದ್ದರು. ನಂತರ ತನುಶ್ರೀ ಅವರ ಜಾಗಕ್ಕೆ ರಾಖಿ ಸಾವಂತ್ ನಾನಾ ಪಾಟೇಕರ್ ಜೊತೆ ಹಾಡಿಗೆ ಸ್ಟೆಪ್​ ಹಾಕಿದ್ದರು.

Sponsored :

Related Articles