ಲೆಫ್ಟಿನೆಂಟ್​ ಕರ್ನಲ್ ಎಂ.ಎಸ್.ಧೋನಿ ಮನೆಗೆ ಹೊಸ ಅತಿಥಿ! ಟ್ವೀಟರ್,ಇನ್​ಸ್ಟಾಗ್ರಾಂನಲ್ಲಿ ಖುಷಿ ಹಂಚಿಕೊಂಡ ಸಾಕ್ಷಿಧೋನಿ

816
9900071610

ಸದ್ಯ ಭಾರತೀಯ ಅರೆಸೇನಾ ಪಡೆಯಲ್ಲಿ ಲೆಫ್ಟಿನೆಂಟ್‌ ಕರ್ನಲ್‌ ಹುದ್ದೆ ನಿಭಾಯಿಸುತ್ತ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಮನೆಗೆ ಹೊಸ ಅತಿಥಿಯೊಬ್ಬರ ಆಗಮನವಾಗಿದೆ. ಹೌದು ಈ ವಿಚಾರವನ್ನು ಖುದ್ದು ಧೋನಿ ಪತ್ನಿ ಸಾಕ್ಷಿ ಹಂಚಿಕೊಂಡಿದ್ದು, ಸಂಭ್ರಮ ವ್ಯಕ್ತಪಡಿಸಿದ್ದಾರೆ.

ad


ಸುಂದರವಾದ ಈ ಅತಿಥಿ ಕೇವಲ ಧೋನಿ ಮಾತ್ರವಲ್ಲ ಅವರ ಪತ್ನಿ ಹಾಗೂ ಕುಟುಂಬಸ್ಥರ ಮನಸ್ಸನ್ನು ಸೆಳೆದಿದೆಯಂತೆ. ಇಷ್ಟಕ್ಕೂ ನಾವು ಯಾವ ಅತಿಥಿ ಬಗ್ಗೆ ಮಾತಾಡ್ತಾ ಇದ್ದೀವಿ ಅಂದ್ಕೊಂಡ್ರಾ, ನಾವು ಮಾತಾಡ್ತಾ ಇರೋದು ಧೋನಿ ಅವರ ಗ್ಯಾರೇಜ್​ ಸೇರಿದ ಹೊಸ ಅತಿಥಿ ಗ್ರ್ಯಾಂಡ್​ ಚರೋಕಿ ಎಸ್​ಯುವಿ ಕಾರಿನ ಬಗ್ಗೆ.


ಕಾರುಗಳ ಸಂಗ್ರಹದ ಬಗ್ಗೆ ವಿಶೇಷ ಪ್ರೀತಿ ಹೊಂದಿರುವ ಎಂ.ಎಸ್.ಧೋನಿ, ತಮ್ಮ ಗ್ಯಾರೇಜ್​ಗೆ ಹೊಸ ಅತಿಥಿ ಜೀಪ್ ಕಂಪನಿಯ ಐಷಾರಾಮಿ ಗ್ರ್ಯಾಂಡ್ ಚರೋಕಿ ಎಸ್‌ಯುವಿ ಕಾರನ್ನು ಬರಮಾಡಿಕೊಂಡಿದ್ದಾರೆ. ಹೊಸ ಕಾರಿನ ಫೋಟೋವನ್ನು ಪತ್ನಿ ಸಾಕ್ಷಿಯವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಸಂಭ್ರಮ ವ್ಯಕ್ತಪಡಿಸಿದ್ದಾರೆ.


ಸಧ್ಯ ತಮ್ಮ ಮನೆಗೆ ಬಂದಿರುವ ಹೊಸ ಅತಿಥಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಂಭ್ರಮ ಹಂಚಿಕೊಂಡಿರುವ ಸಾಕ್ಷಿ ಧೋನಿ, ಇನ್​ಸ್ಟಾಗ್ರಾಮ್​ನಲ್ಲಿ ಭಾವುಕ ಸಂದೇಶವೊಂದನ್ನು ಬರೆದುಕೊಂಡಿದ್ದು, ನಿಮ್ಮ ಮನಮೆಚ್ಚಿದ ಅತಿಥಿ ಬಂದಾಗಿದೆ ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.


ಧೋನಿ ಮನೆಗೆ ಬಂದಿರುವ ಜೀಪ್‌ ಗ್ರ್ಯಾಂಡ್ ಚೆರೋಕಿ ಎಸ್‌ಯುವಿ ಕಾರಿನ ಬೆಲೆಯು ಆನ್‌ರೋಡ್ ಬೆಲೆ 97 ಲಕ್ಷ . ಟಾಪ್ ಎಂಡ್ ಬೆಲೆ 1.40 ಕೋಟಿ . ಇದರಲ್ಲಿ ಟಾಪ್ ಎಂಡ್ ಎಸ್ಆರ್‌ಟಿ ಮಾದರಿಯು ಇದೀಗ ಧೋನಿ ಗ್ಯಾರೇಜ್‌ಗೆ ಲಗ್ಗೆಯಿಟ್ಟಿದ್ದು, ಹಲವಾರು ಅತ್ಯಾಧುನಿಕ ಡ್ರೈವ್ ಸೌಲಭ್ಯಗಳು ಈ ಕಾರಿನಲ್ಲಿವೆ.

ಇನ್ನು ಗ್ರ್ಯಾಂಡ್ ಚರೋಕಿಯ 2019ರ ಪ್ರಥಮ ಆವೃತ್ತಿಯು ಮೊದಲಿಗೆ ಧೋನಿ ಗ್ಯಾರೇಜ್ ಪಾಲಾಗಿದ್ದು, ಅಮೆರಿಕದ ಪ್ರಸಿದ್ದ ಕಾರು ನಿರ್ಮಾಣ ಸಂಸ್ಥೆ ಜೀಪ್ ನಿರ್ಮಾಣದ ವಿಶೇಷ ಕಾರುಗಳಲ್ಲಿ ಇದು ಕೂಡಾ ಒಂದಾಗಿದೆ. 2017ರಿಂದಲೇ ಭಾರತದಲ್ಲಿ ಮಾರಾಟಕ್ಕೆ ಲಭ್ಯವಾಗಿರುವ ಗ್ರ್ಯಾಂಡ್ ಚರೋಕಿ ಆಫ್ ರೋಡ್ ಎಸ್‌ಯುವಿ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಇದೀಗ ಮತ್ತಷ್ಟು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ಸಧ್ಯ ಕಾಶ್ಮೀರದ ಗಡಿಯಲ್ಲಿರುವ ದೋನಿ ಯಾವಾಗ ಈ ಕಾರಿನೊಂದಿಗೆ ರಸ್ತೆಗಿಳಿಯುತ್ತಾರೆ ನೋಡಬೇಕಿದೆ.

Sponsored :


9900071610