ತೆರೆಗೆ ಬರಲು ಸಿದ್ಧವಾಗುತ್ತಿದೆ ಥ್ರಿಲ್ಲಿಂಗ್ ಚಿತ್ರ ಗುಳ್ಟು!

181
New Gulttu film Trailer released
New Gulttu film Trailer released

ಚಂದನವನದಲ್ಲಿ ಟೀಸರ್​​ ಮೂಲಕವೇ ತೀವ್ರ ಕುತೂಹಲ ಮೂಡಿಸಿದ್ದ ‘ಗುಳ್ಟು’ ಚಿತ್ರದ ಟ್ರೇಲರ್​​ ಇದೀಗ ರಿಲೀಸ್​ ಆಗಿದೆ.

ad

ಎರಡು ನಿಮಿಷದ ಈ ದೃಶ್ಯ ತುಣುಕಿಗೆ ನಿರೀಕ್ಷೆಗೂ ಮೀರಿ ಮೆಚ್ಚುಗೆ ಸಿಗ್ತಿದೆ. ಯಾಕಂದ್ರೆ ಸೈಬರ್​​ ಕ್ರೈಂ ಶೈಲಿಯ ಈ ಸಿನಿಮಾದಲ್ಲಿರೋ ಈ ಸ್ಟೋರಿ ವಾಸ್ತವಕ್ಕೆ ತುಂಬಾ ಹತ್ರದಲ್ಲಿರುವಂತಿದೆ. ಡಿಜಿಟಲ್​ ಯುಗದ ಕಥೆಯ ಆ ಟ್ರೇಲರ್​​ ಇಲ್ಲಿದೆ. ಕನ್ನಡ ಚಿತ್ರರಂಗದಲ್ಲಿಗ ಹೊಸತನದ ಪರ್ವಕಾಲ. ಸಾಲು ಸಾಲು ಹೊಸ ಮಾದರಿಯ ಸಿನಿಮಾಗಳು ಕಡಿಮೆ ವೆಚ್ಚದಲ್ಲಿ ನಿರ್ಮಾಣವಾಗಿ, ಹೊಸತನದ ಕಥೆ, ನಿರೂಪಣೆ, ತಾಂತ್ರಕತೆ, ನಿರ್ದೇಶನದಿಂದ ಪ್ರೇಕ್ಷಕರ ಮನ ಗೆಲ್ಲುತ್ತಿದೆ.

 

ಇದೀಗ ಸ್ಯಾಂಡಲ್​ವುಡ್​ನಲ್ಲಿ ಮತ್ತೊಂದು ಹೊಸತನದ ಮತ್ತೊಂದು ಸಿನಿಮಾ ತಯಾರಾಗಿದೆ. ಶೀರ್ಷಿಕೆ ಹಾಗೂ ಪೋಸ್ಟರ್, ಟೀಸರ್​​ ಮೂಲಕವೇ ತೀವ್ರ ಕುತೂಹಲ ಮೂಡಿಸಿದ್ದ ‘ಗುಳ್ಟು’ ಚಿತ್ರದ ಟ್ರೇಲರ್​​​ ಇದೀಗ ರಿಲೀಸ್​ ಆಗಿದ್ದು, ನಿರೀಕ್ಷೆಗೂ ಮೀರಿ ಮೆಚ್ಚುಗೆ ಗಳಿಸುತ್ತಿದೆ. ‘ಗುಳ್ಟು’ ಸಿನಿಮಾದ ಕಥೆಯ ಎಳೆ ವಿಭಿನ್ನವಾಗಿದೆ. ಇದೊಂದು ಸೈಬರ್​​ ಕ್ರೈಂ ಶೈಲಿಯ ಸಿನಿಮಾ. ಜೊತೆಗೆ ನವಿರು ಪ್ರೇಮ ಕಥೆಯ ಎಳೆಯೂ ಇದೆ. ಇದರ ಜೊತೆ ಡಾರ್ಕ್‌ ಕಾಮಿಡಿ’ಯೂ ಇದೆ ಅಂತ ಸಿನಿಮಾ ತಂಡ ಹೇಳ್ಕೊಂಡೇ ಬಂದಿದೆ.

ಇದೊಂದು ತಂತ್ರಜ್ಞಾನದ ಸುತ್ತ ನಡೆಯುವ ಕಥೆಯಾಗಿದ್ದು, ಇಂದಿನ ತಂತ್ರಜ್ಞಾನವನ್ನ ಜನರು ಹೇಗೆಲ್ಲ ಬಳಸಿಕೊಳ್ಳುತ್ತಿದ್ದಾರೆ ಎಂಬುದನ್ನ ಥ್ರಿಲ್ಲಿಂಗ್ ಆಗಿ ಹೇಳಲು ಹೊರಟಿದೆ ಚಿತ್ರತಂಡ. ಇಂದಿನ ಯುಗದಲ್ಲಿ ಯುವ ಜನಾಂಗ ಡಿಜಿಟಲ್ ಮಾಧ್ಯಮಕ್ಕೆ ಹೆಚ್ಚು ಅಡಿಕ್ಟ್ ಆಗುತ್ತಿದೆ. ಅದರಲ್ಲಿ ಸಕಾರಾತ್ಮಕ ಜತೆಗೆ ನಕಾರಾತ್ಮಕ ಅಂಶಗಳೂ ಇವೆ. ಇದನ್ನೇ ಹೈಲೈಟ್ ಆಗಿಸಿಕೊಂಡು ನಿರ್ದೇಶಕರು ಸಿನಿಮಾ ಮಾಡಿದ್ದಾರೆ. ಡಿಜಿಟಲ್​ ಯುಗದ ಕಥೆ ಅನ್ನಿಸಿಕೊಳ್ಳುವ ಗುಳ್ಟು ಟ್ರೇಲರ್​​ ಹೊಸ ಅನುಭವ ಕೊಡುತ್ತೆ. ಟೀಸರ್​​ನಲ್ಲೇ ಬಿಗಿತನ, ಹೊಸ ನಿರೂಪಣೆಯ ಶೈಲಿ, ಗಂಬೀರತೆ , ಹರಿತ ಸಂಭಾಷಣೆ,ಪರಿಣಾಮಕಾರಿ ಛಾಯಾಗ್ರಹಣ ಎದ್ದು ಕಾಣ್ತಿದೆ. ಹೀಗಾಗಿ ಗುಳ್ಟು ಟೀಸರ್​ ಮೂಲಕ ಮತ್ತಷ್ಟು ಭರವಸೆ ಹುಟ್ಟಿಸಿದೆ.

ಅಂದಹಾಗೆ ಸಿನಿಮಾದಲ್ಲಿ ಹೊಸ ಮುಖಗಳ ಜೊತೆ ಸೋನುಗೌಡ, ಅವಿನಾಶ್, ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿದ್ದಾರೆ. ಪ್ರಶಾಂತ್ ರೆಡ್ಡಿ ಹಾಗೂ ಆರ್. ದೇವರಾಜ್ ಅವರ ನಿರ್ವಣದಲ್ಲಿ ಮೂಡಿಬರುತ್ತಿರುವ ಈ ಸಿನಿಮಾಗೆ ನಿರ್ದೇಶಕ ಜನಾರ್ದನ ಚಿಕ್ಕಣ್ಣ ಆಕ್ಷನ್​-ಕಟ್ ಹೇಳಿದ್ದಾರೆ. ವಿಶೇಷ ಅಂದ್ರೆ ನಿರ್ದೇಶಕ ಜನಾರ್ದನ್​ ಇಂಜಿನಿಯರಿಂಗ್​ ಪದವೀಧರ. ಇತ್ತೀಚೆಗೆ ಸ್ಯಾಂಡಲ್​ವುಡ್​​​ಗೆ ಬಂದು ನಿರ್ದೇಶನದಲ್ಲಿ ಪ್ರೇಕ್ಷಕರ ಮನಗೆದ್ದ ಹೊಸಬರಲ್ಲಿ ಅನೇಕರು ಇಂಜಿನಿಯಂರಿಗ್, ಸಾಫ್ಟ್​​ವೇರ್​​ ಕ್ಷೇತ್ರದವರೇ. ಇದೀಗ ಮತ್ತೊಬ್ಬರ ಎಂಟ್ರಿಯಾಗ್ತಿದೆ. ಅಂದಹಾಗೆ ‘ಗುಳ್ಟು’ ಹೊಸ ಪದ. ಇದರ ಅರ್ಥ ಏನು ಅನ್ನೋದು ಗೊತ್ತಾಗಬೇಕಾದ್ರೆ ನೀವು ಸಿನಿಮಾ ನೋಡ್ಬೇಕು. ಭಾರೀ ಕುತೂಹಲ ಹುಟ್ಟಿಸಿರುವ ಗುಳ್ಟು ಮಾರ್ಚ್​ 30ಕ್ಕೆ ತೆರೆಮೇಲೆ ಬರಲಿದೆ.

Sponsored :

Related Articles