ಸ್ವಿಮ್ಮಿಂಗ್​ ಪೂಲ್​ನಲ್ಲಿ ಪ್ರಿಯಾಂಕಾ ಹಾಟ್ ಪೋಟೋಶೂಟ್​​! ಪೋಟೋ ಕ್ಲಿಕ್ಕಿಸಿದ್ದು ಯಾರು ಗೊತ್ತಾ?!

2578

ಬಿ- ಟೌನ್ ಸಾಲು ಸಾಲು ಹಿಟ್​ ಸಿನಿಮಾ ಕೊಡೋ ನಟಿಯರಿಗಿಂತಲೂ ಹೆಚ್ಚು ಸುದ್ದಿ ಮಾಡೋದು ನಟನೆಯಿಂದ ದೂರ ಉಳಿದ ಪ್ರಿಯಾಂಕ್ ಚೋಫ್ರಾ ಅಲಿಯಾಸ್ ಪಿಗ್ಗಿ. ಮದುವೆಯಾದಾಗಿನಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗಿರುವ ಪ್ರಿಯಾಂಕಾ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇಷ್ಟಕ್ಕೂ ಈ ಬಾರಿ ಪಿಗ್ಗಿ ಸುದ್ದಿಯಾಗ್ತಿರೋದ್ಯಾಕೆ ಗೊತ್ತಾ?

ad

ಕಳೆದ ವರ್ಷವಷ್ಟೇ ಪಿಗ್ಗಿ ಮತ್ತು ಯು ಎಸ್ ಎ ಗಾಯಕ ನಿಕ್ ಜೋನಸ್ ಜೊತೆಗೆ ಸಪ್ತಪದಿ ತುಳಿದಿದ್ದರು. ಜೊತೆಗೆ ಇತ್ತೀಚೆಗೆ ಪತಿ ನಿಕ್ ಸಹೋದರ ಮದುವೆಗೆ ತೆರಳಿ ಎಂಜಾಯ್ ಮಾಡಿದ್ದ ಪಿಗ್ಗಿ ಪಿಕ್ ಸ್ಯಾರಿಯಲ್ಲಿ ಮಿಂಚಿ ಫೋಟೋಗೆ ಪೋಸ್ ಕೊಡುವ ಮೂಲಕ ಸುದ್ದಿಯಾಗಿದ್ದರು. ಈಗ ಮತ್ತೊಮ್ಮೆ ಬಿಳಿ ಬಣ್ಣದ ಸ್ವಿಮ್ ಸೂಟ್ ಧರಿಸಿ, ಕೈಯಲ್ಲಿ ಕಾಕ್ ಟೈಲ್ ಹಿಡಿದು, ಸ್ವಿಮಿಂಗ್ ಪೂಲ್ ನಲ್ಲಿ ಕ್ಲಿಕ್ಕಿಸಿಕೊಂಡಿರುವ ಹಾಟ್ ಹಾಟ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.

ಹೌದು ನಟಿ ಪ್ರಿಯಾಂಕ ಚೋಪ್ರಾ ಬಿಳಿ ಬಣ್ಣದ ಸ್ವಿಮ್ ಸೂಟ್ ಧರಿಸಿ, ಕೈಯಲ್ಲಿ ಕಾಕ್ ಟೈಲ್ ಹಿಡಿದು, ಸ್ವಿಮಿಂಗ್ ಪೂಲ್ ನಲ್ಲಿ ಫೋಟೋಗೆ ಫೋಸ್ ನೀಡಿದ್ದಾರೆ. ವಿಶೇಷವೆಂದರೆ ಪತ್ನಿಯ ಮಾದಕ ಮೈ ಮಾಟದ ಫೋಟೋಗಳನ್ನು ಪತಿ ನಿಕ್ ಜೋನಸ್ ರವರೆ ಸೆರೆಹಿಡಿದಿದ್ದಾರೆ. ಸದ್ಯ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಿಯಾಂಕಾರ ಹಾಟ್ ಹಾಟ್ ಫೋಟೋಗಳಿಗೆ ನೆಟ್ಟಿಗರು ಕಮೆಂಟ್ ಮಾಡಲು ಪ್ರಾರಂಭಿಸಿದ್ದಾರೆ.

 

ಕೆಲವರು ಪ್ರಿಯಾಂಕಾ ಸಖತ್ ಹಾಟ್ ಆಗಿ ಕಾಣಿಸುತ್ತಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದರೆ, ಇನ್ನೂ ಕೆಲವರು ಪಿಗ್ಗಿಯ ಕಾಲೆಯತೊಡಗಿದ್ದಾರೆ. ಇನ್ನೂ ಪ್ರಿಯಾಂಕಾ ತಮ್ಮ ಹಾಟ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರೆ, ಪತಿ ನಿಕ್ ಜೋನಸ್ ಸ್ಲೋ ಮೋಷನ್ ನಲ್ಲಿ ಡಾನ್ಸ್ ಮಾಡುತ್ತಾ ಇಬ್ಬರು ತಬ್ಬಿಕೊಳ್ಳುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ಧಾರೆ. ಸದ್ಯ ಈ ವಿಡಿಯೋ ಸಹ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

Sponsored :

Related Articles