ಎರಡನೇ ದಿನವೂ ಉತ್ತರ ಕರ್ನಾಟಕದಲ್ಲಿ ನಿಖಿಲ್ ಪ್ರವಾಸ! ಸಂತ್ರಸ್ಥರ ಕಣ್ಣೀರು ಒರೆಸಿದ ನಿಖಿಲ್ ಕುಮಾರಸ್ವಾಮಿ!!

763
9900071610

ಉತ್ತರ ಕರ್ನಾಟಕ ಪ್ರವಾಹಕ್ಕೆ ನಲುಗಿಹೋಗಿದ್ದು ಜನಜೀವನ ಬೀದಿಗೆ ಬಿದ್ದಿದೆ. ಈ ಪರಿಸ್ಥಿತಿ ಕಂಡು ಮರುಗಿರುವ ನಟ ಹಾಗೂ ಮಾಜಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ತಮ್ಮ ಚಿತ್ರ ಕುರುಕ್ಷೇತ್ರ ತೆರೆಗೆ ಬಂದಿರುವ ಸಂಭ್ರಮಾಚರಣೆ ಬಿಟ್ಟು ಸಂತ್ರಸ್ಥರಿಗೆ ನೆರವಾಗಲು ಉತ್ತರ ಕರ್ನಾಟಕದತ್ತ ಧಾವಿಸಿದ್ದಾರೆ.

ad

 

ನಿನ್ನೆಯೇ ಧಾರವಾಡ ಭಾಗಕ್ಕೆ ಭೇಟಿ ನೀಡಿದ್ದ ನಿಖಿಲ್ ಕುಮಾರಸ್ವಾಮಿ ಬಳಿಕ ಬೆಳಗಾವಿ,ಗದಗ ಚಿಕ್ಕೋಡಿ ಭಾಗಕ್ಕೆ ತೆರಳಿ  ಸಂತ್ರಸ್ಥರೊಂದಿಗೆ ಸಮಾಲೋಚನೆ ನಡೆಸಿ ಧೈರ್ಯ ತುಂಬುವ ಕೆಲಸ ಮಾಡಿದ್ದರು. ಅಲ್ಲದೇ ಜೆಡಿಎಸ್​ ವತಿಯಿಂದ ಸಂಗ್ರಹಿಸಲಾಗಿದ್ದ ಅಗತ್ಯ ವಸ್ತುಗಳನ್ನು ಹಂಚಿಕೆ ಮಾಡಿದ್ದರು.

ಇಂದು ಹುಬ್ಬಳ್ಳಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನಿಖಿಲ್ ಸಂತ್ರಸ್ತರಿಗೆ ಸಾಂತ್ವಾನ ಹೇಳಿ. ಧೈರ್ಯ ತುಂಬುವ ಕೆಲಸ ಮಾಡಿದ್ದರು. ಅಲ್ಲದೇ ಬಾಗಲಕೋಟೆ ಭಾಗಕ್ಕೆ ತೆರಳಿದ ನಿಖಿಲ್ ಮಾಜಿ ಸಿಎಂ ಸಿದ್ದರಾಮಯ್ಯನವರ ಕ್ಷೇತ್ರ ಬಾದಾಮಿ ತಾಲೂಕಿನ ಕಿತ್ತಲಿ ಗ್ರಾಮಕ್ಕೆ ಭೇಟಿ ನೀಡಿದ ನಿಖಿಲ್ ನೀರಲ್ಲಿ ಮುಳುಗಿದ್ದ ಮನೆಗಳಿಗೆ ಭೇಟಿ ನೀಡಿದ್ರು.

ಈ ವೇಳೆ ಸಂತ್ರಸ್ತರು ಕಣ್ಣೀರಾಕಿದ್ದು, ಯಾರೂ ಹೆದರಬೇಡಿ.. ನಿಮ್ಮ ಜತೆ ನಾವಿದ್ದೀವಿ ಅಂತಾ ನಿಖಿಲ್ ಮನಸ್ಥೈರ್ಯ ತುಂಬಿದ್ದಾರೆ.ಅಲ್ಲದೆ ಜೆಡಿಎಸ್​ ಕಾರ್ಯಕರ್ತರು ಸಂಗ್ರಹಿಸಿದ್ದ ವಸ್ತುಗಳನ್ನು ಹಂಚಿಕೆ ಮಾಡಿದ್ದಾರೆ.

Sponsored :


9900071610