ಕುರುಕ್ಷೇತ್ರ ಚಿತ್ರದ ಸಂಭಾವನೆ ಸಂತ್ರಸ್ಥರಿಗೆ ದಾನ! ಇತರರಿಗೆ ಮಾದರಿಯಾದ ನಿಖಿಲ್ ಕುಮಾರಸ್ವಾಮಿ!!

4929
9900071610

ಚುನಾವಣೆಯಲ್ಲಿ ಗೆದ್ದು ಜನಪ್ರತಿನಿಧಿಗಳಾದ ನಾಯಕರೇ ಪ್ರವಾಹ ಸ್ಥಿತಿಯಿಂದ ದೂರ ಉಳಿದು ರಾಜಕೀಯದಲ್ಲಿ ಮುಳುಗಿರುವಾಗ ಚುನಾವಣೆಯಲ್ಲಿ ಸೋತರೂ ಮಾಜಿ ಸಿಎಂ ಪುತ್ರ ಹಾಗೂ ಸಿನಿಮಾ ನಟ ನಿಖಿಲ್ ಕುಮಾರಸ್ವಾಮಿ ತಮ್ಮ ಕರ್ತವ್ಯ ಮರೆತಿಲ್ಲ. ಹೌದು ನಿಖಿಲ್ ಪ್ರವಾಹಸ್ಥಿತಿಗೆ ಸ್ಪಂದಿಸಿ ಇತರರಿಗೆ ಮಾದರಿಯಾದ ಕಾರ್ಯವೊಂದಕ್ಕೆ ಮುನ್ನುಡಿ ಬರೆದಿದ್ದಾರೆ. ತಮ್ಮ ಸಂಭಾವನೆಯನ್ನೇ ಸಂತ್ರಸ್ಥರಿಗಾಗಿ ದಾನ ಮಾಡಿ ಹೃದಯವೈಶ್ಯಾಲತೆ ಮೆರೆದಿದ್ದಾರೆ.

ad

ಹೌದು ಉತ್ತರ ಕರ್ನಾಟಕ ಪ್ರವಾಹಕ್ಕೆ ನಲುಗಿಹೋಗಿದ್ದು ಜನಜೀವನ ಬೀದಿಗೆ ಬಿದ್ದಿದೆ. ಈ ಪರಿಸ್ಥಿತಿ ಕಂಡು ಮರುಗಿರುವ ನಟ ಹಾಗೂ ಮಾಜಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ತಮ್ಮ ಚಿತ್ರ ಕುರುಕ್ಷೇತ್ರ ತೆರೆಗೆ ಬಂದಿರುವ ಸಂಭ್ರಮಾಚರಣೆ ಬಿಟ್ಟು ಸಂತ್ರಸ್ಥರಿಗೆ ನೆರವಾಗಲು ಉತ್ತರ ಕರ್ನಾಟಕದತ್ತ ಧಾವಿಸಿದ್ದಾರೆ. ಅಷ್ಟೇ ಅಲ್ಲ ತಮ್ಮ ಹೊಸ ಚಿತ್ರ ಕುರುಕ್ಷೇತ್ರ ಚಿತ್ರಕ್ಕಾಗಿ ಪಡೆದ ಸಂಪೂರ್ಣ ಸಂಭಾವನೆಯನ್ನು ಉತ್ತರ ಕರ್ನಾಟಕದ ಸಂತ್ರಸ್ಥರಿಗೆ ನೀಡಲು ಮುಂದಾಗಿದ್ದಾರೆ.

ಈಗಾಗಲೇ ಹುಬ್ಬಳ್ಳಿಗೆ ಆಗಮಿಸಿರುವ ನಿಖಿಲ್ ಕುಮಾರಸ್ವಾಮಿ, ಧಾರವಾಡ ಸಂತ್ರಸ್ಥರನ್ನು ಭೇಟಿ ಮಾಡಲಿದ್ದು, ಸಂಗ್ರಹಿಸಿದ ವಸ್ತುಗಳನ್ನು ಹಂಚಿಕೆ ಮಾಡಲಿದ್ದು, ಬಳಿಕ ಬೆಳಗಾವಿ, ಚಿಕ್ಕೋಡಿ ನಂತರ ಯಾದಗಿರಿ ಜಿಲ್ಲೆಗಳಿಗೆ ಭೇಟಿ ನೀಡಿ ಪ್ರವಾಹಸಂತ್ರಸ್ಥರನ್ನು ಭೇಟಿ ಮಾಡಿ ಸಂಗ್ರಹಿಸಿದ ವಸ್ತುಗಳನ್ನು ಹಂಚಲಿದ್ದಾರೆ.


ಇದು ಕರ್ನಾಟಕಕ್ಕೆ ಬಂದೊದಗಿರುವ ದುರಂತ ಎಂದ ನಿಖಿಲ್ ಕುಮಾರಸ್ವಾಮಿ, ಈ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡೋದಿಲ್ಲ. ನಾವೆಲ್ಲರೂ ಸಂತ್ರಸ್ಥರಿಗೆ ನೆರವಾಗುತ್ತೇವೆ. ಜೆಡಿಎಸ್ ಕಾರ್ಯಕರ್ತರು ಈಗಾಗಲೇ ಈ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು.

Sponsored :


9900071610