ನಿಖಿಲ್ ಕುಮಾರಸ್ವಾಮಿ ಸೆಕ್ಸ್ ಸಿಡಿ !! ಎಚ್ ಸಿ ಬಾಲಕೃಷ್ಣರಿಂದ ಬಾಂಬ್ !! ತಾಕತ್ತಿದ್ರೆ ಸಿಡಿ ಬಿಡುಗಡೆ ಮಾಡಿ ಅಂದ್ರು ನಿಖಿಲ್ !!

11703

ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಕೆಸರೆರಚಾಟ ಜೋರಾಗಿದೆ. ಒಂದು ಕಾಲದಲ್ಲಿ ಜೆಡಿಎಸ್ ನಲ್ಲಿದ್ದುಕೊಂಡು  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪರ ಕೆಲಸ ಮಾಡುತ್ತಿದ್ದ ಹೆಚ್.ಸಿ ಬಾಲಕೃಷ್ಣ  ಕಾಂಗ್ರೆಸ್ ಗೆ ಸೇರ್ಪಡೆಗೊಂಡ ನಂತರ ಇದೀಗ ಹೆಚ್.ಡಿ ಕುಮಾರಸ್ವಾಮಿ ವಿರುದ್ದ ತಡೆ ತಟ್ಟಿದ್ದಾರೆ.

ಪ್ರಚಾರಕ್ಕೆ ಹೋದಾಗ ಹೆಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಗೌಡ  ತನ್ನನ್ನು ಟೀಕಿಸುತ್ತಿದ್ದುದ್ದಕ್ಕೆ ಗರಂ ಆಗಿದ್ದ  ಬಾಲಕೃಷ್ಣ  ಇತ್ತೀಚೆಗೆ ಮಾತನಾಡಿ, ಪ್ರಚಾರಕ್ಕೆ ಹೋದ ಕಡೆಗಳಲ್ಲಿ ನಿಖಿಲ್‍ ಗೌಡ ನಮ್ಮ ವಿರುದ್ಧ ಇಲ್ಲಸಲ್ಲದ ಟೀಕೆ ಮಾಡುತ್ತಿರುವುದನ್ನು ನಿಲ್ಲಿಸದಿದ್ದರೆ ನಮ್ಮ ಬಳಿಯಿರುವ ಅವರ ಬಹಳಷ್ಟು ಕ್ಯಾಸೆಟ್‍ಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ್ದರು.

ad

 

ಇದೀಗ ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿಖಿಲ್ ಗೌಡ ಅವರು, ಬಾಲಕೃಷ್ಣಗೆ ತಾಕತ್ತಿದ್ದರೇ ಸಿಡಿ ಬಿಡುಗಡೆ ಮಾಡಲು ಹೇಳಿ. ನಾನು ಯಾರಿಗೂ ಹೆದರಲ್ಲ. ಬಾಲಕೃಷ್ಣ ಯೋಗ್ಯತೆಯನ್ನ ರಾಜ್ಯದ ಆರುವರೆ ಕೋಟಿ ಜನ ಕಂಡಿದ್ದಾರೆ. ಯಾವ ರೀತಿ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ ಅಂತಾ ಗೊತ್ತು ಎಂದು ಗುಡುಗಿದರು. ಹಾಗೆಯೇ ಚುನಾವಣೆ ನಂತರ ಮಾಗಡಿಯಲ್ಲಿ ಬಾಲಕೃಷ್ಣ ಚುನಾವಣಾ ರಾಜಕೀಯದಿಂದ  ನಿವೃತ್ತಿ ಹೊಂದಬೇಕಾಗುತ್ತದೆ. ನಾನು ನೋಡ್ತೇನೆ ಅವರು  ಹೇಗೆ ರಾಜಕಾರಣ ಮಾಡ್ತಾರೆ ಅಂತಾ ಎಂದು ನಿಖಿಲ್ ಗೌಡ ಕಿಡಿಕಾರಿದರು.  ಬದಲಾದ ರಾಜಕಾರಣದಲ್ಲಿ  ಬಂಡಾಯ ಎದ್ದಿ ಕಾಂಗ್ರೆಸ್ ಗೆ ಜಂಪ್ ಆಗಿರುವ  ಬಾಲಕೃಷ್ಣರನ್ನು ಮಾಗಡಿಯಲ್ಲಿ ಈ ಬಾರಿ ಸೋಲಿಸಲೇ ಬೇಕೆಂದು ಪಣ ತೊಟ್ಟಿರುವ ಹೆಚ್.ಡಿ ಕುಮಾರಸ್ವಾಮಿ ಅವರು ಈಗಾಗಲೇ ಜೆಡಿಎಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರವನ್ನು ನಡೆಸಿದ್ದಾರೆ. ಈ ಮಧ್ಯೆ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರ ಪುತ್ರ ನಟ ನಿಖಿಲ್ ಗೌಡ ಚುನಾವಣಾ ಪ್ರಚಾರ ನಡೆಸುತ್ತಿದ್ದು, ಬಾಲಕೃಷ್ಣರ ವಿರುದ್ಧವೇ ವಾಗ್ದಾಳಿ ನಡೆಸುತ್ತಿದ್ದಾರೆ.

Sponsored :

Related Articles