ಮಂಡ್ಯ ಕ್ಷೇತ್ರದಲ್ಲಿ ಇಂದು ಜಾಗ್ವಾರ್​​​​ ನಾಮಿನೇಷನ್​ ಅಬ್ಬರ…!

707

ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಮತ್ತು ಕಾಂಗ್ರೆಸ್ ‘ದೋಸ್ತಿ’ ಪಕ್ಷದ​​ ಅಭ್ಯರ್ಥಿಯಾಗಿ ಇಂದು ನಿಖಿಲ್‌ ಕುಮಾರಸ್ವಾಮಿ ಅವರು  ಕಣಕ್ಕಿಳಿಯಲಿದ್ದಾರೆ… ಇಂದು ಮಂಡ್ಯದಲ್ಲಿ ಜಾಗ್ವಾರ್ ನಾಮಿನೇಶನ್ ಅಬ್ಬರ ಇರಲಿದೆ. ಅಧಿಕೃತವಾಗಿ ಮಾರ್ಚ್​ 25ರಂದು ನಿಖಿಲ್‌ ಅವರು ನಾಮಿನೇಷನ್​​ ಸಲ್ಲಿಸಲಿದ್ದಾರೆ.

ad

ಬೆಳಗ್ಗೆ 9ಕ್ಕೆ ಬೆಂಗಳೂರಿನಿಂದ ಮಂಡ್ಯಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ, ಅನಿತಾ ಕುಮಾರಸ್ವಾಮಿ ಉಪಸ್ಥಿತಿಯಲ್ಲಿ ನಿಖಿಲ್ ನಾಮಪತ್ರ ಸಲ್ಲಿಸಲಿದ್ದಾರೆ. ಹೋಳಿ ಹುಣ್ಣಿಮೆ ಆದ್ದರಿಂದ ಈ ವೇಳೆ ಅಂದುಕೊಂಡಿದ್ದ ಕೆಲಸ ನೆರವೇರುತ್ತದೆ ಎಂಬುವ ನಂಬಿಕೆ ಇಂದ… ಜ್ಯೋತಿಷಿಗಳ ಸಲಹೆಯ ಮೇರೆಗೆ ಇಂದು ನಿಖಿಲ್ ಅವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಲಿದ್ದಾರೆ.

Sponsored :

Related Articles