ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಭೇಟಿ ಮಾಡಿದ ನಿಖಿಲ್​​ ಕುಮಾರಸ್ವಾಮಿ! ಭೇಟಿ ಬಳಿಕ ನಿಖಿಲ್ ಏನಂದ್ರು ಗೊತ್ತಾ?!

8732
9900071610

ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಲೋಕಸಭೆ ಚುನಾವಣೆ ಬಳಿಕ ಕೂಡ ಸಕ್ರಿಯ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚಿಗೆ ಅಭೂತಪೂರ್ವ ಗೆಲುವಿನೊಂದಿಗೆ ಆಂಧ್ರಪ್ರದೇಶದ ಚುಕ್ಕಾಣಿ ಹಿಡಿದ ಆಂಧ್ರದ ನೂತನ ಸಿಎಂ ಜಗನ್​ ಮೋಹನ್ ರೆಡ್ಡಿಯವರನ್ನ ಜೆಡಿಎಸ್​ ಯುವ ಮುಖಂಡ ನಿಖಿಲ್​ ಕುಮಾರಸ್ವಾಮಿ ವಿಜಯವಾಡದಲ್ಲಿ ಭೇಟಿ ಮಾಡಿ ಶುಭ ಕೋರಿದ್ರು.

ad


ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರೋ ನಿಖಿಲ್​, ಜಗನ್​ ರೆಡ್ಡಿಯವರ ರಾಜಕೀಯ ಜೀವನ ಎಲ್ಲಾ ಯುವಕರಿಗೆ ಕಾರ್ಯಕರ್ತರಿಗೆ ಪ್ರೇರಣೆ ನೀಡುವಂಥದ್ದು, ಆಂಧ್ರಪ್ರದೇಶದ ಮುಖ್ಯಮಂತ್ರಿಗಳಾಗಿ ಅವರು, ಜನರ ನಿರೀಕ್ಷೆಗೆ ತಕ್ಕಂತೆ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇನೆ ಎಂದಿದ್ದಾರೆ.

ಇನ್ನು ಆಂಧ್ರ ಸಿಎಂ ಜಗನ್​ ಕೂಡಾ ಕರ್ನಾಟಕ ಮುಖ್ಯಮಂತ್ರಿ ಮಗ ನಿಖಿಲ್​ ಕುಮಾರಸ್ವಾಮಿ ನನ್ನ ಭೇಟಿ ಮಾಡಿ ಶುಭ ಕೋರಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ.

Sponsored :


9900071610