‘ನಿಜವಾದ ಗಂಡಸು ಎಂದು ಪ್ರೂವ್ ಮಾಡಲು ಮದ್ಯ ಬೇಕಿಲ್ಲ’! ಕಿಚ್ಚ ಸುದೀಪ್ ಟಾಂಗ್​​​ ಕೊಟ್ಟಿದ್ಯಾರಿಗೆ..?!

4017
9900071610

ಸ್ಯಾಂಡಲ್ ವುಡ್ ನ ಮಾಣಿಕ್ಯ ಅಭಿನಯ ಚಕ್ರವರ್ತಿ ಸೋಷಿಯಲ್​​ ಮೀಡಿಯಾದಲ್ಲಿ ಸಖತ್​ ಆ್ಯಕ್ಟಿವ್​​. ಅಲ್ಲಿ ಫ್ಯಾನ್ಸ್​​ ಜೊತೆ ನಿರಂತ ಟಚ್​​ನಲ್ಲಿರುತ್ತಾರೆ. ಸುದೀಪ್ ತಮ್ಮ ಸಿನಿಮಾಗಳ ಮಾಹಿತಿಗಳ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡೋದೆ ಎಲ್ಲಾ ಅಲ್ಲೆ. ಇದೀಗ ಕಿಚ್ಚ ಪೋಸ್ಟ್ ಮಾಡಿರುವ ಎರಡು ಟ್ವೀಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ.

ad

ಯಾಕಂದ್ರೆ ಈ ಟ್ವೀಟ್​​​ನಲ್ಲಿ ಖಡಕ್ ಆಗಿ ಒಂದು ಸಾಲನ್ನು ಪೋಸ್ಟ್ ಮಾಡುವ ಮೂಲಕ ಯಾರಿಗೋ ಸರಿಯಾಗಿ ಟಾಂಗ್ ಕೊಟ್ಟಹಾಗೆ ಇದೆ. ಸಾಮಾನ್ಯವಾಗಿ ಸಿನಿಮಾಗಳ ವಿಚಾರವನ್ನು ಮಾತ್ರ ಟ್ವೀಟ್ ಮಾಡೋ ಕಿಚ್ಚನ ಈ ಟ್ವೀಟ್​ ಭಾರೀ ಅಚ್ಚರಿ ಮೂಡಿಸಿದೆ. ಅಷ್ಟಕ್ಕೂ ಕಿಚ್ಚ ಮಾಡಿದ ಟ್ವೀಟ್​ನಲ್ಲಿ ಏನಿದೆ ಗೊತ್ತಾ..?


ಎಲ್ಲೋ ಓದಿದ ಸುಂದರ ಸಾಲುಗಳು ಅಂತ ಹೇಳುತ್ತ “ನಿಜವಾದ ಗಂಡಸು ಎನಿಸಿಕೊಳ್ಳಲು ಮದ್ಯಪಾನ ಮಾಡಬೇಕಾಗಿಲ್ಲ ಮತ್ತು ಕತ್ತಲು ಆಗಲಿ ಎಂದು ಕಾಯಬೇಕಾಗಿಲ್ಲ” ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ಫೊಟೋ ಒಂದನ್ನೂ ಶೇರ್ ಮಾಡಿದ್ದಾರೆ. ಅದರಲ್ಲಿ “ಕೇವಲ ಏನನ್ನೋ ಸಾಬೀತು ಪಡಿಸಲು ನಾನು ಫೈಟ್ ಮಾಡುವುದಿಲ್ಲ. ನನ್ನ ಎದುರಾಳಿ ಫೈಟ್ ಮಾಡಲು ಯೋಗ್ಯನಾಗಿದ್ದಾಗ ಮಾತ್ರ ನಾನು ಫೈಟ್ ಮಾಡುತ್ತೇನೆ” ಎಂದು ಹೇಳಿದ್ದಾರೆ.


ಸುದೀಪ್​ ತುಂಬಾ ಪ್ರಬುದ್ಧ ನಟ.. ​ಸಾಧಾರಣವಾಗಿ ಸುದೀಪ್ ಇಷ್ಟು ಖಡಕ್ ಆದ ಸಾಲುಗಳನ್ನು ಟ್ವೀಟ್ ಮಾಡುವುದು ತುಂಬ ಕಡಿಮೆ. ಕಡಿಮೆ ಎನ್ನುವುದಕ್ಕಿಂತನು ಮಾಡುವುದೆ ಇಲ್ಲ. ಆದ್ರೆ ಸುದೀಪ್ ದಿಢೀರನೆ ಹೀಗೆ ಪೋಸ್ಟ್ ಮಾಡಿರುವುದು ಯಾರಿಗೆ ಎನ್ನುವ ಅನುಮಾನ ಮೂಡುತ್ತಿದೆ. ಹೀಗಾಗಿ ಕಿಚ್ಚನ ಟ್ವೀಟ್ ಎಲ್ಲರ ಗಮನ ಸೆಳೆಯುತ್ತಿದೆ.


ಸುದೀಪ್​ ನಟನೆಯ ಪೈಲ್ವಾನ್ ಸಿನಿಮಾ ರಿಲೀಸ್​ಗೆ ರೆಡಿಯಾಗಿದೆ. ಅಸಲಿಗೆ ಆಗಸ್ಟ್ 8 ರಂದು ಈ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ ಈಗ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದ್ದು ಸೆಪ್ಟೆಂಬರ್ 12 ರಂದು ಬಿಡುಗಡೆಯಾಗಲಿದೆ. ಪೈಲ್ವಾನ್ ರಿಲೀಸ್ ನ ತಯಾರಿಯಲ್ಲಿರುವ ಸುದೀಪ್ ದಿಢೀರನೆ ಎಲ್ಲೋ ಓದಿದ ಸುಂದರ ಸಾಲುಗಳು ಅಂತ ಪೋಸ್ಟ್ ಮಾಡಿರುವುದು ಈಗ ಕುತೂಹಲಕ್ಕೆ ಕಾರಣವಾಗಿದೆ

Sponsored :


9900071610