ಇಲ್ಲಿ ಮಾಂಸಾಹಾರ, ಮದ್ಯ ನಿಷಿದ್ಧ!! ಮಾಸಾಂಹಾರಿ ಹೋಟೆಲ್ ಗಳಲ್ಲೂ ಸಸ್ಯಾಹಾರಿ ಬೋರ್ಡ್!! ವಿಚಿತ್ರ ಆದರೂ ಸತ್ಯ!!

1455

    ಇಲ್ಲಿ ಮಾಸಾಹಾರಿ ಅಂಗಡಿಗಳಲ್ಲೂ ಸಸ್ಯಾಹಾರಿ ಅಂತ ಬೋರ್ಡ್. ಬಾರ್ ಗಳೆಲ್ಲ ಬಂದ್. ವಿಚಿತ್ರ ಅನಿಸಿದರೂ ಸತ್ಯ.  ಇದು ನಡೆಯುತ್ತಿರುವುದು ನಮ್ಮದೇ ರಾಜ್ಯದಲ್ಲಿ. ಇವರ ಈ ಆಚರಣೆಗೆ ಕಾರಣ ಆ ಊರಿನಲ್ಲಿ ನೆಲೆಸಿರುವ ವೀರಭದ್ರ.

ಹೌದು.  ದೇವಸ್ಥಾನಗಳ ಜೀರ್ಣೋದ್ದಾರ ಮಾಡುವುದು ಸರ್ವೆ ಸಾಮಾನ್ಯ. ಆದ್ರೆ ಉಡುಪಿಯ ಹಿರಿಯಡ್ಕ ಮಹತೋಬಾರ ವೀರಭದ್ರದೇವಸ್ಥಾನದ ಜೀರ್ಣೋದ್ದಾರ ಕಾರ್ಯ ಆರಂಭವಾಗಿ ತಿಂಗಳು ಕಳೆದಿದೆ. ವಿಶೇಷ ಅಂದ್ರೆ ಗ್ರಾಮಕ್ಕೆ ಗ್ರಾಮವೇ ಮಾಂಸಾಹಾರ ಬಿಟ್ಟು ಕಾಲವೇ ಕಳೆದಿದೆ, ಅಷ್ಟೆ ಯಾಕೆ ಹಿರಿಯಡ್ಕ ಗ್ರಾಮದ ಬಾರ್ ಗಳಲ್ಲಿ ಕೂಡ ಮಾಂಸಾಹಾರ ನಿಷೇಧಗೊಂಡಿದೆ.ಗ್ರಾಮದಲ್ಲಿ ಇರುವ ಮಾಂಸದ ಅಂಗಡಿಗಳು ಸ್ವಯಂಪ್ರೇರಿತವಾಗಿ ಮುಚ್ಚಲಾಗಿದೆ.

ad

ಗ್ರಾಮಕ್ಕೆ ಗ್ರಾಮವೇ ಸಸ್ಯಹಾರದ ಮೊರೆಹೋಗಿದೆ.ಫಾಸ್ಟ್ಫುಡ್ ಹೋಟೆಲುಗಳು ಸೇರಿದಂತೆ ಎಲ್ಲೂ ಮಾಂಸದೂಟ ಲಭ್ಯವಿಲ್ಲ. ಬ್ರಹ್ಮಕಲಶೋತ್ಸವದ ಸಮಯವಾದ್ದರಿಂದ ಈ ಹಿರಿಯಡ್ಕದ ನಾಲ್ಕು ಗ್ರಾಮದ 16ವಾರ್ಡುಗಳಲ್ಲಿರುವ 3 ಸಾವಿರ ಕುಟುಂಬಿಕರು ವೃತಾಚರಣೆಕೈಗೊಂಡು ಮದ್ಯ, ಮಾಂಸಬಿಟ್ಟಿದ್ದಾರೆ.

 

ಜಾತಿಭೇದವಿಲ್ಲದೇ ಗ್ರಾಮಕ್ಕೆ ಗ್ರಾಮವೇ ಮಾಂಸ ಆಹಾರವನ್ನು ತ್ಯಜಿಸಿರುವುದು ವಿಶೇಷ.ವೀರಭದ್ರ ಹಾಗೂ ಬ್ರಹ್ಮಲಿಂಗೇಶ್ವರ 200ವರ್ಷ ಹಳೆಯ ಇತಿಹಾಸ.ಒಂದೇ ಗರ್ಭಗುಡಿಯೊಳಗೆ 9 ಸನ್ನಿಧಾನಗಳಿವೆ. ಇಲ್ಲಿ ವೀರಭದ್ರ ಪ್ರಮುಖ ದೇವರಾದ್ರೂ 49 ಕ್ಕೂ ಹೆಚ್ಚುದೇವರ ಸನ್ನಿಧಾನವಿದೆ.

ಇನ್ನು ಈ ದೇವಾಲಯದ ವಿಶೇಷತೆ ನೋಡೋದಾದ್ರೆ ಈ ದೇವಾಲಯದ ರಾಜಗೋಪುರ 153 ಅಡಿಎ ತ್ತರವಿದ್ದು ತುಳುನಾಡು ಶೈಲಿಯದ್ದಾಗಿದೆ. 83ಅಡಿ ಎತ್ತರದ ಧ್ವಜ ಸ್ಥಂಭ.ಸ್ವಾಗತ ಮಂಟಪದಲ್ಲಿ ಚೋಳರಶೈಲಿಯ ಸಿಂಹಗಳು, ತುಳುನಾಡು ಶೈಲಿಯ ಮಾಡು, ಗರ್ಭಗುಡಿ , ಸುತ್ತುಪೌಳಿ, ಬ್ರಹ್ಮಲಿಂಗನಗುಡಿಗಳೆಲ್ಲ ಶಿಲಾಮಯವಾಗಿದೆ. ಪ್ರಮುಖವಾಗಿ 108 ವಿವಿಧಭಂಗಿಯ ನಟರಾಜನನ್ನು ಕೆತ್ತುವ ಜೊತೆಗೆ ಶಿವನ ಡಮರುಗ ಸೇರಿದಂತೆ ವಿವಿಧವಾಧ್ಯಗೋಷ್ಟಿಯನ್ನು ಕೈಯಿಂದಲೇ ಕೆತ್ತಲಾಗಿದೆ. ಹಳೆಯ ಕಂಬಗಳಿಗೆ ಹೊಸರೂಪ ನೀಡಲಾಗಿದ್ದು ತುಳುನಾಡು, ಚೋಳಶೈಲಿ ಹಾಗೂ ತಮಿಳುನಾಡು ಶೈಲಿಯ ಮಿಶ್ರಣ ಈ ದೇವಾಲಯದಲ್ಲಿ ಕಾಣಬಹುದಾಗಿದೆ. ಈ ದೇವಾಲಯ ಸಿರಿ ಜಾತ್ರೆಯಿಂದನೇ ರಾಜ್ಯದಲ್ಲೆ ವಿಶೇಷ ಹೆಸರುವಾಸಿ ದೇವಾಲಯ.

Sponsored :

Related Articles