ಸಿಎಂ ಸಿದ್ದರಾಮಯ್ಯಗೆ ನುಂಗಲಾರದ ತುಪ್ಪವಾದ ಲಿಂಗಾಯತ ಪ್ರತ್ಯೇಕ ಧರ್ಮ !! ಸಿಎಂ ಭೇಟಿಯಾದ ಸ್ವಾಮೀಜಿಗಳು !

929
Opposition to create minority status to Lingayats - Veerashaiva swamy to visit CM
Opposition to create minority status to Lingayats - Veerashaiva swamy to visit CM

ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗೆ ರಾಜ್ಯ ಸಚಿವ ಸಂಪುಟ ಶಿಫಾರಸು ಮಾಡಿದ್ದೇ ಆದಲ್ಲಿ ರಾಜ್ಯಾದ್ಯಂತ ಹೋರಾಟ ಶುರುವಾಗಲಿದೆ ಎಂದು ಹಲವು ಮಠಾಧೀಶರು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.

ad

ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಬೇಟಿಯಾದ ಲಿಂಗಾಯತ- ವೀರಶೈವ ಸ್ವಾಮೀಜಿಗಳ ನಿಯೋಗ, ಪ್ರತ್ಯೇಕ ಧರ್ಮದ ಪರ ನಿರ್ಣಯ ಕೈಗೊಂಡರೆ ಕಾಂಗ್ರೆಸ್ ವಿರುದ್ಧ ವೀರಶೈವ ಲಿಂಗಾಯತರು ಬಂಡೇಳಬೇಕಾದೀತು ಎಂದು ನೇರವಾಗಿ ಮುಖ್ಯಮಂತ್ರಿಗೆ ಹೇಳಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಬಹುವಿವಾದಿತ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಿದ್ದಾರೆ. ಈ ಹಿನ್ನಲೆಯಲ್ಲಿ ಸ್ವಾಮೀಜಿಗಳ ನಿಯೋಗ ಸಿಎಂ ಸಿದ್ದರಾಮಯ್ಯರನ್ನು ಬೇಟಿಯಾಯ್ತು.

ನಾಡಿನ ರಾಜಕೀಯ, ಧಾರ್ಮಿಕ ವಲಯದಲ್ಲಿ ಕೋಲಾಹಲ ಮೂಡಿಸಿರುವ ಈ ವಿಚಾರದಲ್ಲಿ ಸಂಪುಟ ಸಹೋದ್ಯೋಗಿಗಳಲ್ಲೇ ಪರ-ವಿರೋಧ ಅಭಿಪ್ರಾಯ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ನಿರ್ಧಾರ ಕುತೂಹಲ ಮೂಡಿಸಿದೆ. ಕಳೆದ ವಾರವೂ ತಡರಾತ್ರಿವರೆಗೆ ಸುಮಾರು ಮೂರೂವರೆ ತಾಸು ಚರ್ಚೆ ನಡೆದರೂ, ಸಂಪುಟ ಸದಸ್ಯರಲ್ಲೇ ಒಮ್ಮತ ಮೂಡದ ಕಾರಣ ಮುಂದೂಡಿಕೆಯಾಗಿತ್ತು. ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ರೂ ಆಗಿರುವ ಕಾಂಗ್ರೆಸ್ ನ ಶಾಮನೂರು ಶಿವಶಂಕರಪ್ಪ ಅವರೂ ಇದನ್ನು ವಿರೋಧಿಸಿದ್ದಾರೆ. ನಾಲ್ಕೈದು ಸ್ವಾಮೀಜಿಗಳು, ಒಂದಿಷ್ಟು ಸಚಿವರು, ಒಬ್ಬ ಅಧಿಕಾರಿಯನ್ನು ಇಟ್ಟುಕೊಂಡು ಸರಕಾರ ಧರ್ಮ ಒಡೆಯುವ ಕೆಲಸ ಮಾಡುತ್ತಿರುವುದು ಒಳ್ಳೆಯದಲ್ಲ ಎಂದು ಇದೀಗ ಸ್ವಾಮೀಜಿಗಳೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವೀರಶೈವ ಲಿಂಗಾಯತ ಧರ್ಮ ಒಂದೇ. ಈ ಕುರಿತ ವಾದ ವಿವಾದ ಹಿನ್ನೆಲೆಯಲ್ಲಿ ಸರಕಾರ ತಜ್ಞರ ಸಮಿತಿ ರಚಿಸಿತ್ತು. ಸಮಿತಿಗೆ ನೀಡಿದ ಅವಕಾಶ 2 ತಿಂಗಳು. ತಜ್ಞರ ಸಮಿತಿ ಕನಿಷ್ಠ 6 ತಿಂಗಳು ಅವಧಿ ಕೇಳಿತ್ತು. ಆದರೆ ಸರಕಾರ ದಿಢೀರ್ ವರದಿ ಪಡೆದಿದೆ. ಪ್ರತ್ಯೇಕ ಧರ್ಮಕ್ಕೆ ಅದು ಒತ್ತಡ ಹಾಕುತ್ತಿದೆ. ಹಿಂದಿನಿಂದಲೂ ಒಂದಾಗಿದ್ದ ಧರ್ಮವನ್ನು ಈಗ ಛಿದ್ರಗೊಳಿಸುವುದು ಸರಿಯೇ ಎಂದು ಸ್ವಾಮೀಜಿಗಳು ಪ್ರಶ್ನಿಸಿದರು. ಸಿಎಂ ಭೇಟಿ ಬಳಿಕ ಮಾತನಾಡಿದ ದಿಂಗಾಲೇಶ್ವರ ಸ್ವಾಮೀಜಿ‌, ವೀರಶೈವ-ಲಿಂಗಾಯತ ಅನ್ನೋದು ಎರಡು ಒಂದೇ. ತಜ್ಞರ ಸಮಿತಿಯೇ ಸರಿಯಾಗಿ ರಚನೆ ಆಗಿಲ್ಲ.

ಸರ್ಕಾರ ಸಮಿತಿಯ ಶಿಫಾರಸ್ಸು ತಿರಸ್ಕಾರ ಮಾಡಬೇಕು. ಅವಶ್ಯಕತೆ ಇದ್ರೆ ಮತ್ತೊಂದು ಸಮಿತಿ‌ ಮಾಡಿ. ಎರಡು ಕಡೆಯ ಮುಖಂಡರನ್ನು ಈ ಸಮಿತಿಗೆ ಸೇರಿಸಿಕೊಳ್ಳಿ ಅಂತ ಮನವಿ ಮಾಡಿದ್ದೇವೆ. ಸಿಎಂ ಕೂಡಾ ಧರ್ಮದಲ್ಲಿ ಹಸ್ತಕ್ಷೇಪ ಮಾಡೊಲ್ಲ ಅಂತ ಹೇಳಿದ್ದಾರೆ. ಒಂದು ವೇಳೆ ಸಮಿತಿ ಶಿಫಾರಸ್ಸು ಅಂಗೀಕಾರ ಮಾಡಿದ್ರೆ ಹೋರಾಟ ಮಾಡ್ತೀವಿ. 3000 ಸಾಮೀಜಿಗಳ ಪೈಕಿ 50 ಮಠಾಧೀಶರು ಮಾತ್ರ ಧರ್ಮ ಒಡೆಯಲು ಮುಂದಾಗಿದ್ದಾರೆ. ಮಿಕ್ಕ ಮಠಾಧೀಶರು ನಮ್ಮ ಧರ್ಮ ಒಡೆಯಬಾರದು ಅಂತ ಹೇಳಿದ್ದಾರೆ. ಸಮಿತಿ ಶಿಫಾರಸ್ಸು ಅಂಗೀಕಾರ ಮಾಡಿದ್ರೆ ಸ್ವಾಮೀಜಿಗಳು ಹೋರಾಟ ಮಾಡೋದು ಗ್ಯಾರಂಟಿ ಎಂದು ಸಿಎಂ ಸಿದ್ದರಾಮಯ್ಯ ಗೆ ದಿಂಗಾಲೇಶ್ಚರ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

Sponsored :

Related Articles