ಹೊಚ್ಚ ಹೊಸ ಕಾರಿಗೆ ಸಗಣಿ ಬಳಿದ ಮಾಲೀಕ! ಸಗಣಿ ಹಿಂದಿದೆ ಇಂಟ್ರಸ್ಟಿಂಗ್​​ ಕತೆ!!

10662

ಕಾರು ಖರೀದಿಸಿದ ಬಳಿಕ ತಮ್ಮ ಅಭಿರುಚಿಗೆ ತಕ್ಕಂತೆ ಬದಲಾಯಿಸಿಕೊಳ್ಳೋದು ಕಾಮನ್​. ಆದರೆ ಇಲ್ಲೊಬ್ಬ ಮಾಲೀಕ ಮಾತ್ರ ಖರೀದಿಸಿದ ಹೊಚ್ಚ ಹೊಸ ಅಚ್ಚ ಬಿಳುಪಿನ ಕಾರಿಗೆ ಸಗಣಿ ಬಳಿದು ಸುದ್ದಿಯಾಗಿದ್ದಾರೆ.


ಮುಂಬೈನಲ್ಲಿ ವ್ಯಕ್ತಿಯೊಬ್ಬರು ಟೊಯೆಟೊ ಕೊರೋಲಾ ಅಲ್ಟೀಸ್​​ ಕಾರು ಖರೀದಿಸಿದ್ದಾರೆ. ಬಿಳಿ ಬಣ್ಣದ ಈ ಕಾರಿಗೆ ಆತ 5-6 ಲೇಯರ್​ನಲ್ಲಿ ಸಗಣಿ ಬಳಿದಿದ್ದು, ಬಿಳಿಬಣ್ಣದ ಕಾರು ಈಗ ಕಂದು ಬಣ್ಣ ಪಡೆದುಕೊಂಡು ಓಡಾಡುತ್ತಿದೆ. ಇಷ್ಟಕ್ಕೂ ಈ ವ್ಯಕ್ತಿ ತಮ್ಮ ಹೊಸ ಕಾರಿಗೆ ಸಗಣಿ ಬಳಿದಿರೋದರ ಹಿಂದೆ ಒಂದು ವಿಭಿನ್ನವಾದ ಕಾರಣವಿದೆ. ಬಿರುಬೇಸಿಗೆಯ ತಾಪಕ್ಕೆ ದೇಶದ ರಾಜಧಾನಿ ಸೇರಿದಂತೆ ಎಲ್ಲ ಪ್ರಮುಖ ನಗರಗಳು ಬಿಸಿಲಿನ ತಾಪಕ್ಕೆ ಉರಿದುಹೋಗುತ್ತಿವೆ. ಕಾರಿನ ಒಳಗೆ ಎಷ್ಟು ಪ್ರಮಾಣದಲ್ಲಿ ಏಸಿಯಿದ್ದರೂ ಸಾಕಾಗುತ್ತಿಲ್ಲ. 40 ಡಿಗ್ರಿ ತಾಪಮಾನ ದಾಟುತ್ತಿದೆ.

ad

ಹೀಗಾಗಿ ಉರಿಬಿಸಿಲಿನ ತಾಪದಿಂದ ಸ್ವಲ್ಪ ಪ್ರಮಾಣದಲ್ಲಾದರೂ ರಕ್ಷಣೆ ಪಡೆಯುವ ಉದ್ದೇಶದಿಂದ ಕಾರು ಮಾಲೀಕ ತನ್ನ ಕಾರಿಗೆ ಸಗಣಿಯನ್ನು ಬಳಿದಿದ್ದಾರೆ. ಕಾರಿನ ಬಂಪರ್, ನಂಬರ್ ಪ್ಲೇಟ್​, ಲೋಗೋ, ಬ್ರೇಕ್ ಲೈಟ್​, ಇಂಡಿಕೇಟರ್ ಬಿಟ್ಟು ಬೇರೆ ಜಾಗಗಳಲ್ಲಿ ನೀಟಾಗಿ ಸಗಣಿಯನ್ನು ಬಳಿಯಲಾಗಿದೆ.

ಗ್ರಾಮೀಣ ಭಾಗದಲ್ಲಿ ವಾತಾವರಣದಲ್ಲಿರುವ ಬಿಸಿಲಿನ ತಾಪಮಾನ ತಡೆಯಲು ಸಗಣಿ ನೆರವಾಗುತ್ತದೆ ಎಂಬ ನಂಬಿಕೆ ಇದ್ದು, ಹೀಗಾಗಿ ಮನೆಯ ನೆಲಗಳಿಗೆ ಸಗಣಿಯನ್ನು ಬಳಿಯಲಾಗುತ್ತದೆ. ಆದರೆ ಮುಂಬೈನಲ್ಲಿ ಈ ಸಗಣಿ ಬಳಿಯುವ ವಿಧಾನ ಎಷ್ಟರ ಮಟ್ಟಿಗೆ ತಾಪಮಾನ ತಡೆಯುವಲ್ಲಿ ಯಶಸ್ವಿಯಾಗಿದೆ ಎಂಬ ಮಾಹಿತಿ ಮಾತ್ರ ಲಭ್ಯವಾಗಿಲ್ಲ. ಆದರೆ ಜನರು ಮಾತ್ರ ಈ ಕಾರು ನೋಡಿ ಅಚ್ಚರಿಗೊಂಡಿದ್ದಾರೆ.

Sponsored :

Related Articles