ದೇಶಕ್ಕೆ ಮೊದಲ ಪದಕದ ಗೌರವ ತಂದ ಕರ್ನಾಟಕದ ಹುಡುಗ ಗುರುರಾಜ್​!

324
P.Gururaj won Silver medal in Weight Lifting.
P.Gururaj won Silver medal in Weight Lifting.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್​ವೆಲ್ತ್​​​​ ಗೇಮ್ಸ್​​ನಲ್ಲಿ ಭಾರತಕ್ಕೆ ಮೊದಲ ಬೆಳ್ಳಿ ಪದಕ ಒಲಿದು ಬಂದಿದ್ದು, ಈ ಗೌರವವನ್ನು ಕರ್ನಾಟಕದ ಗುರುರಾಜ್ ಪೂಜಾರಿ ತಂದುಕೊಟ್ಟಿದ್ದಾರೆ ಎಂಬುದು ನಮ್ಮ ಹೆಮ್ಮೆ.

ad

ಹೌದು ಕುಂದಾಪುರದ ಗುರುರಾಜ್ ಪೂಜಾರಿ ಅವರು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಗೇಮ್ಸ್‌ 2018ರಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದಾರೆ. ವೇಟ್‌ಲಿಫ್ಟಿಂಗ್‌ನ ಪುರುಷರ 56 ಕೆಜಿ ವಿಭಾಗದಿಂದ ಸ್ಪರ್ಧಿಸಿದ್ದ ಕರ್ನಾಟಕದ ಮಂಗಳೂರು ಮೂಲದ ಕುಂದಾಪುರದ ಗುರುರಾಜ್ ಪೂಜಾರಿ ಅವರು ಬೆಳ್ಳಿ ಪದಕ ಗಳಿಸಿದ್ದಾರೆ. 25 ವರ್ಷದ ಗುರುರಾಜ್ ಅವರು ವೈಯಕ್ತಿಕ ಅತ್ಯುತ್ತಮ ಸಾಧನೆಯಾದ 249 (111+134) ಕೆಜಿ ಭಾರ ಎತ್ತುವ ಮೂಲಕ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಕಳೆದ ಮೂರು ಬಾರಿ ಚಾಂಪಿಯನ್ ಎನಿಸಿಕೊಂಡಿರುವ ಮಲೇಷಿಯಾದ ಮೊಹಮ್ಮದ್ ಇಜಹಾರ್ ಪ್ರಥಮ ಸ್ಥಾನ ಪಡೆದಿದ್ದಾರೆ. ಲಾರಿ ಚಾಲಕನ ಮಗನಾಗಿರುವ ಗುರುರಾಜ್ ಅವರು ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಈಗ ಭಾರತೀಯ ವಾಯುಸೇನೆಯ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ.ಅತ್ಯಂತ ಬಡ ಕುಟುಂಬದಿಂದ ಬಂದಿರುವ ಗುರುರಾಜ್ ಅವರಿಗೆ ಬೆಳ್ಳಿ ಗೆದ್ದಿರುವುದು ದೇಶಕ್ಕೆ ಮಾತ್ರವಲ್ಲದೇ ಕರ್ನಾಟಕಕ್ಕೂ ಕೂಡ ಹೆಮ್ಮೆ ಹಾಗೂ ಗೌರವ ತಂದಿದೆ. ಇನ್ನು ಬೆಳ್ಳಿ ಪದಕ ಪಡೆದ ಬಳಿಕ ಮಾತನಾಡಿದ ಗುರುರಾಜ್ ಪೂಜಾರಿ, ಈ ಬೆಳ್ಳಿ ನನಗೆ ಮಾತ್ರವಲ್ಲ, ಬದುಕಿನಲ್ಲಿ ಕಷ್ಟವನ್ನೇ ಕಂಡಿರುವ ನನ್ನ ಕುಟುಂಬದ ಸುಧಾರಣೆಗೂ ಸಹಾಯಕವಾಗಲಿದೆ ಎಂದು ಗುರುರಾಜ್ ಭಾವುಕವಾಗಿ ನುಡಿದಿದ್ದಾರೆ.

Sponsored :

Related Articles