ಗಣೇಶಾವತಾರದಲ್ಲಿ ಸಿನಿ ದಿಗ್ಗಜರ ಪೈಪೋಟಿ…! ಮಾರುಕಟ್ಟೆಗೆ ಬಂದ ಸುಯೋಧನ, ಪೈಲ್ವಾನ್​ ಹಾಗೂ ಕೆಜಿಎಫ್​ ಗಣೇಶ​!!

848

ಪ್ರತಿ ಬಾರಿ ಗಣೇಶನ ಹಬ್ಬಕ್ಕೆ ಟ್ರೆಂಡಿ ಗಣೇಶ್​ನ ಮೂರ್ತಿಗಳು ಮಾರುಕಟ್ಟೆಗೆ ಬರುವ ಮೂಲಕ ಆಸ್ತಿಕರನ್ನು ಸೆಳೆಯುತ್ತವೆ. ಆ ವರ್ಷದ ಮೇಜರ್​ ಹ್ಯಾಪನಿಂಗ್​​ ಸೇರಿದಂತೆ ರಾಜಕೀಯ ವಿದ್ಯಮಾನಗಳು ಕೂಡ ಗಣೇಶಾವತಾರದಲ್ಲಿ ಮೂಡಿ ಬರೋದು ಕಾಮನ್​. ಈ ಬಾರಿ ಈ ಸಾಲಿಗೆ ಸಿನಿಮಾ ಟ್ರೆಂಡಿ ಗಣೇಶ್ ವಿಗ್ರಹಗಳು ಸೇರ್ಪಡೆಗೊಂಡಿವೆ.

ad

ಹೌದು ಮಾರುಕಟ್ಟೆಯಲ್ಲಿ  ಸೂಪರ್‌ ಹಿಟ್‌ ಆದ ಸಿನಿಮಾದ ಶೈಲಿಯ ಗಣೇಶನಿಗೆ ಬಹುಬೇಡಿಕೆ ಇರುತ್ತದೆ ಇಷ್ಟು ದಿನ ಬೆಳ್ಳಿ ಪರದೆಯ ಮೇಲೆ ಪೈಪೋಟಿಯಲ್ಲಿದ್ದ ನಟರು, ಇದೀಗಾ ಗಣೇಶನ ಅವತಾರದಲ್ಲಿ ಸಖತ್ ಹವಾ ಕ್ರಿಯೇಟ್ ಮಾಡುತ್ತಿದ್ದಾರೆ. ಈ ಬಾರಿಯ ಗಣೇಶೋತ್ಸವವನ್ನು ನಾನಾ ಬಗೆಯ ಗಣೇಶ ಮೂರ್ತಿಗಳು ಸಿನಿ ದಿಗ್ಗಜರ ಅವತಾರದಲ್ಲಿ ಟ್ರೆಂಡಿಂಗ್ ಕ್ರಿಯೆಟ್ ಮಾಡುತ್ತಿವೆ.

ಕಳೆದ ಬಾರಿ ಪ್ರಭಾಸ್‌ ಅಭಿನಯದ ‘ಬಾಹುಬಲಿ’, ಸುದೀಪ್‌ ಮತ್ತು ಶಿವರಾಜ್‌ ಕುಮಾರ್‌ ನಟನೆಯ ‘ದಿ ವಿಲನ್‌’ ಸೇರಿದಂತೆ ಹಲವು ಚಿತ್ರಗಳ ಥೀಮ್‌ ಬಳಸಿಕೊಂಡು ಗಣೇಶ ಮೂರ್ತಿಯನ್ನು ತಯಾರು ಮಾಡಲಾಗಿತ್ತು. ಈ ಬಾರಿ ಯಶ್‌ ನಟನೆಯ ‘ಕೆಜಿಎಫ್‌ 2’ ಚಿತ್ರದ ಅವತಾರದಲ್ಲಿ. ಕಿಚ್ಚ ಅಭಿನಯದ ‘ಪೈಲ್ವನ್’ ಅವತಾರದಲ್ಲಿ ಹಾಗೂ ದರ್ಶನ್ ನಟನೆಯ ಕರುಕ್ಷೇತ್ರದ ‘ಸುಯೋಧನನ’ ಅವತಾರದಲ್ಲಿ ಮಾರುಕಟ್ಟೆಯಲ್ಲಿ ತರಹೇವಾರಿ ಗಣೇಶ ಮೂರ್ತಿಗಳು ಬಂದಿದೆ.

ಈಗಾಗಲೆ ಈ ಸಿನಿಮಾಗಳು ಸ್ಯಾಂಡಲ್ ವುಡ್ ನಲ್ಲಿ ಸಖತ್ ಹವಾ ಕ್ರಿಯೆಟ್ ಮಾಡಿದೆ. ಅಲ್ಲದೆ ತನ್ನದೇ ಆದ ಟ್ರೆಂಡಿಂಗ್ ಸೆಟ್ ಮಾಡಿದ್ದು ಈ ಸಿನಿಮಾಗಳ ಕ್ರೇಜ್ ಗೆ ಈಗ ಗಣೇಶ ಸಾಕ್ಷಿ ಆಗಿದ್ದಾನೆ. ಈ ಡಿಫರೆಂಟ್ ಸ್ಟೈಲ್ ಗಣೇಶಗಳ ವಿಡಿಯೋ ಹಾಗೂ ಪೋಟೋಗಳು ಸಾಮಾಜಿಕ ಜಾಲತಾಣಳಲ್ಲಿ ಸಖತ್ ವೈರಲ್ ಆಗಿದ್ದು, ಯುವಕರಲ್ಲಿ ಹಬ್ಬದ ಉತ್ಸಾಹ ನೂರ್ಮಡಿಯಾಗುತ್ತಿದೆ.

 

ಸಿನಿಮಾ ಸಿಗ್ನೇಚರ್‌ ಫೋಸ್‌ ಇಟ್ಟುಕೊಂಡು ಬರುತ್ತಿರುವ ಗಣೇಶ ಮೂರ್ತಿಗಳೆಲ್ಲವೂ ಬಣ್ಣ ರಹಿತವಾಗಿರುವುದು ವಿಶೇಷ. ಮಣ್ಣಿನಿಂದಲೇ ಸಂಪೂರ್ಣ ರಚಿಸಲಾಗಿದ್ದು, ಸೀಡ್ಸ್‌ ಮಾದರಿಯ ಗಣೇಶಗಳಿವೆ. ಹಾಗಾಗಿ ‘ಇಕೋ-ಫ್ರೆಂಡ್ಲಿ’ಯಾಗಿವೆ. ಹಬ್ಬ ಮುಗಿದ ನಂತರ ಮನೆಯಲ್ಲಿಯೇ ಪಾಟ್‌ವೊಂದರಲ್ಲಿಅದನ್ನು ಗಿಡವಾಗಿ ಬೆಳೆಸಬಹುದು. ಹಾಗಾಗಿಯೇ ವೈವಿಧ್ಯಮಯ ಹೂವುಗಳ ಸೀಡ್ಸ್‌ ಅನ್ನು ಬಳಸಲಾಗಿದೆ.

Sponsored :

Related Articles