ಬಾರ್​ ಆಗಿ ಬದಲಾಗಿದೆ ಚರ್ಚ್​ ಸ್ಟ್ರೀಟ್​​!

417
Peoples Drink Liquor To in front of Police.

ನಗರದಲ್ಲಿ ಇತ್ತೀಚಿಗೆ ಪುಂಡರ ಅವಾಂತರ ಹೆಚ್ಚುತ್ತಲೇ ಇದೆ.

ad

ಮೊನ್ನೆಯಷ್ಟೇ ಯಶ್ವಂತಪುರದಲ್ಲಿ ಕುಡಕರ ತಂಡವೊಂದು ಅರೆಬೆತ್ತಲೆಯಾಗಿ ಕಾರಿನ ಮೇಲೆ ಮೆರವಣಿಗೆ ನಡೆಸಿದ ಬೆನ್ನಲ್ಲೇ ಇದೀಗ ಹೊಸದಾಗಿ ನಿರ್ಮಾಣವಾಗಿರುವ ಚರ್ಚ್​​ಸ್ಟ್ರೀಟ್​​​ ಕುಡುಕರ ಅಡ್ಡವಾಗಿ ಬದಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಪೊಲೀಸ್ ಇಲಾಖೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮಧ್ಯರಾತ್ರಿ 2.30ರವರೆಗೂ ಇಲ್ಲಿ ಮದ್ಯ ಮಾರಾಟವಾಗುತ್ತಿದ್ದು, ಕುಡುಕರು ರಸ್ತೆಯಲ್ಲಿಯೇ ಮತ್ತೇರಿಸಿಕೊಳ್ತಿದ್ದಾರೆ. ಆಶ್ಚರ್ಯ ಅಂದ್ರೆ ಪೊಲೀಸರ ಎದುರೇ ನೋ ಪಾರ್ಕಿಂಗ್​​ನಲ್ಲಿ ಕಾರು ನಿಲ್ಲಿಸಿ, ಕಾರಿನ ಮೇಲೆ ಮದ್ಯದ ಗ್ಲಾಸ್ ಇಟ್ಟುಕೊಂಡು ರಾಜಾರೋಷವಾಗಿ ಮದ್ಯ ಸೇವಿಸುತ್ತಿದ್ದಾರೆ.

ಚರ್ಚ್​​ ಸ್ಟ್ರೀಟ್​ನಲ್ಲಿ ನಡೆಯುತ್ತಿರುವ ಕುಡುಕರ ಹಾವಳಿ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯ ಕಣ್ಣಾರೆ ಕಂಡ್ರೂ ಪೊಲೀಸರು ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿದ್ದಾರೆ. ನೋ ಪಾರ್ಕಿಂಗ್​ನಲ್ಲಿ ವಾಹನ ನಿಲ್ಲಿಸಿಕೊಂಡು ಮದ್ಯಪಾನ ಸೇವಿಸುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರೋ ಸಾರ್ವಜನಿಕರು ಪೊಲೀಸರನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

Sponsored :

Related Articles