ನಾಯಿ ಕದ್ದ ಸ್ಟುಡೆಂಟ್ಸ್​ ಅಂದರ್​- ಒಂದೇ ಗಂಟೆಯಲ್ಲಿ ಡಾಗ್ ಕಿಡ್ನಾಪ್​ ಟ್ರೇಸ್ ಮಾಡಿದ ಪೊಲೀಸರು!

336
Police Arrest Students For stole Dog.

ಸಿಲಿಕಾನ ಸಿಟಿಯಲ್ಲಿ ಸರಗಳ್ಳತನ,ಬೈಕ್​,ಕಾರು ಕಳ್ಳತನ ಮಾಮೂಲಾಗಿತ್ತು. ಆದರೇ ಮನೆ ಕಾಯೋಕೆ ಸಾಕಿರೋ ನಾಯಿನೂ ಕದೀತಾರೆ ಅಂದ್ರೆ ನಂಬ್ತಿರಾ? ನೀವು ನಂಬಲೇ ಬೇಕು. ಯಾಕಂದ್ರೆ ಮನೆ ಮುಂದೆ ಕಟ್ಟಲಾಗಿದ್ದ ನಾಯಿಯನ್ನು ಕದ್ದ ಖರ್ತನಾಕ ಕಳ್ಳರು ಇದೀಗ ಪೊಲೀಸರ್​​ ಕಸ್ಟಡಿ ಸೇರಿದ್ದು, ತಮ್ಮ ನೆಚ್ಚಿನ ನಾಯಿಯನ್ನು ಕಳ್ಳರಿಂದ ರಕ್ಷಿಸಿಕೊಟ್ಟ ಪೊಲೀಸರಿಗೆ ನಾಯಿಮಾಲೀಕರು ಪೇಸ್​ಬುಕ್​ ಮೂಲಕ ಧನ್ಯವಾದ ಹೇಳಿದ್ದಾರೆ.

ad

ಹೌದು ನಾಯಿ ಕಳ್ಳತನ ಮಾಡಿದ ಆರೋಪದ ಅಡಿಯಲ್ಲಿ ಇಬ್ಬರು ಡಿಪ್ಲೋಮ್ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಅರುಣ್ ಗಿರೀಶ್ ಬಂಧಿತರು. ಯಸ್ ಕಳೆದ ಶನಿವಾರ ಬೆಳ್ಲಗ್ಗೆ ಬ್ಯಾಡರಹಳ್ಳಿ ವಿಘ್ನೇಶ್ವರನಗರದ ನಿವಾಸಿ ಮೂರ್ತಿ ಎಂಬುವರು ಬೀಗಲ್ ನಾಯಿಗೆ ಸ್ನಾನಮಾಡಿಸಿ ಮನೆಯ ಹೊರಗೆ ಬೀಸಿಗೆ ಕಟ್ಟಿ ಹಾಕಿದ್ರು. ಈ ವೇಳೆಯಲ್ಲಿ ನಾಯಿಯನ್ನು ವಾಚ್ ಮಾಡಿದ ಇಬ್ಬರು ಕಳ್ಳರು ನಾಯಿಯನ್ನು ಬೈಕ್ ನಲ್ಲಿ ಬಂದು ಎತ್ಕೋಂಡು ಎಸ್ಕೇಪ್ ಆಗಿದ್ದಾರೆ. ಘಟನೆ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಮೂರ್ತಿ ದೂರು ನೀಡಿದ್ರು.

ದೂರು ದಾಖಲಿಸಿಕೊಂಡಿದ್ದ ಬ್ಯಾಡರಹಳ್ಳಿ ಪೊಲೀಸ್ರು ಸಿಸಿಟಿವಿ ಪರಿಶೀಲನೆ ನಡೆಸಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಬೈಕ್ ನಂಬರ್ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಒಂದು ಗಂಟೆಯೊಳಗೆ ಇಬ್ಬರು ಆರೋಫಿಗಳನ್ನು ಬಂಧಿಸಿದ್ದಾರೆ. ಇನ್ನು ಕಳ್ಳತನವಾಗಿದ್ದ ಬೀಗಲ್ ನಾಯಿ ಮಾಲೀಕರ ಕೈ ಸೇರಿದೆ. ಇನ್ನು ನಾಯಿ ಎಂದು ನಿರ್ಲಕ್ಷ್ಯ ತೋರದೇ ತಕ್ಷಣ ಕಾರ್ಯಾಚರಣೆ ನಡೆಸಿ ತಮ್ಮ ಮೆಚ್ಚಿನ ನಾಯಿಯನ್ನು ರಕ್ಷಿಸಿದ ಇನ್ಸಪೆಕ್ಟರ್​ ಕೆ.ಪಿ.ಸತ್ಯನಾರಾಯಣ ಹಾಗೂ ತಂಡದ ಬಗ್ಗೆ ನಾಯಿ ಮಾಲೀಕರು ಪೇಸ್​ಬುಕ್​​ನಲ್ಲಿ ಶ್ಲಾಘಿಷಿಸಿದ್ದಾರೆ.

Sponsored :

Related Articles