ಮೂಡಬಿದ್ರೆ ಬಿಜೆಪಿ ಕ್ಯಾಂಡಿಡೇಟ್ ಹತ್ಯೆಗೆ ನಡೆದಿತ್ತು ಸಂಚು- ಆರೋಪಿಗಳು ಪೊಲೀಸ್ ಬಲೆಗೆ -ಬೆಚ್ಚಿಬಿದ್ದ ಕರಾವಳಿ!!

1335
Police Arrested Accused Person for Try to Murder BJP Candidate in Mangalore.
Police Arrested Accused Person for Try to Murder BJP Candidate in Mangalore.

ಚುನಾವಣೆ ಆರಂಭವಾಗುತ್ತಿದ್ದಂತೆ ರಕ್ತದೋಕುಳಿ ಆರಂಭವಾಗೋದು ಸಾಮಾನ್ಯ ಎಂಬಂತಾಗಿದೆ.

ad

ಇಂತಹುದೇ ಕೃತ್ಯವೊಂದು ಮೂಡಬಿದ್ರೆಯಲ್ಲಿ ನಡೆದಿದ್ದು, ಬಿಜೆಪಿ ಟಿಕೆಟ್ ಆಕಾಂಕ್ಷಿಯೊಬ್ಬರ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.ದಕ್ಷಿಣಕನ್ನಡ ಜಿಲ್ಲೆಯ ಮುಲ್ಕಿ-ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಬಿಜೆಪಿ ಮುಖಂಡ ಈಶ್ವರ್ ಕಟೀಲ್ ಅವರ ಕೊಲೆಗೆ ಸಂಚು ನಡೆಸಲಾಗಿತ್ತು ಎಂಬ ಮಾಹಿತಿ ಇದೀಗ ಸುದ್ದಿಯಾಗಿದೆ.

ಇತ್ತೀಚೆಗೆ ಮಂಗಳೂರು ಪೊಲೀಸರು ದರೊಡೆ ಪ್ರಕರಣಕ್ಕೆ ಸಂಬಂಧಿಸಿದೆ ಮೂವರು ಆರೋಪಿಗಳನ್ನು ಬಂಧಿಸಿದ್ದರು, ಅವರನ್ನು ತೀವ್ರ ವಿಚಾರಣೆಗೊಳಿಸಿದಾಗ ಈ ಮಾಹಿತಿ ಹೊರಬಂದಿದೆ. ಬಂಧಿತ ಆರೋಪಿಗಳು ಬಿಜೆಪಿ ಮುಖಂಡ ಈಶ್ವರ್ ಕಟೀಲ್ ಅವರ ಕೊಲೆಗೆ ಯತ್ನಿಸಿದ್ದಾರೆ. ಆದರೆ ಅದೃಷ್ಠವಶಾತ್ ಈಶ್ವರ್ ಕಟೀಲ್ ಆರೋಪಿಗಳ ಕೈ ಸಿಗದೆ ಪಾರಾಗಿದ್ದರು. ಈ ಮಾಹಿತಿ ತಿಳಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು, ಬಂಧಿತರನ್ನು ಪ್ರದೀಪ್ ಪೂಜಾರಿ, ದಿನೇಶ್ ಬೆಳ್ಚಡ ಮತ್ತು ಶಿವಪ್ರಸಾದ್ ಎಂದು ಗುರುತಿಸಲಾಗಿದೆ.

ಈ ನಡುವೆ ರಾಜಕೀಯ ಒತ್ತಡದಿಂದಾಗಿ ಪೊಲೀಸರು ಈ ಪ್ರಕರಣವನ್ನು ದರೋಡೆಗೆ ಸಂಚು ಆರೋಪ ಎಂದು ಫಿಕ್ಸ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಬಂಧಿತರು ಕಾಂಗ್ರೇಸ್ ಮುಖಂಡನೋರ್ವನ ಬೆಂಬಲಿಗರೆಂದು ಹೇಳಲಾಗಿದ್ದು, ಈ ಹಿನ್ನಲೆಯಲ್ಲಿ ಪೊಲೀಸರ ಮೇಲೆ ರಾಜಕೀಯ ಒತ್ತಡ ಹೇರಿ ಪ್ರಕರಣವನ್ನು ದರೋಡೆ ಸಂಚು ಎಂದು ಫಿಕ್ಸ್ ಮಾಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣ ರಾಜಕೀಯ ಬಣ್ಣ ಬರುವ ಸಾಧ್ಯತೆ ಹಿನ್ನಲೆಯಲ್ಲಿ ಕಾಂಗ್ರೇಸ್ ಮುಖಂಡರು ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಲಾಗಿದೆ. ಈ ನಡುವೆ ಪೊಲೀಸರು ಪ್ರಕರಣದ ಪ್ರಮುಖ ಸೂತ್ರಧಾರಿಗಳಾದ ನವೀನ್ ಕುಮಾರ್ ಕಟೀಲ್ ಅವರ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.

Sponsored :

Related Articles