ಓಡಿ ಹೋಗುತ್ತಿದ್ದ ಹೈಟೆಕ್ ಕಳ್ಳರನ್ನು ಬೆನ್ನಟ್ಟಿ ಹಿಡಿದ ಹುಬ್ಬಳ್ಳಿ ಪೊಲೀಸರು..

384

ಕಾರಿನಲ್ಲಿದ್ದವರ ಗಮನ ಬೇರೆ ಕಡೆಗೆ ಸೆಳೆದು ಕಳ್ಳತನ ಮಾಡ್ತಾಯಿದ್ದ ಹೈಟೆಕ್ ಕಳ್ಳರನ್ನು ಹುಬ್ಬಳ್ಳಿ ಶಹರ ಪೊಲೀಸರು ಬೆನ್ನಟ್ಟಿ ಹಿಡಿದು ಸೈ ಎನಿಸಿಕೊಂಡಿದ್ದಾರೆ.

ad

ಹುಬ್ಬಳ್ಳಿಯ ರೈಲ್ವೇ ನಿಲ್ದಾಣದ ಬಳಿ ಸಂಶಯಾಸ್ಪದವಾಗಿ ಓಡಾಡುತ್ತಿರುವಾಗ ಪೊಲೀಸರು ವಿಚಾರಣೆ ಮಾಡಲು ಮುಂದಾದಾಗ ಕಳ್ಳರು ಓಡಿ ಹೋಗಿದ್ದಾರೆ. ಆಗ ಶಹರ ಪೊಲೀಸ ಠಾಣೆಯ ಸಿಬ್ಬಂದಿಗಳಾದ ಸದಾನಂದ ಕಲಘಟಗಿ, ಮಂಜು ಹಾಲವರ, ಶ್ರೀನಿವಾಸ ಯರಗುಪ್ಪಿ, ಚಂದ್ರಶೇಖರ್ ಬೆನ್ನಟ್ಟಿ ಹಿಡಿದು ಠಾಣೆಗೆ ಕರೆದುಕೊಂಡು ಬಂದಿದ್ದಾರೆ.

ತಮಿಳುನಾಡು ಮೂಲದ ಸತ್ಯಮೂರ್ತಿ ಜ್ಞಾನವೇಲು, ಕುಮಾರೇಶನ್ ಸೇಲ್ವರಾಜ್, ಕೆ ಬಾರದಿರಾಜ್ ಕೇಶವನ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ 1 ಲಕ್ಣ 50 ಸಾವಿರ ಮೌಲ್ಯದ ಒಂದು ಲ್ಯಾಪ್‌ಟಾಪ್ ಹಾಗೂ 1 ಲಕ್ಷ ನಗದು ವಶಪಡೆಸಿಕೊಳ್ಳಲಾಗಿದೆ.

ಕರ್ನಾಟಕ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ದೇಶದ ನಾನಾ ಕಡೇ ಕಳ್ಳತನ ಮಾಡಿರೋ‌ ಆರೋಪಿಗಳಾಗಿದ್ದು, ಇನ್ನೂ ಹೆಚ್ಚಿನ ತನಿಖೆ ಮಾಡಿದ್ರೆ, ಹಲವು ಪ್ರಕರಣಗಳ ಹೊರಗಡೆ ಬರುತ್ತವೆ ಅಂತಾ ಡಿಸಿಪಿ ಬಿ ಎಸ್ ನೇಮಗೌಡ ಹೇಳಿದ್ದಾರೆ. ಇನ್ನೂ ಶಹರ ಪೊಲೀಸ ಠಾಣೆಯಲ್ಲಿ ಬೇರೆ ಕಡೆ ಗಮನ ಸೆಳೆದು ಕಳ್ಳತನ ಮಾಡಿ ಕುರಿತು ಎರಡು ಪ್ರಕರಣಗಳ ದಾಖಲಾಗಿದ್ದವು. ಶಹರ ಪೊಲೀಸರು ಎರಡು ಪ್ರಕರಣಗಳನ್ನು ಬೇದಿಸಿ ಅಂತರರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಕ್ಕೆ ಕಮೀಷನರ್ ಎಮ್ ಎನ್ ನಾಗರಾಜ್ 10 ಸಾವಿರ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ.

Sponsored :

Related Articles