ಮೇಲಾಧಿಕಾರಿಗಳಿಂದಲೇ ಸೆಲ್ಯೂಟ್​ ಸ್ವೀಕರಿಸಿದ ಪೊಲೀಸ್ ಇನ್ಸಪೆಕ್ಟರ್​​! ಈ ಸ್ಟೋರಿ ಅಸಲಿಯತ್ತೇನು ಗೊತ್ತಾ?!

2461

ಮಾಮೂಲಿ ಸರ್ಕಲ್​ ಇನ್ಸಪೆಕ್ಟರ್​ ಆಗಿ ಮೇಲಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಸೆಲ್ಯೂಟ್​ ಹೊಡೆಯುತ್ತಿದ್ದ ಪೊಲೀಸ್​ ಇನ್ಸಪೆಕ್ಟರ್​ರೊಬ್ಬರು ಈಗ ತಮ್ಮ ಮೇಲಾಧಿಕಾರಿಗಳಿಂದಲೇ ಸೆಲ್ಯೂಟ್​ ಸ್ವೀಕರಿಸುವಂತ ಹಂತಕ್ಕೆ ತಲುಪಿದ್ದಾರೆ. ಇದಕ್ಕೆ ಕಾರಣವಾಗಿದ್ದು, ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆ.


ಹೌದು ಆಂಧ್ರಪ್ರದೇಶದ ಇನ್ಸಪೆಕ್ಟರ್ ಗೋರಂಟ್ಲಿ ಮಾಧವ್​ ಎಂಬುವವರೇ ಹೀಗೆ ಅದೃಷ್ಟಬದಲಾಯಿಸಿಕೊಂಡ ಇನ್ಸಪೆಕ್ಟರ್​. ಪೊಲೀಸ್ ಅಧಿಕಾರಿಯಾಗಿದ್ದ ಮಾಧವ್ ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಆಂಧ್ರಪ್ರದೇಶದ ಹಿಂದೂಪೂರ್ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದಾರೆ.

ad


ವೈಎಸ್​​ಆರ್​ಸಿಪಿ ಪಕ್ಷದಿಂದ ಟಿಕೇಟ್ ಪಡೆದು ಚುನಾವಣೆಗೆ ಸ್ಪರ್ಧಿಸಿದ್ದ ಗೋರಂಟ್ಲಿ ಮಾಧವ್ ತೆಲುಗು ದೇಶ್ಂ ಪಕ್ಷದ ಸಂಸದ ಕೃಷ್ಟಾಪ್ಪ ನಿಮ್ಮಾಲಾ ವಿರುದ್ಧ 140748 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮಾಧವ್​ ಸಂಸದರಾಗಿ ಆಯ್ಕೆಯಾಗುತ್ತಿದ್ದಂತೆ ಮೊದಲು ಅವರ ಮೇಲಾಧಿಕಾರಿಗಳಾಗಿದ್ದವರೆಲ್ಲ ಮಾಧವ್​ ಅವರಿಗೆ ಸೆಲ್ಯೂಟ್​ ಹೊಡೆದು ಗೌರವಿಸುತ್ತಿದ್ದು, ಈ ವಿಡಿಯೋ ಹಾಗೂ ಪೋಟೋ ಎಲ್ಲೆಡೆ ವೈರಲ್ ಆಗಿದೆ.

ಇನ್ನು ಈ ಪೋಟೋಗಳಿಗೆ ಪ್ರತಿಕ್ರಿಯಿಸಿರುವ ಮಾಧವ್, ನನ್ನ ಮೇಲಾಧಿಕಾರಿಗಳು ನನ್ನನ್ನು ಗೌರವಿಸಿದ್ದಾರೆ. ನಾನು ಅವರನ್ನು ಮೊದಲಿನಂತೆ ಗೌರವಿಸುತ್ತೇನೆ ಎಂದಿದ್ದಾರೆ. ಒಟ್ಟಿನಲ್ಲಿ ಲೋಕಸಭಾ ಚುನಾವಣೆ ಇನ್ಸಪೆಕ್ಟರ್​ ಒಬ್ಬರ ಅದೃಷ್ಟ ಬದಲಾಯಿಸಿದ್ದು, ಈ ಸ್ಟೋರಿ ಇದೀಗ ಹಲವರಿಗೆ ಸ್ಪೂರ್ತಿ ನೀಡುತ್ತಿದೆ.

Sponsored :

Related Articles