ಪೊಲಿಟಿಕಲ್​ ಹೈಡ್ರಾಮಾ ಕ್ಲೈಮ್ಯಾಕ್ಸ್​ಗೆ ಮುಹೂರ್ತ ಫಿಕ್ಸ್​​! ಗುರುವಾರ ಸಿಎಂಗೆ ಅಗ್ನಿ ಪರೀಕ್ಷೆ ಫಿಕ್ಸ್​! ಏನಾಗುತ್ತೆ ದೋಸ್ತಿ ಭವಿಷ್ಯ?!

218
9900071610

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಮೈತ್ರಿ ಸರ್ಕಾರದ ರಾಜಕೀಯ ಕ್ಲೈಮ್ಯಾಕ್ಸ್​ಗೆ ಮುಹೂರ್ತ ನಿಗದಿಯಾಗಿದ್ದು, ಗುರುವಾರ ಬೆಳಗ್ಗೆ 11 ಗಂಟೆಗೆ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚಿಸುವುದರೊಂದಿಗೆ ಸಮ್ಮಿಶ್ರ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ.

ad


ಅಧಿವೇಶನದ ವೇಳೆ ಮಧ್ಯಾಹ್ನ 1 ಗಂಟೆಗೆ ಸ್ಪೀಕರ್​ ರಮೇಶ್ ಕುಮಾರ್ ಕಲಾಪ ಸಲಹಾ ಸಮಿತಿ ಸಭೆ ನಡೆಸಿದ್ದು, ಸಭೆಯಲ್ಲಿ ಬಿಎಸ್​ವೈ ಸಿಎಂ ಕುಮಾರಸ್ವಾಮಿ ಇಂದೇ ವಿಶ್ವಾಸಮತ ಯಾಚಿಸಬೇಕೆಂದು ಒತ್ತಾಯಿಸಿದರು.

ಆದರೆ ಬಿಎಸ್​ವೈ ಮನವೊಲಿಸಿದ ಸ್ಪೀಕರ್​ ಗುರುವಾರ 11 ಗಂಟೆಗೆ ವಿಶ್ವಾಸಮತ ಯಾಚನೆಗೆ ಅವಕಾಶ ಕಲ್ಪಿಸಿದ್ದಾರೆ. ಹೀಗಾಗಿ ಗುರುವಾರ 11 ಗಂಟೆಗೆ ಅಧಿವೇಶನ ಉದ್ದೇಶಿಸಿ ಮಾತನಾಡಲಿರುವ ಸಿಎಂ ಕುಮಾರಸ್ವಾಮಿ ಬಳಿಕ ವಿಶ್ವಾಸಮತ ಯಾಚಿಸಲಿದ್ದು, ಸರ್ಕಾರ ಉಳಿಯುತ್ತೋ ಉರುಳುತ್ತೋ ಅನ್ನೋ ಕುತೂಹಲಕ್ಕೆ ಅಂದು ಉತ್ತರ ಸಿಗಲಿದೆ.


ಇನ್ನು ಕಲಾಪ ಸಲಹಾ ಸಮಿತಿ ಸಭೆ ವೇಳೆ ಬಿಎಸ್​ವೈ ರಾಜ್ಯ ಸರ್ಕಾರಕ್ಕೆ ಬಹುಮತವಿಲ್ಲ. ಹೀಗಾಗಿ ಕುಮಾರಸ್ವಾಮಿ ಇಂದೇ ವಿಶ್ವಾಸಮತ ಯಾಚಿಸುವಂತೆ ಆಗ್ರಹಿಸಿದ್ದರು ಎನ್ನಲಾಗಿದೆ. ಆದರೆ ನಾಳೆ ಅತೃಪ್ತ ಶಾಸಕರ ವಿಚಾರದಲ್ಲಿ ಸುಪ್ರೀಂ ಕೋರ್ಟ್​ ತೀರ್ಪು ಬರೋದರಿಂದ ತೀರ್ಪು ನೋಡಿ ಮುಹೂರ್ತ ಫಿಕ್ಸ್​ ಮಾಡಿದ್ದಾರೆ.

Sponsored :


9900071610