ಪವರ್ ಸ್ಟಾರ್ ಪುನೀತ್ ರಾಜಕುಮಾರನಲ್ಲಿ -ಕರ್ನಾಟಕ ರತ್ನ ನಟಸಾರ್ವಭೌಮ ಕಂಡ ಅಭಿಮಾನಿ.. ಕೊನೆಗೂ ಆಸೆಯನ್ನು ಈಡೇರಿಸಿದ ಅಣ್ಣಾವ್ರ ಮಗ…

400
9900071610

ಕರ್ನಾಟಕ ರತ್ನ, ನಟಸಾರ್ವಭೌಮ ದಿವಂಗತ ಡಾ: ರಾಜಕುಮಾರ ಅವರನ್ನು ಭೇಟಿ ಮಾಡಬೇಕು ಎನ್ನುವ ಮಹಾದಾಸೆಯನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ ನೆರವೇರಿಸಿದ್ದಾರೆ. ಹೌದು ಡಾಕ್ಟರ್ ರಾಜ್ ಕುಮಾರ್ ಅವರು ಸಾಯುವುದಕ್ಕೂ ಮುನ್ನ ಅವರನ್ನು ನೋಡಲೇಬೇಕು ಎಂಬ ಆಸೆಯಿಂದ ಕಾಯುತ್ತಿದ್ದ , ಆ ನಿವೃತ್ತ ಶಿಕ್ಷಕಿಯ ಆಸೆಯನ್ನು, ರಾಜ್ ಕುಮಾರ್ ಅವರ ಕರುಳಿನ ಕುಡಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕೊನೆಗೂ ಈಡೇರಿಸಿದ್ದಾರೆ .

ad

     

ಹೌದು, ಹುಬ್ಬಳ್ಳಿಯ ಗೋಕುಲ್ ರೋಡ್ ನ ಅಕ್ಷಯ ಪಾರ್ಕ್‌ ನಿವಾಸಿಯಾದ ಸುನಂದಾ ವರ್ಣೆಕರ್ ರಾಜ್ ಕುಮಾರ್ ಅವರ ಹುಚ್ಚು ಅಭಿಮಾನಿ. ವೃತ್ತಿಯಲ್ಲಿ ಶಿಕ್ಷಕಿ , ಕಳೆದ 6 ವರ್ಷಗಳ ಹಿಂದೆ ನಿವೃತ್ತಿಹೊಂದಿದ ಇವರು ಜೀವನದಲ್ಲಿ ಒಮ್ಮೊಯಾದ್ರೂ , ರಾಜ್ ಕುಮಾರ್ ಅವರನ್ನು ನೋಡಲೇಬೇಕು ಎಂಬ ಮಹದಾಶೆಯನ್ನು ಹೊತ್ತು ಕಾಯುತಿದ್ರು. ಆದ್ರೆ ನಟಸಾರ್ವಭೌಮ ಅವರನ್ನು ನೋಡುವ ಭಾಗ್ಯ ಆ ಶಿಕ್ಷಕಿಗೆ ಸಿಗಲಿಲ್ಲ.

ಆದ್ರೆ ಅವರ ಆಸೆಯನ್ನು ರಾಜ್ ಕುಮಾರ್ ಅವರ ಮಗ ಪುನೀತ್ ರಾಜ್ ಕುಮಾರ್ ಈಡೇರಿಸಿದ್ದಾರೆ. ಇನ್ನು ಸುನಂದಾ ವರ್ಣೆಕರ್ ಅವರವ ಮಗ ರಾಮ್, ತನ್ನ ಹೆತ್ತ ತಾಯಿಗೆ ಪುನೀತ್ ರಾಜ್ ಕುಮಾರ್ ಅವರನ್ನು , ಹೇಗಾದ್ರೂ ಬೇಟಿ ಮಾಡಿಸಿ ತಾಯಿಯ ಆಸೆಯನ್ನು ಈಡೇರಿಸುವ ಉದ್ದೇಶದಿಂದ ಕಳೆದ, ಮೂರನಾಲ್ಕು ವರ್ಷಗಳಿಂದ ಪುನೀತ್ ಅವರ ಸಂಪರ್ಕ ಮಾಡಿ , ಕೊನೆಗೂ ಪುನೀತ್ ರಾಜಕುಮಾರ್ ಭೇಟಿ ಮಾಡಿಸಿದ್ದಾನೆ..

ಬಾಗಲಕೋಟೆ ಜಿಲ್ಲೆಯ ಮಹಕೂಟದಲ್ಲಿ ನಡೆಯುತ್ತಿರುವ ನಟಸಾರ್ವಭೌಮ ಚಿತ್ರಿಕರಣಕ್ಕೆ ಬಂದ ಸಂದರ್ಭದಲ್ಲಿ, ತನ್ನ ತಾಯಿಯನ್ನು ಭೇಟಿ ಮಾಡಿಸಿ , ತನ್ ತಾಯಿಯ ಆಸೆಯನ್ನು ಈಡೇರಿಸಿದ್ದಾರೆ.

Sponsored :


9900071610