ಪ್ರಜ್ವಲ್ ಪ್ರಚಾರದ ವೇಳೆ ದೇವೆಗೌಡರಿಗೆ ಕ್ಷೀರಾಭಿಷೇಕ- ಅಭಿಮಾನದ ಪರಾಕಾಷ್ಠೆ ಮೆರೆದ ಕಾರ್ಯಕರ್ತರು !

680

ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಕಾಂಗ್ರೆಸ್ ತೊರೆದು ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಅರಕಲಗೂಡು ಮಂಜು ವಿರುದ್ಧ ಗೆಲುವಿಗಾಗಿ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಇಂದು ತೆರೆದ ವಾಹನದಲ್ಲಿ ಪ್ರಜ್ವಲ್ ರೇವಣ್ಣ ಭರ್ಜರಿ ಪ್ರಚಾರ ನಡೆಸಿದರು. ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಪಟ್ಟಣದಲ್ಲಿ ಕ್ಯಾಂಪೇನ್ ನಡೆಯುತ್ತಿದ್ದ ವೇಳೆ ಪ್ರಜ್ವಲ್ ವಾಹನದಲ್ಲಿದ್ದ ದೇವೇಗೌಡರ ಭಾವಚಿತ್ರಕ್ಕೆ  ಅಭಿಮಾನಿಗಳು ಕ್ಷೀರಾಭಿಷೇಕ ಮಾಡಿ ಅಭಿಮಾನ ಮೆರೆದಿದ್ದಾರೆ.

ad

ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಸ್ವಕ್ಷೇತ್ರ ಹಾಸನದಿಂದ ಈ ಬಾರಿ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದ್ದು. ಮಾರ್ಚ್ 22ರಂದು ನಾಮಪತ್ರ ಸಲ್ಲಿಸಿದ್ದಾರೆ.  ಈ ವೇಳೆ ಮಾಜಿ ಪ್ರಧಾನಿ ದೇವೆಗೌಡ,  ಸಚಿವ ಎಚ್ ಡಿ ರೇವಣ್ಣ ಹಾಗೂ ಭವಾನಿ ರೇವಣ್ಣ, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೇರಿ ಕುಟುಂಬದ ಬಹುತೇಕ ಸದಸ್ಯರು ಹಾಜರಿದ್ದು ಪ್ರಜ್ವಲಗೆ ಬೆಂಬಲ ಸೂಚಿಸಿದ್ದರು. ಆ ಬಳಿಕ ಪ್ರಜ್ವಲ್ ಪ್ರಚಾರ ಆರಂಭಿಸಿದ್ದು ಹೋದಲೆಲ್ಲ ಪ್ರಜ್ವಲ್​ಗೆ ಭವ್ಯಸ್ವಾಗತ ಹಾಗೂ ದೇವೆಗೌಡರ ಕುಟುಂಬದ ಮೇಲಿನ ಪ್ರೀತಿ ಅಭಿಮಾನದ ದೃಶ್ಯ ಎದುರಾಗಿದೆ.

 

 

ಇವತ್ತೂ ಕೂಡ ತೆರೆದ ವಾಹನದಲ್ಲಿ ಪ್ರಚಾರ ಕೈಗೊಂಡ ಪ್ರಜ್ವಲ್ ರೇವಣ್ಣ ನಿಗೆ ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಪಟ್ಟಣದಲ್ಲಿ  ಗ್ರಾಮಸ್ಥರು ಭವ್ಯ ಸ್ವಾಗತ ಕೋರಿದರು. ಅಷ್ಟೇ ಅಲ್ಲ ತೆರೆದ‌ ವಾಹನದಲ್ಲಿದ್ದ  ದೇವೇಗೌಡರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದ್ದಾರೆ.ಅಲ್ಲದೆ ಕಾರ್ಯಕರ್ತರು.ಜೆಡಿಎಸ್​  ಚಿನ್ಹೆ  ತೆನೆಹೊತ್ತ ಮಹಿಳೆಯ ಗುರುತಿಗೂ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದ್ದಾರೆ. ಒಟ್ಟಿನಲ್ಲಿ ಪ್ರಚಾರದ ವೇಳೆ ಎದುರಾಗಿರುತ್ತಿರುವ ಅಭೂತಪೂರ್ವ ಬೆಂಬಲದಿಂದ ಪ್ರಜ್ವಲ್ ರೇವಣ್ಣ ಗೆಲುವಿನ ನೀರಿಕ್ಷೆಯಲ್ಲಿದ್ದಾರೆ.

Sponsored :

Related Articles