ಡಿಕೆಶಿಗಾಗಿ ಮಿಡಿದ ಅಭಿಮಾನಿಗಳು…! ದತ್ತ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಡಿಕೆಶಿ ಬಿಡುಗಡೆಗಾಗಿ ಪ್ರಾರ್ಥನೆ…!!

357

ಇಡಿ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕಸ್ಟಡಿ ಅವಧಿ ಇಂದು ಅಂತ್ಯವಾಗಲಿದ್ದು ಇಂದು ಡಿಕೆಶಿ ಪಾಲಿಗೆ ನಿರ್ಣಾಯಕ ದಿನವಾಗಿರುವ ಹಿನ್ನೆಲೆ ಡಿಕೆ ಅಭಿಮಾನಿಗಳು ರಾಜ್ಯದ ವಿವಿಧೆಡೆ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.


ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ದೇವಲ್ ಗಾಣಗಾಪುರದಲ್ಲಿರುವ ದತ್ತಾತ್ರೇಯ ದೇವಸ್ಥಾನದಲ್ಲಿ ಮಾಜಿ ಪವರ್ ಮಿನಿಸ್ಟರ್ ಡಿ.ಕೆ.ಶಿವಕುಮಾರ್ ಅಭಿಮಾನಿಗಳು ದತ್ತನ ನಿರ್ಗುಣ ಪಾದುಕೆಗಳಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಾಜಿ ಸಚಿವ ಡಿಕೆಶಿ ಇಡಿ ಬಂಧನದಿಂದ ಹೊರಬರಲಿ ಅಂತಾ ಪ್ರಾರ್ಥಿಸಿದ್ದಾರೆ.

ad


ಈ ಹಿಂದೆ ಐಟಿ ರೇಡ್ ಆಗಿದ್ದಾಗಲೂ ಜ್ಯೋತಿಷಿಯವರ ಸಲಹೆಯಂತೆ ಡಿ.ಕೆ.ಶಿವಕುಮಾರ್ ದತ್ತ‌ನ ಸನ್ನಿಧಿಗೆ ಆಗಮಿಸಿದ್ದ ಡಿ.ಕೆ.ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ಡಿಕೆಶಿಯವರು ಇಡಿ ಬಂಧನದಲ್ಲಿದ್ದು ಇವತ್ತು ಅವರ ಕಸ್ಟಡಿ ಅಂತ್ಯವಾಗುವ ಹಿನ್ನೆಲೆಯಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ.

Sponsored :

Related Articles