ಪುಟ್ಟ ಬಾಲಕಿಯ ಹುಟ್ಟುಹಬ್ಬಕ್ಕೆ ಶುಭಕೋರಿದ ಪ್ರಧಾನಿ ಮೋದಿ!

226
9900071610

 

ad

 ಮಂಗಳೂರಿನ ಬಾಲಕಿಯೊಬ್ಬಳ 11ನೇ ವರ್ಷದ ಹುಟ್ಟು ಹಬ್ಬಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯೇ ಟ್ವೀಟ್ ಮೂಲಕ ಶುಭಕೋರಿದ್ದಾರೆ. ಮಂಗಳೂರಿನ ಮೂಡಬಿದ್ರೆ ನಿವಾಸಿ ಮಹೇಶ್ ವಿಕ್ರಮ್ ಹೆಗ್ಡೆ ಪುತ್ರಿಗೆ ಮೋದಿ ಶುಭಾಶಯ ಕೋರಿದ್ದು, ಈ ಶುಭಾಶಯವೀಗ ಮೋದಿ ಸರಳತೆಗೆ ಸಾಕ್ಷಿಯಾಗಿ ಸಾಕಷ್ಟು ವೈರಲ್​ ಆಗಿದೆ.

 

 

ವಿಕ್ರಮ್ ಅವರ ಪುತ್ರಿಗೆ ಹುಟ್ಟುಹಬ್ಬದಂದು ಏನು ಗಿಫ್ಟ್​ ಬೇಕೆಂದು ಕೇಳಿದ್ದರು. ಆಗ ಅವರ ಪುತ್ರಿ ಬೆಳಕು ತಮಗೆ ಮೋದಿಜೀ ಚಿತ್ರವಿರೋ ಕೇಕ್ ಬೇಕು ಅಂತ ಡಿಮ್ಯಾಂಡ್​ ಮಾಡಿದ್ದಾಳೆ. ಮಗಳ ಆಸೆಯಂತೆ ಪ್ರಧಾನಿ ಮೋದಿ ಭಾವಚಿತ್ರವಿರೋ ಕೇಕ್​ ತಂದು ಪುತ್ರಿ ಬೆಳಕುಗೆ ನೀಡಿದ್ದಾರೆ.
ಅಲ್ಲದೇ ಆ ಕೇಕ್​ ಫೋಟೋವನ್ನು ಬೆಳಕು ತಂದೆ ಮಹೇಶ್ ವಿಕ್ರಂ ಹೆಗ್ಡೆ, ‘pm modi is chor..! ಮಕ್ಕಳ ಹೃದಯ ಕದ್ದ ಕಳ್ಳ ಮೋದಿ ಎಂದು ವ್ಯಾಖ್ಯಾನಿಸಿ ಪ್ರಧಾನಿ ಮೋದಿಗೆ ಟ್ವೀಟ್ ಮಾಡಿದ್ದಾರೆ. ಟ್ವೀಟ್​ ಗಮನಿಸಿದ ಮೋದಿಜೀ ಬೆಳಕು ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.

Sponsored :


9900071610