ಸಂಪುಟದಲ್ಲಿ ಕಲ್ಬುರ್ಗಿಗೆ ಸಿಗದ ಪ್ರಾಧಾನ್ಯತೆ! ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಪ್ರತಿಭಟನೆ!!

351

ಬಿಎಸ್​ವೈ ಸಂಪುಟದಲ್ಲಿ ಹೈದ್ರಾಬಾದ್ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಕೂಗು ಬಲವಾಗಿ ಕೇಳಿಬಂದಿದೆ.  ಸಾಕಷ್ಟು ಬಿಜೆಪಿ ಶಾಸಕರಿದ್ದರೂ, ಹೈ-ಕ ಭಾಗಕ್ಕೆ ಸಿಕ್ಕಿದ್ದು ಕೇವಲ ಒಂದೇ ಒಂದು ಸಚಿವ ಸ್ಥಾನ. ಹೀಗಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.

ad

ಬೀದರ್​​ ಜಿಲ್ಲೆಯ ಔರಾದ್​ ಶಾಸಕ ಪ್ರಭು ಚೌಹಾಣ್​ಗೆ ಮಾತ್ರ ಬಿಎಸ್​ವೈ ಸಂಪುಟದಲ್ಲಿ  ಸಚಿವ ಸ್ಥಾನ ಸಿಕ್ಕಿದೆ. ಐವರು ಬಿಜೆಪಿ ಶಾಸಕರಿದ್ದರೂ ಕಲಬುರಗಿ ಜಿಲ್ಲೆಗೆ ಮಂತ್ರಿ ಸ್ಥಾನ ಇಲ್ಲ. ಹೈ-ಕರ್ನಾಟಕ ಕೇಂದ್ರ ಸ್ಥಾನವಾಗಿದ್ರೂ ಕಲಬುರಗಿ ಜಿಲ್ಲೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ ಹೀಗಾಗಿ ಅಲ್ಲಿನ ಶಾಸಕರ ಬೆಂಬಲಿಗರು ನೂತನ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ಕರ್ನಾಟಕ ಭಾಗಕ್ಕೆ ಬಿಎಸ್​ವೈ ಸಂಪುಟದಲ್ಲಿ ಅನ್ಯಾಯವಾಗಿದೆ. ಹೀಗಾಗಿ  ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಪ್ರತ್ಯೇಕ ಕಲ್ಯಾಣ ಕರ್ನಾಟಕ ಹೊರಾಟ ಸಮಿತಿ ಸದಸ್ಯರು ಕಲಬುರಗಿಯ ಪಟೇಲ್ ವೃತ್ತದ ಬಳಿ ಖಾಲಿ ಚೆಂಬು ಇರುವ ಫೋಟೊ ಹಿಡಿದು ಪ್ರತಿಭಟನೆ ನಡೆಸಿದ್ರು.

Sponsored :

Related Articles