ಯುವತಿಯನ್ನು ಫೇಸ್ಬುಕ್ ಮೂಲಕ ವಂಚಿಸಿದ್ದು ನಾನಲ್ಲ -ಪಿಎಸ್ಐ

1333
Whatsapp Crime Case: PSI cheats Girl in name of Love inVijayapura.
Whatsapp Crime Case: PSI cheats Girl in name of Love inVijayapura.
9900071610

ವಂಚನೆಗೆ ಟ್ವಿಸ್ಟ್

ad

ಫ್ಹೇಸ್ಭುಕ್ ವಾಟ್ಸಾಪ್ ಗಳಲ್ಲಿ ಪರಿಚಯವಾಗಿ ಪರಿಚಯ ಪ್ರೇಮವಾಗುವ ನಂತರ ವಂಚನೆಯಲ್ಲಿ ಕೊನೆಗೊಳ್ಳುವ ಪ್ರಕರಣ ಹೆಚ್ಚಾಗ್ತಿದೆ.  ಇದೇ ರೀತಿ ವಿಜಯಪುರ ಜಿಲ್ಲೆಯ ಪಿಎಸ್​ಐ ಹೀಗೆ ಯುವತಿಯನ್ನು ಪರಿಚಯ ಮಾಡ್ಕೊಂಡು ವಂಚಿಸಿದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ.

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹೊರ್ತಿಯ ಪಿಎಸ್​ಐ ಪ್ರಕಾಶ ರಾಠೋಡ ವಿರುದ್ಧ ಯುವತಿ ದೂರು ನೀಡಿದ್ಲು. ಆದ್ರೆ ಇದೀಗ ಫೇಸ್​ಬುಕ್​ ಮೂಲಕ ನಾನು ಚಾಟ್​ ಮಾಡಿಯೇ ಇಲ್ಲ ನನ್ನ ಹೆಸರಿನಲ್ಲಿ ಯಾರೋ ಮಾಡಿದ್ದಾರೆ ಅಂತಾ ಪ್ರಕಾಶ್​ ಹೇಳ್ತಿದ್ದಾರೆ.

ನಾನು ಪಿಎಸ್​ಐ ಪ್ರಕಾಶ್​ ರಾಥೋಡ್​ರಿಂದ ಮೋಸಕ್ಕೆ ಒಳಗಾಗಿದ್ದೇನೆ ಅಂತಾ ಬಾಗಲಕೋಟ ಜಿಲ್ಲೆ ಬನಹಟ್ಟಿಯ ಯುವತಿ ಎಸ್​ಪಿ ಮೊರೆ ಹೋಗಿದ್ದರು. ಬನಹಟ್ಟಿಯಲ್ಲಿ ಪ್ರಕಾಶ್​ ಕರ್ತವ್ಯದಲ್ಲಿದ್ದ ವೇಳೆ ನಮ್ಮಿಬ್ಬರಿಗೂ ಪರಿಚಯ ಆಗಿತ್ತು ಅಂತಾ ಯುವತಿ ಆರೋಪಿಸಿದ್ದು. ಇಡೀ ಪ್ರಕರಣ ಅನುಮಾನಕ್ಕೆ ಎಡೆಮಾಡಿಕೊಡ್ತಿದೆ.

Sponsored :


9900071610