ಪುನೀತ್ ರಾಜಕುಮಾರ್ ಕಾರು ಅಪಘಾತ- ಅದೃಷ್ಟವಶಾತ ಪುನೀತ್ ಪ್ರಾಣಾಪಾಯದಿಂದ ಪಾರು!

1859

ಪವರ್ ಸ್ಟಾರ್ ಪುನೀತ್ ರಾಜಕುಮಾರ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೊಳಗಾದ ಘಟನೆ ಆಂಧ್ರದ ಅನಂತಪುರಂ ಬಳಿ ನಡೆದಿದೆ. ನಟಸಾರ್ವಭೌಮ ಚಿತ್ರದ ಚಿತ್ರೀಕರಣ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಪುನೀತ್ ರಾಜಕುಮಾರ್ ಪ್ರಯಾಣಿಸುತ್ತಿದ್ದ ರೇಂಜ್​ ರೋವರ್​ ಕಾರು ಕಲ್ಲಿಗೆ ತಾಗಿ ಟೈರ್​ ಬ್ಲ್ಯಾಸ್ಟ್ ಆದ ಪರಿಣಾಮ ಪಕ್ಕದಲ್ಲೇ ಸಾಗುತ್ತಿದ್ದ ಇನ್ನೋವಾಗೆ ಡಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ.
ಆಂಧ್ರದ ಅನಂತಪುರಂ ಬಳಿ ಘಟನೆ ನಡೆದಿದ್ದು, ಮೂರು ರಸ್ತೆಗಳು ಸೇರುವ ಸ್ಥಳದಲ್ಲಿ ಅಪಘಾತ ನಡೆದಿದೆ. ಬಳ್ಳಾರಿಯ ತೋರಣಗಲ್​​ನ ಜಿಂದಾಲ್​ ಆವರಣದಲ್ಲಿ ನಡೆಯುತ್ತಿದ್ದ ನಟಸಾರ್ವಭೌಮ ಚಿತ್ರೀಕರಣದ ಮುಗಿಸಿ ಪುನೀತ್​ ಆಂಧ್ರದ ಮಾರ್ಗವಾಗಿ ಬೆಂಗಳೂರಿಗೆ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕಾರು ಅಪಘಾತವಾಗುತ್ತಿದ್ದಂತೆ ಸ್ಥಳೀಯರು ಎಲ್ಲರೂ ಪುನೀತ್ ನೆರವಿಗೆ ಬಂದಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಪುನೀತ್ ರಾಜಕುಮಾರ್ ಗೆ ಸೇರಿದ ರೇಂಜ್​ ರೋವರ್ ಕಾರಿನ ಬಂಪರ್​​​ ಜಜ್ಜಿ ಹೋಗಿದ್ದು, ಅದೃಷ್ಟವಶಾತ್ ಪುನೀತ್ ರಾಜಕುಮಾರ್ ಗೆ ಯಾವುದೇ ಅಪಾಯವಾಗಿಲ್ಲ. ತಕ್ಷಣವೇ ಪುನೀತ್​ ರಾಜಕುಮಾರ್ ಸ್ನೇಹಿತರು ಸ್ಥಳಕ್ಕೆ ಧಾವಿಸಿದ್ದು, ಪುನೀತ್​ ರಾಜಕುಮಾರ್ ಆಗಲೇ ಸ್ನೇಹಿತರ ಕಾರಿನಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಜಿಂದಾಲ್ ಆವರಣದಲ್ಲಿ ಹಾಡು ಸೇರಿದಂತೆ ವಿವಿಧ ದೃಶ್ಯಗಳ ಚಿತ್ರೀಕರಣ ನಡೆದಿತ್ತು.

  

ad

ಇನ್ನು ಬಿಟಿವಿನ್ಯೂಸ್​​ಗೆ ಈ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ಪವನ್ ಒಡೆಯರ್​, ಪುನೀತ್​ ಚಿತ್ರೀಕರಣ ಮುಗಿಸಿ ವಾಪಸ್ಸಾಗುವಾಗ ಘಟನೆ ನಡೆದಿದೆ. ಯಾವುದೇ ತೊಂದರೆಯಾಗಿಲ್ಲ. ಯಾರು ಹೆದರುವ ಅಗತ್ಯವಿಲ್ಲ ಎಂದರು.

Sponsored :

Related Articles