ಇವರು ಸ್ಟಂಟ್ ಕಲಿಯುತ್ತಿರುವುದು ಇವರ ನೆಚ್ಚಿನ ನಟನನ್ನು ಮೆಚ್ಚಿಸಲು!!. ಯಾರು ಆ ನಟ? ಏನಿವರ ಅಭಿಲಾಷೆ?

1026
9900071610

ಇವರು ಅಲೇಮಾರಿ ಜನಾಂಗ ಆದರೂ ಪಕ್ಕಾ ಪುನೀತ್ ರಾಜಕುಮಾರ ಅಭಿಮಾನಿಗಳು. ಪುನೀತ್ ರಾಜಕುಮಾರ ಅಂದ್ರೆ ಅವರಿಗೆ ಪಂಚಪ್ರಾಣ. ಪುನೀತ್ ರಾಜಕುಮಾರ ಚಿತ್ರಗಳು ಸಂಗ್ರಹಿಸಿ ತಮ್ಮ ಮನೆಯಲ್ಲಿ ಅಂಟಿಸಿದ್ದಾರೆ. ಅಷ್ಟೇ ಅಲ್ಲದೇ ಇವರು ಪುನೀತ್ ರಾಜಕುಮಾರನಂತೆಯೇ ಸ್ಟಂಟ್, ಕಿಕ್, ಡ್ಯಾನ್ಸ್ ಕೂಡಾ ಮಾಡ್ತಾರೆ. 15 ಕ್ಕೂ ಹೆಚ್ಚು ಯುವಕರ ಗುಂಪು ಪುನೀತ್ ರಾಜಕುಮಾರ ಸ್ಟಂಟ್ ಗ್ರುಪ್ ಮಾಡಿಕೊಂಡು ಪುನೀತ್ ಅವರ ಎದುರು ತಮ್ಮ ಕಲೆ ಪ್ರದರ್ಶನ ಮಾಡಲು ಉತ್ಸುಕರಾಗಿದ್ದಾರೆ. ಅಂತ ಅಭಿಮಾನಿಗಳು ಯಾರೂ?… ಅಷ್ಟಕ್ಕೂ ಅವರು ಯಾವ ಊರಿನವರು ಅಂತಿರಾ ಹಾಗಾದರೇ ಈ ಸ್ಟೋರಿ ನೋಡಿ..

ad

ಇವರಿಗೆ ಸ್ವಂತ ಜಾಗ ಇಲ್ಲ… ರಸ್ತೆಯ ಅಕ್ಕ ಪಕ್ಕ ಟೆಂಟ್ (ಜೊಪಡಿಪಟ್ಟಿ)ನಿರ್ಮಿಸಿಕೊಂಡು ವಾಸಿಸುವ ಅಲೇಮಾರಿ ಜನರು… ಕಲೆಗೆ ಯಾವುದೇ ಬಡತನ ಸಿರಿತನ ಅನ್ನೋದು ಇಲ್ಲ , ಇವರ ಟೆಂಟ್ ತುಂಬೆಲ್ಲಾ ಪುನೀತ್ ರಾಜಕುಮಾರ ಹಾಗೂ ಅವರ ಕುಟುಂಬದ ಭಾವಚಿತ್ರಗಳು, ಡ್ಯಾನ್ಸ್, ಸ್ಟಂಟ್, ಬ್ಯಾಕ್ ಸಮರ, ಪ್ರಂಟ್ ಸಮರ, ಕಿಕ್ ಮಾಡುತ್ತಿರುವ ಅಭಿಮಾನಿಗಳು. ಇವರೆಲ್ಲರೂ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾರೂಗೇರಿ ಗ್ರಾಮದಲ್ಲಿನ ಅಲೇಮಾರಿ ಜನಾಂಗದಲ್ಲಿ ಅರಳಿದ ಬಡ ಪ್ರತಿಭೆಗಳು. ಇವರು ಜೋಪಡಿ ಪಟ್ಟಿಯಲ್ಲಿ ವಾಸವಾಗಿದ್ದು ಪುನೀತ್ ರಾಜಕುಮಾರ ಅಂದ್ರೆ ಇವರಿಗೆ ಪಂಚ ಪ್ರಾಣ. ಇವರ ಡ್ಯಾನ್ಸ್, ಸ್ಟಂಟ್, ಬ್ಯಾಕ್ ಸಮರ, ಪ್ರಂಟ್ ಸಮರ, ಕಿಕ್ ಕೂಡಾ ಯಾವುದೇ ತರಬೇತಿ ಇಲ್ಲದೇ ಜೀವ ರಕ್ಷಕ ಕವಚಗಳನ್ನು ಬಳಸದೇ ಸಲೀಸಾಗಿ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಗೋಪಿ ಎಂಬಾತ ಯುವಕ 15 ಕ್ಕೂ ಹೆಚ್ಚು ಯುವಕರನ್ನು ಕರೆದುಕೊಂಡು ಪುನೀತ್ ರಾಜಕುಮಾರ್ ಸ್ಟಂಟ್ ಗ್ರುಪ್ ಮಾಡಿಕೊಂಡು ಇವರು ತಮ್ಮ ಕಲೆಯನ್ನು ಒಮ್ಮೆ ಪುನೀತ್ ರಾಜಕುಮಾರ ಎದುರು ಪ್ರದರ್ಶಿಸಲು ಹಾತೊರೆಯುತ್ತಿದ್ದಾರೆ.

ಗೋಪಿ ತನ್ನ ಹದಿನೈದಕ್ಕೂ ಹೆಚ್ಚು ಗೆಳೆಯರಿಗೆ ಪುನೀತ್ ರಾಜಕುಮಾರ ಯಾವ ರೀತಿ ಡ್ಯಾನ್ಸ್, ಸ್ಟಂಟ್, ಬ್ಯಾಕ್ ಸಮರ, ಪ್ರಂಟ್ ಸಮರ, ಕಿಕ್, ಮಾಡುತ್ತಾರೆ. ಯಾವುದೇ ರೀತಿಯಲ್ಲಿ ತರಬೇತಿ ಕೇಂದ್ರಗಳಿಗೆ ಹೋಗಿಲ್ಲ. ಪುನೀತ್ ಅವರ ಕಲೆಗಳನ್ನು ಸಿನೆಮಾ, ಟಿವಿಗಳಲ್ಲಿ ನೋಡಿ ಕಲಿತು ಕೊಂಡಿದ್ದಾರೆ. ಇವರು ಹರಕು ಚಿಂದಿಗಳನ್ನು ಆಯ್ದು ಅದನ್ನು ಬೆಡ್ ಮಾಡಿಕೊಂಡು ಇದೇ ಮೈದಾನ ಅಂತೇನಿಲ್ಲ. ಇವರಿಗೆ ಯಾವುದೇ ಮೈದಾನದಲ್ಲಿ ಅವಕಶಾ ನೀಡುತ್ತಾರೋ ಅಲ್ಲಿ ಕಲಿಯುತ್ತಾರೆ. ಇವರು ಚಿಂದಿ ಆಯ್ದು ಬೆಡ್ ಮಾಡಿದ್ದನ್ನು ಎಷ್ಟೋ ಸಲ ಜನ ಸುಟ್ಟು ಹಾಕಿದ್ದಾರೆ. ಇವರು ಹಠ‌ ಬಿಡದೇ ತಮ್ಮ ಪ್ರಯತ್ನ ಮುಂದುವರೆಸಿದ್ದು ಎಲ್ಲವನ್ನು ಕಲಿತಿದ್ದಾರೆ. ಇವರ ಈ ಸ್ಟಂಟ್ ನ್ನು ಚಿತ್ರಿಕರಿಸಿ ಸಾಮಾಜಿಕ‌ ಜಾಲತಾಣವಾದ ಪೇಸ್ಬುಕ್ನಲ್ಲಿ ಹರಿಬಿಟ್ಟಿದ್ದರಿಂದ ಸುಮಾರು 10 ಲಕ್ಷಕ್ಕೂ ಅಧಿಕ ಜನ ನೋಡಿದ್ದಾರೆ. ಇವರಿಗೆ ಬೇರೆ ಗುರಿ ಇಲ್ಲ. ಪುನೀತ್ ರಾಜಕುಮಾರ‌ ಎದುರು ತಮ್ಮಕಲೆ ಪ್ರದರ್ಶನ ಮಾಡುವುದು ಒಂದೇ ಯಾಗಿದೆ.

ಹಾರೂಗೇರಿ ಪಟ್ಟಣದಲ್ಲಿ ಯಾವುದೇ ಡ್ಯಾನ್ಸ್ ಸ್ಪರ್ದೆ ಇದ್ರೆ ಅದರಲ್ಲಿ ಈ ಗುಂಪಿನ ಯುವಕರೆ ಪ್ರಥಮ ಬರುತ್ತಾರೆ. ಇಂತಹ ಡ್ಯಾನ್ಸ್, ಸ್ಟಂಟ್, ಬ್ಯಾಕ್ ಸಮರ, ಪ್ರಂಟ್ ಸಮರ, ಕಿಕ್ ಕಲೆ ಹೊಂದಿರುವ ಯುವಕರು ಸೂಕ್ತ ವೇ        ದಿಕೆ ಅವಶ್ಯವಾಗಿದೆ. ಪುನೀತ್ ರಾಜಕುಮಾರ ಅವರ ಎದುರು ತಮ್ಮ ಕಲೆ ಪ್ರದರ್ಶಿಸುವ ಆಸೆ ಇವರದ್ದಾಗಿದೆ. ಒಟ್ಟಿನಲ್ಲಿ ಇಂತಹ ಕಲಾಕಾರರು ಯಾವುದೇ ತರಬೇತಿ ಗೆ ಹೋಗದೇ ಉತ್ತಮವಾಗಿ ಕಲೆ ಪ್ರದರ್ಶಿಸುತ್ತಿರುವುದು ಹೆಮ್ಮೆಯ ಸಂಗತಿ.

Sponsored :


9900071610