ದೊಡ್ಮನೆಯಲ್ಲಿ ವಿವಾಹ ಸಂಭ್ರಮ! ಶ್ರೀದೇವಿ ಜೊತೆ ಹೊಸಬದುಕಿಗೆ ಕಾಲಿಟ್ಟ ರಾಘವೇಂದ್ರ ರಾಜಕುಮಾರ್ ಕಿರಿಯಪುತ್ರ ಯುವರಾಜ್​ಕುಮಾರ್​​!!

2242

ಸ್ಯಾಂಡಲ್​ವುಡ್​ನ ದೊಡ್ಮನೆ ರಾಜ್ ಕುಟುಂಬದ ಮೂರನೇ ತಲೆಮಾರು ರಾಘಣ್ಣ ಕಿರಿಯ ಪುತ್ರ ಯುವ ರಾಜ್​ಕುಮಾರ್, ಮೈಸೂರು ಮೂಲದ ಶ್ರೀದೇವಿ ಜೊತೆ​ ನೂತನ ಬಾಳಿಗೆ ಹೆಜ್ಜೆ ಹಾಕಿದ್ದಾರೆ. ಕಳೆದ ಕೆಲ ವರ್ಷಗಳಿಂದ ಪ್ರೀತಿಸ್ತಿದ್ದ ಈ ಜೋಡಿ ಕಳೆದ ವರ್ಷವಷ್ಟೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಿಂಪಲ್ ಆಗಿ ಉಂಗುರ ಬದಲಾಯಿಸಿಕೊಂಡಿದ್ರು.

ad

ಇದೀಗ ಈ ಕ್ಯೂಟ್ ಕಪಲ್ ಬೆಂಗಳೂರಿನ ಫ್ಯಾಲೇಸ್​ ಗ್ರೌಂಡ್​ನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಇಂದು ಬೆಳಗ್ಗೆ 10 ಗಂಟೆಯ ಶುಭ ಮುಹೂರ್ತ ಕಟಕ ಲಗ್ನದಲ್ಲಿ ಯುವರಾಜ್​​ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಮದುವೆ ನೆರವೇರಿದೆ. ಬಿಳಿ, ಕೆಂಪು, ಹಾಗೂ ಹಸಿರು ಬಣ್ಣಗಳಿಂದ ಶೃಂಗರಿಸಿದ ಮದುವೆ ಮಂಟಪದಲ್ಲಿ ಯುವರಾಜ ಹಾಗೂ ಶ್ರೀದೇವಿ ಅದ್ಧೂರಿ ಕಲ್ಯಾಣೋತ್ಸವ ನೇರವೇರಿದೆ. ಕಳೆದ ಒಂದು ವಾರದಿಂದ ದೊಡ್ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿತ್ತು. ಮೆಹಂದಿ ಶಾಸ್ರ್ತ, ಅರಿಶಿಣ ಶಾಸ್ರ್ತ ಜೊತೆಗೆ ನಿನ್ನೆ ಸಂಗೀತ ಕಾರ್ಯಕ್ರಮ ಕೂಡ ನೇರವೇರಿತ್ತು.

ಇನ್ನು, ದೊಡ್ಮನೆ ಮದುವೆ ಅಂದ್ಮೇಲೆ ಸಂಭ್ರಮ, ಸಡಗರ ಅದ್ಧೂರಿ ತನಕ್ಕೇನು ಕಡಿಮೆ ಹೇಳಿ. ಯುವರಾಜ್​ ಕುಮಾರ ಹಾಗೂ ಶ್ರೀದೇವಿ ಮದುವೆ ಕೂಡ ಧಾಮ್ ಧೂಮ್ ಅಂತಾ ನೇರವೇರಿದೆ. ರಾಜ್​ ಫ್ಯಾಮಿಲಿ ಜೊತೆಗೆ ನಟಿ ಅಮೂಲ್ಯ ಫ್ಯಾಮಿಲಿ, ಹಿರಿಯ ನಟಿ ಬಿ ಜಯಶ್ರೀ ಸೇರಿದಂತೆ ನಟ- ನಟಿಯರು ಈ ಅದ್ಧೂರಿ ಮದುವೆಗೆ ಸಾಕ್ಷಿಯಾದ್ರು.

ಇನ್ನು ಮದುವೆಗೆ 30ಕ್ಕೂ ಹೆಚ್ಚು ಖಾದ್ಯಗಳನ್ನು ಸಿದ್ದಪಡಿಸಲಾಗಿತ್ತು. ಅಭಿಮಾನಿಗಳಿಗೆ ಮತ್ತು ವಿವಿಐಪಿಗಳಿಗೆ ಒಂದೇ ರೀತಿಯ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಇವತ್ತು ಸಂಜೆ ಫ್ಯಾಲೆಸ್​ ಗ್ರೌಂಡ್​​ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಸಿನಿಮಾ ಮತ್ತು ರಾಜಕೀಯ ರಂಗದ ಸಾಕಷ್ಟು ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Sponsored :

Related Articles