ರಾಜ್ಯ ಕಾಂಗ್ರೆಸ್ಸಿಗರ ಭೇಟಿಗೆ ನಿರಾಕರಿಸಿದ ರಾಹುಲ್ ಗಾಂಧಿ!ಸಂಪುಟ ಆಕಾಂಕ್ಷಿಗಳ ಕನಸು ಭಗ್ನ!

737

ಸಮ್ಮಿಶ್ರ ಸರ್ಕಾರದಲ್ಲಿ ಸಚಿವಸ್ಥಾನದ ಆಕಾಂಕ್ಷಿಗಳಾಗಿದ್ದ ಕಾಂಗ್ರೆಸ್​ನ ಹಿರಿಯ ನಾಯಕರಿಗೆ ಕಿವಿ ಹಿಂಡಿದ ಹೈಕಮಾಂಡ್​ ಹಿರಿಯ ನಾಯಕರು ಪಕ್ಷ ಸಂಘಟನೆ ಮಾಡುವಂತೆ ಖಡಕ್ ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲ ಕಿರಿಯರಿಗೆ ಸಚಿವ ಸ್ಥಾನ ಎಂದಿದೆ, ಇನ್ನು ಈ ಬಗ್ಗೆ ಹೈಕಮಾಂಡ್​ ಜೊತೆ ಪ್ರಶ್ನಿಸಿ, ಸಚಿವ ಸ್ಥಾನ ಪಡೆಯೋ ಕನಸಿನಲ್ಲಿದ್ದ ನಾಯಕರಿಗೆ ಹೈಕಮಾಂಡ್​ ದೆಹಲಿಗೆ ಬರದಂತೆ ಕಾಂಗ್ರೆಸ್​ ಸೂಚನೆ ನೀಡಿದ್ದು, ಅಚ್ಚರಿ ಮೂಡಿಸಿದೆ.

ad

ಹೌದು ಹಿರಿಯರಿಗೆ ಸಚಿವ ಸ್ಥಾನ ಇಲ್ಲ ಎಂಬುದು ಕಾಂಗ್ರೆಸ್​ನ ಹಿರಿ ತಲೆಗಳ ಅಸಮಧಾನಕ್ಕೆ ಕಾರಣವಾಗಿದೆ. ಹೀಗಾಗಿ ಸಿದ್ಧವಾಗಿರುವ ಸಚಿವರ ಪಟ್ಟಿ ಜೊತೆ ಕಾಂಗ್ರೆಸ್​ ನಾಯಕರು ದೆಹಲಿಗೆ ಹೊರಡಲು ಸಿದ್ಧವಾಗಿದ್ದರು. ಅಲ್ಲಿ ಹೈಕಮಾಂಡ್ ಜೊತೆ ಮಾತನಾಡಿ ಲಿಸ್ಟ್​ ಎಡಿಟ್​ ಮಾಡಿಸಿ ಹಿರಿಯರೂ ಸಂಪುಟದಲ್ಲಿ ಸೇರಿಕೊಳ್ಳುವ ಸರ್ಕಸ್​ ನಡೆಸಲು ದೆಹಲಿಗೆ ತೆರಳಲು ಮುಂಧಾಗಿದ್ದರು. ಆದರೇ ಕಾಂಗ್ರೆಸ್ ನಾಯಕರು ದೆಹಲಿಗೆ ಬಂದ್ರೇ ಸೃಷ್ಟಿಯಾಗುವ ತಲೆನೋವು ತಪ್ಪಿಸಿಕೊಳ್ಳುವ ಉದ್ದೇಶದಿಂದ ಹೈಕಮಾಂಡ್​ ಕಾಂಗ್ರೆಸ್​ ನಾಯಕರ ದೆಹಲಿ ದೌಡುಗೆ ಬ್ರೇಕ್ ಹಾಕಿದೆ.

 

ಈ ಬಗ್ಗೆ ರಾಜ್ಯ ನಾಯಕರಿಗೆ ಹೈಕಮಾಂಡ್ ಸೂಚನೆ ನೀಡಿದೆ. ಹೀಗಾಗಿ ದೆಹಲಿಗೆ ತೆರಳಲು ತಯಾರಾಗಿದ್ದ ಸಿದ್ಧರಾಮಯ್ಯ, ಡಿಸಿಎಂ ಪರಮೇಶ್ವರ್​,ಡಿ.ಕೆ.ಶಿವಕುಮಾರ್, ಸೇರಿದಂತೆ ಹಲವು ಕಾಂಗ್ರೆಸ್​ ನಾಯಕರಿಗೆ ನಿರಾಸೆಯಾಗಿದೆ. ಕೇವಲ ಅಂತಿಮವಾಗಿರುವ ಸಚಿವರ ಪಟ್ಟಿಯನ್ನು ಮಾತ್ರ ಕಳಿಸುವಂತೆ ಸೂಚನೆ ನೀಡಿದ್ದು, ಇದರಿಂದ ಸಚಿವ ಸಂಪುಟ ಸೇರುವ ಕಾಂಗ್ರೆಸ್ ಹಿರಿಯ ನಾಯಕರ ಪ್ರಯತ್ನ ವಿಫಲವಾದಂತಾಗಿದೆ.

 

 

 

Sponsored :

Related Articles