ತವರಿನ ಸಂಕಷ್ಟಕ್ಕೆ ಮರುಗಿದ ಹಾಟ್​ ಬೆಡಗಿ! ಪ್ರವಾಹ ಸಂತ್ರಸ್ಥರಿಗಾಗಿ ಸಹಾಯಕೋರಿದ ಲಕ್ಷ್ಮೀ ರೈ!!

2148
9900071610

ಬಹುಭಾಷಾ ನಟಿ ಲಕ್ಷ್ಮೀ ರೈ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾದರೂ ಸುದ್ದಿಯಾಗುವುದು ಮಾತ್ರ ಕಡಿಮೆಯೇನಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಹಾಗಿರುವ ಈ ಚೆಲುವೆ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.

ad

ಈ ಕಾಂಟ್ರವರ್ಸಿ ಕ್ವೀನ್ ಮತ್ತೆ ಅದೇನ್ ಕಾಂಟ್ರವರ್ಸಿ ಮಾಡ್ಕೊಂಡ್ಲಪ್ಪಾ? ಅಂದ್ಕೊಂಡ್ರಾ. ಈ ಬಾರಿ ಲಕ್ಷ್ಮೀ ರೈ ಸುದ್ದಿಯಾಗಿರುವುದು ಯಾವದೇ ಕಾಂಟ್ರವರ್ಸಿಯಿಂದಲ್ಲ. ಬದಲಿಗೆ ಉತ್ತರ ಕರ್ನಾಟಕದ ಭೀಕರ ಪ್ರವಾಹದಿಂದ ನಲುಗಿ ಹೋಗಿರುವ ಜನರಿಗೆ ಸಹಾಯಸ್ತ ನೀಡಿ ಎಂದು ಹೇಳಿ ಸುದ್ದಿಯಾಗಿದ್ದಾರೆ.

ಮಹಾ ಪ್ರವಾಹಕ್ಕೆ ಅರ್ಧ ಕರ್ನಾಟಕವೆ ಜಲಾ ಸಮಾಧಿಯಾಗಿದೆ. ಇನ್ನು ಮೂಲತಃ ಉತ್ತರ ಕರ್ನಾಟಕದ ಬೆಳಗಾವಿಯವರೆ ಆದ ಲಕ್ಷ್ಮೀ ರೈ ತನ್ನವರ ಗೋಳಾಟಕ್ಕೆ ಮರುಗಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಆಗಿರುವ ಈ ರಣ ಭೀಕರ ಪ್ರವಾಹಕ್ಕೆ ಸಾಮಾನ್ಯ ಜನರು. ಸಂಘ ಸಂಸ್ಥೆಗಳು. ಸಿನಿತಾರೆಯರ ದಂಡೆ ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ್ದ ಬೆನ್ನಲ್ಲೇ, ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಝಾನ್ಸಿ ಚಿತ್ರದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಲಕ್ಷ್ಮಿ ರೈ “ಇದು ಪ್ರಕೃತಿ ವಿಕೋಪ, ಯಾರು ಜವಾಬ್ದಾರರಲ್ಲ. ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ. ಎಲ್ಲರು ಮುಂದೆ ಬಂದು ಉತ್ತರ ಕರ್ನಾಟಕ ಜನರ ನೆರವಾಗಬೇಕು ಎಂದು ವಿನಂತಿಸಿಕೊಂಡಿದ್ದಾರೆ.

ರಸ್ತೆಗಳೆಲ್ಲ ಜಲಾವ್ರತವಾಗಿದ್ದು ತನ್ನವರನ್ನು ಭೆಟಿ ಮಾಡಲು ಹೋಗಲು ಸಾಧ್ಯವಾಗದೆ ಕಣ್ಣೀರಿಟ್ಟಿದ್ದಾರೆ. ತನ್ನವರನ್ನ ನೋಡಲು ಮನಸ್ಸು ಆತುರ ಪಡುತ್ತಿದ್ದರು ಹೆತ್ತವರ ಮುಖವನ್ನು ಸಹ ನೋಡಲು ಸಾಧ್ಯವಾಗುತ್ತಿಲ್ಲ ಈ ಬೆಳ್ಳಿ ಬೊಂಬೆಗೆ.

ಸಧ್ಯ ಕನ್ನಡ ನಾಡಿನ ತಾರೆ ಲಕ್ಷ್ಮೀ ರೈ ರವರ ಪೋಷಕರು ಕೂಡಾ ಬೆಳಗಾವಿಯ ಭೀಕರ ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ. ಇನ್ನು ಊರಿಗೆ ಹೋಗಬೇಕು ಎಂದು ಪ್ರಯತ್ನ ಪಟ್ಟೆ ಆದ್ರೆ. ಅಲ್ಲಿಗೆ ಹೋಗಬೇಕು ಅಂದ್ರು ರಸ್ತೆ ಇಲ್ಲ ಈಗ. ಪೋಷಕರು ಬರುವುದು ಬೇಡ ಅಂತ ಹೇಳಿದ್ದಾರೆ. ಹಾಗಾಗಿ ಹೋಗಿಲ್ಲ” ನಾನು ಅಲ್ಲಿಗೆ ಹೋಗಲಾಗುತ್ತಿಲ್ಲ ಎಂದು ಕಂಬನಿ ಮಿಡಿದಿದ್ದಾರೆ.

Sponsored :


9900071610