ರಾಜೀವ್ ಗಾಂಧಿ ಹಂತಕಿಗೆ ಪೆರೋಲ್! 27 ವರ್ಷಗಳ ಬಳಿಕ ಪೆರೋಲ್ ಪಡೆದ ನಳಿನಿ!!

2617

ದೇಶವನ್ನೇ ಬೆಚ್ಚಿಬೀಳಿಸಿದ್ದ ಮಾಜಿ ಪ್ರಧಾನಿ ರಾಜೀವ ಗಾಂಧಿಹಂತಕಿ ನಳಿನಿ ಶ್ರೀಹರನ್​ಗೆ 27 ವರ್ಷದ ಬಳಿಕ ಪೆರೋಲ್​ ಸಿಕ್ಕಿದೆ. ಹಲವು ಕಂಡಿಶನ್​ಗಳ ಜೊತೆ ಮದ್ರಾಸ್ ಹೈಕೋರ್ಟ್ ಒಂದು ತಿಂಗಳ ಪೆರೋಲ್​ ನೀಡಿದೆ.


ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ  ನಳಿನಿ ಜೀವಾವಧಿ ಶಿಕ್ಷೆ ಗುರಿಯಾಗಿದ್ದು, ಶಿಕ್ಷೆಗೆ ಗುರಿಯಾದ ಬಳಿಕ ಇದೇ ಮೊದಲ ಬಾರಿಗೆ ಪೆರೋಲ್ ಪಡೆದುಕೊಂಡಿದ್ದಾರೆ.

ad


ತಮ್ಮ ಮಗಳ ಮದುವೆಯಾಗಿ 6 ತಿಂಗಳ ಪೆರೋಲ್ ನೀಡುವಂತೆ ನಳಿನಿ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಕೇವಲ 1 ತಿಂಗಳ ಪೆರೋಲ್ ನೀಡಿದೆ.


ಅಲ್ಲದೇ ಹೊರಗಿರುವಷ್ಟು ದಿವಸ ಯಾವುದೇ ರಾಜಕೀಯ ಮುಖಂಡರನ್ನು ಭೇಟಿ ಮಾಡಬಾರದು. ಯಾವುದೇ ಸಂದರ್ಶನ ನೀಡಬಾರದು ಹಾಗೂ ಕಾನೂನು ಉಲ್ಲಂಘನೆ ಮಾಡಬಾರದೆಂಬ ಖಡಕ್ ಸೂಚನೆ ನೀಡಿದೆ.


1991 ಮೇ 21 ರಂದು ತಮಿಳುನಾಡಿನ ಚುನಾವಣಾ ಪ್ರಚಾರ ಕೈಗೊಂಡಿದ್ದ ಮಾಜಿ ಪ್ರಧಾನಿ ರಾಜೀವ ಗಾಂಧಿ ಅವರನ್ನು ಅತ್ಮಹತ್ಯಾ ಬಾಂಬ್​ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು.

Sponsored :

Related Articles