23 ಶಾಸಕರ ಜೊತೆ ರಮೇಶ್ ಜಾರಕಿಹೋಳಿ ರಾಜೀನಾಮೆ ? ನಮ್ಮವರನ್ನು ಟಚ್ ಮಾಡಿದ್ರೆ ಜೋಕೆ ಅಂದ್ರು ಕುಮಾರಣ್ಣ !!

4771
9900071610

 

ad

ಬೆಳಗಾವಿ ಪಿಎಲ್​ಡಿ ಬ್ಯಾಂಕ್ ಚುನಾವಣೆ ಸಂಬಂಧ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಬ್ರದರ್ಸ್ ನಡುವಿನ ಪ್ರತಿಷ್ಠೆಯ ವಾರ್, ಇದೀಗ ದೋಸ್ತಿ ಸರ್ಕಾರವನ್ನೇ ಅಲುಗಾಡಿಸುವ ಸ್ಥಿತಿಗೆ ಬಂದು ತಲುಪಿದೆ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ಬಿಜೆಪಿ ಜಾರಕಿಹೊಳಿ ಬ್ರದರ್ಸ್​ಗೆ ಗಾಳ ಹಾಕಿದೆ. ಹಾಗಾದ್ರೆ ಜಾರಕಿಹೊಳಿ ಬ್ರದರ್ಸ್ ಬಿಜೆಪಿಗೆ ಹೋಗ್ತಾರಾ..? ದೋಸ್ತಿ ಸರ್ಕಾರಕ್ಕೆ ಸಂಕಷ್ಟ ಎದುರಾಗಿದ್ಯಾ..? ಇಲ್ಲಿದೆ ಫುಲ್ ಡಿಟೇಲ್ಸ್

 

ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ನೇತೃತ್ವದ​ ದೋಸ್ತಿ ಸರ್ಕಾರ ಕಳೆದ ತಿಂಗಳಷ್ಟೆ 100 ದಿನ ಪೂರೈಸಿದೆ. ಆದ್ರೀಗ ಕುಮಾರಸ್ವಾಮಿ ಸರ್ಕಾರದ ಬುಡ ಈಗ ಅಲ್ಲಾಡ್ತಿದೆ. ಎಸ್.. ಬೆಳಗಾವಿ ಪಿಎಲ್​ಡಿ ಬ್ಯಾಂಕ್ ಚುನಾವಣೆ ಸಂಬಂಧ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಬ್ರದರ್ಸ್ ನಡುವಿನ ಪ್ರತಿಷ್ಠೆಯ ವಾರ್, ಇದೀಗ ದೋಸ್ತಿ ಸರ್ಕಾರವನ್ನೇ ಅಲುಗಾಡಿಸುವ ಸ್ಥಿತಿಗೆ ಬಂದು ತಲುಪಿದೆ.

ಮೈತ್ರಿ ಸರ್ಕಾರಕ್ಕೆ ಸಂಕಷ್ಟ ಎದುರಾಗಿದ್ದು, ಜಾರಕಿಹೊಳಿ ಬ್ರದರ್ಸ್ ಶಾಕ್ ಕೊಡಲು ಮುಂದಾಗಿದ್ದಾರೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಬೇಸತ್ತಿರುವ ಜಾರಕಿಹೊಳಿ ಬ್ರದರ್ಸ್ ತಮ್ಮ ಬೆಂಬಲಿಗ ಶಾಸಕರ ಜೊತೆ ಬಿಜೆಪಿ ಸೇರಲು ಮುಂದಾಗಿದ್ದಾರೆ ಎನ್ನಲಾಗ್ತಿದೆ. ರಮೇಶ್ ಜಾರಕಿಹೊಳಿ ಈಗಾಗಲೇ ಬಿಎಸ್​ವೈ ಜೊತೆ ರಹಸ್ಯ ಮಾತುಕತೆ ನಡೆಸಿದ್ದು, ಬಿಜೆಪಿಗೆ ಕೆಲ ಕಂಡಿಷನ್ಸ ಹಾಕಿದ್ದಾರೆನ್ನಲಾಗಿದೆ. ಇನ್ನು ಬಿಜೆಪಿ ರಮೇಶ್ ಜಾರಕಿಹೊಳಿಗೆ ಡಿಸಿಎಂ, ಸತೀಶ್​ ಜಾರಕಿಹೊಳಿಗೆ ಸೆಂಟ್ರಲ್ ಮಿನಿಸ್ಟರ್ ಆಫರ್ ನೀಡಲಾಗಿದೆ ಅಂತ ತಿಳಿದು ಬಂದಿದೆ. ಅಷ್ಟೆ ಅಲ್ಲ ರಮೇಶ್ ಬಣಕ್ಕೆ 6 ಸಚಿವ ಸ್ಥಾನ ನೀಡುವುದಲ್ಲದೇ ರಾಜೀನಾಮೆ ನಂತ್ರ ಎದುರಾಗುವ ಬೈ ಎಲೆಕ್ಷನ್​​ ವೆಚ್ಚವನ್ನು ಸಂಪೂರ್ಣವಾಗಿ ಭರಿಸುವ ಮಾತುಕೊಟ್ಟಿದೆ.

ಈ ವಿಚಾರಕ್ಕೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿರುವ ಸತೀಶ್ ಜಾರಕಿಹೊಳಿ, ರಾಜ್ಯ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಹಲವು ಶಾಸಕರಿಗೆ ಬಿಜೆಪಿ ನಾಯಕರ ಜತೆ ಸಂಪರ್ಕ ಇರಬಹುದು ಅಂತಾರೆ.ಆದ್ರೆ ಬಿಜೆಪಿ ಸೇರೋ ಬಗ್ಗೆ ಸುಳಿವು ನೀಡದ ಸಚಿವ ರಮೇಶ್ ಜಾರಕಿಹೊಳಿ, ಎಲ್ಲವು ಮುಗಿದು ಹೋದ ಅಧ್ಯಾಯ. ಇತ್ತೀಚಿನ ಬೆಳವಣಿಗೆಗಳಿಂದ ಸಿಟ್ಟಿದ್ರೂ, ವರಿಷ್ಠರ ತೀರ್ಮಾನಕ್ಕೆ ಬದ್ಧ ಅಂತ ಹೇಳಿದ್ದಾರೆ.

 

ಇನ್ನು ಸಿಎಂ ಕುಮಾರಸ್ವಾಮಿ ನಮ್ಮ ಶಾಸಕರನ್ನು ಟಚ್​ ಮಾಡಿದ್ರೆ ನಾವು ಸುಮ್ಮನಿರಲ್ಲ. ನಮಗೂ ಆಪರೇಷನ್​​ ಮಾಡೋದು ಗೊತ್ತಿದೆ. ಐದಕ್ಕೂ ಹೆಚ್ಚು ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಅಂತ ಬಾಂಬ್ ಸಿಡಿಸಿದ್ದಾರೆ.ಒಟ್ಟಾರೆ ಹೆಬ್ಬಾಳ್ಕರ್-ಜಾರಕಿಹೊಳಿ ಬ್ರದರ್ಸ್ ಫೈಟ್ ಇದೀಗ ದೋಸ್ತಿ ಸರ್ಕಾರಕ್ಕೆ ಕಂಟಕವಾಗಿ ಪರಿಣಮಿಸಿದೆ. ಪಿಎಲ್​ಡಿ ಬ್ಯಾಂಕ್​ ಚುನಾವಣೆಯಲ್ಲಿ ಸೋಲಿನ ಮುಖಭಂಗ ಅನುಭವಿಸಿರುವ ಜಾರಕಿಹೊಳಿ ಬ್ರದರ್ಸ್​ ಬಿಜೆಪಿ ಸೇರ್ತಾರಾ ಅನ್ನೋದು ಸದ್ಯದ ಕುತೂಹಲ.

Sponsored :


9900071610