ಸ್ಯಾಂಡಲ್​ವುಡ್​​ನಲ್ಲಿ ಬರ್ತಿದೆ ವಿಭಿನ್ನ ಕಥೆಯ ರಂಗ್​​ ಬಿರಂಗಿ!

605
RangBirangi Film trailer and songs will Released at Renukaam studio.

ಸ್ಯಾಂಡಲ್​ವುಡ್​​​ ಹಿರಿಯ ನಟರ ಚಿತ್ರಗಳು ಮೋಡಿ ಮಾಡುತ್ತಿರುವ ಹೊತ್ತಿನಲ್ಲೇ ಸದ್ದಿಲ್ಲದೇ ಕಿರಿಯರ ಚಿತ್ರವೊಂದು ಸಿನಿರಸಿಕರನ್ನು ಮೋಡಿ ಮಾಡಲು ಸಿದ್ಧವಾಗುತ್ತಿದೆ.

ad

 

 

ಈಗಾಗಲೇ ಮದರಂಗಿ ಚಿತ್ರ ನಿರ್ದೇಶಿಸಿ ಗಮನ ಸೆಳೆದಿದ್ದ ಮಲ್ಲಿಕಾರ್ಜುನ ಮುತ್ತಲಗೆರೆ ಅವರ ಎರಡನೇ ಚಿತ್ರ ಇದಾಗಿದ್ದು, ಚಿತ್ರದ ಹೆಸರು ರಂಗ್​ಬಿರಂಗಿ. ಹೆಸರೇ ಹೇಳುವಂತೆ ಇದೊಂದು ಯುವಮನಸ್ಸುಗಳನ್ನು ಮೋಡಿಮಾಡುವ ಚಿತ್ರವಾಗಿದೆ.

 

 

ಜಗತ್ತೆಲ್ಲ ಕಲರಫುಲ್​ ಆಗಿ ಕಾಣೋ 18 ರಿಂದ 22 ವರ್ಷದ ಯುವಜನತೆಯ ಸುತ್ತ ನಡೆಯುವ ಕಥೆಯನ್ನೇ ಆಧಾರವಾಗಿಟ್ಟುಕೊಂಡು ಮಲ್ಲಕಾರ್ಜುನ್​​ ಮುತ್ತಲಗೆರೆ ಈ ಚಿತ್ರ ಸಿದ್ದವಾಗಿದೆ. ನವಿರಾದ ಈ ಪ್ರೇಮಕತೆ ಯುವಮನಸ್ಸುಗಳನ್ನು ಸೆಳೆಯೋದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ಈ ಚಿತ್ರದ ಆಡಿಯೋಗಳು ರಿಲೀಸಾಗಿದ್ದು, ಯೂಟ್ಯೂಬ್​ ಸೇರಿದಂತೆ ಸಾಮಾಜಿಕ ಜಾಲಾತಾಣಗಳಲ್ಲಿ ಸಾಕಷ್ಟು ಮೋಡಿ ಮಾಡಿದೆ.

 

ಎಳೆವಯಸ್ಸಿನ ಯುವಸಮೂಹದ ಪಾಲಿಗೆ ಬದುಕು ಒಂದು ರೀತಿಯ ಪ್ರಯೋಗಶಾಲೆ ಇದ್ದಂತೆ. ಹೀಗಾಗಿ ಆ ವಯಸ್ಸಿನಲ್ಲಿ ಪ್ರೀತಿ-ಪ್ರೇಮದ ಬಲೆಗೆ ಬಿದ್ದು ಬದುಕನ್ನು ಎಂಜಾಯ್ ಮಾಡಲು ಹೋಗುವ ಯುವಕ-ಯುವತಿಯರು ಕೊನೆಗೆ ಬೇರೆ-ಬೇರೆ ರೀತಿಯ ಸಮಸ್ಯೆಗೆ ಸಿಲುಕತ್ತಾರೆ. ಇಂತಹ ರೋಚಕ ಅಂಶಗಳನ್ನೇ ತೆರೆಯಮೇಲಿಡಲು ತಂಡ ಸಿದ್ಧವಾಗಿದೆ.

 

ಮಣಿಕಾಂತ ಕದ್ರಿ ಸಂಗೀತ ನಿರ್ದೇಶನ ಮಾಡಿರೋ ಚಿತ್ರಕ್ಕೆ ಯುವಪ್ರತಿಭೆಗಳ ತಾರಾಗಣವಿದೆ. ಮೂಲತಃ ರೋಡ್​ಲೈನ್ಸ್​​ ಉದ್ಯಮಿಯಾಗಿರುವ ನಿರ್ಮಾಪಕ ಶಾಂತಕುಮಾರ್​ ಕನ್ನಡಕ್ಕೊಂದು ಸದಭಿರುಚಿಯ ಚಿತ್ರ ನೀಡುವ ಉದ್ದೇಶದಿಂದ ಈ ಚಿತ್ರ ನಿರ್ಮಿಸಿದ್ದಾರೆ. ಡಿ ಬೀಟ್ಸ್ ಸಂಸ್ಥೆಯಡಿಯಲ್ಲಿ ತಯಾರಾಗಿರೋ ಈ ಚಿತ್ರಹಾಡುಗಳು ಜನರನ್ನು ಸೆಳೆದಿದ್ದು, ಫೆಬ್ರವರಿ 23 ರಂದು ಚಿತ್ರ ತೆರೆಕಾಣಲಿದ್ದು, ಇಂದು ನಗರದ ರೇಣುಕಾಂಬಾ ಸ್ಟುಡಿಯೋದಲ್ಲಿ ರಂಗ್​ಬಿರಂಗಿ ಚಿತ್ರದ ಟ್ರೇಲರ್​ ಹಾಗೂ ಹಾಡುಗಳು ಬಿಡುಗಡೆಯಾಗಲಿದೆ. ಈ ವಿಭಿನ್ನ ಕಥಾಹಂದರದ ಚಿತ್ರ ನೋಡೋಕೆ ನೀವು ಮರಿಬೇಡಿ.

Sponsored :

Related Articles