ಟಾಲಿವುಡ್​​ ಕಿಂಗ್​ಗೆ ಜೊತೆಯಾದ ಕಿರಿಕ್​ ಬೆಡಗಿ….! ಕೊಡಗಿನ ಕುವರಿಯ ಜೊತೆ ಮೋಡಿ ಮಾಡ್ತಾರಾ ನಾಗಚೈತನ್ಯ…!!

357

ವಿಜಯ್ ದೇವರಕೊಂಡ ಜೊತೆಗಿನ ಸಾಲು-ಸಾಲು  ಗಾಸಿಪ್​ಗಳ ಬಳಿಕ ಸ್ಯಾಂಡಲ್​ವುಡ್​ನ ಕಿರಿಕ್ ಬೆಡಗಿ  ರಶ್ಮಿಕಾ ಮಂದಣ್ಣ ಟಾಲಿವುಡ್​​ ನಟ ನಾಗಚೈತನ್ಯಗೆ ಜೊತೆಯಾಗಲಿದ್ದಾರೆ. ಸಧ್ಯ ಸಾಲು-ಸಾಲು ಚಿತ್ರದಲ್ಲಿ ಬ್ಯುಸಿಯಾಗಿರುವ  ಕೊಡಗಿನ ಕುವರಿ ಟಾಲಿವುಡ್​​ನಲ್ಲೂ ತಮ್ಮ ಸಿನಿ ವಿಜಯ ಯಾತ್ರೆ ಮುಂದುವರೆಸಲಿದ್ದಾರೆ.

ad

ಟಾಲಿವುಡ್​​ನ ಹಲವು ಚಿತ್ರಗಳಲ್ಲಿ  ಮಿಂಚುತ್ತಿರುವ ಕೊಡಗಿನ ಕುವರಿ ನಟಿ ರಶ್ಮಿಕ ಮಂದಣ್ಣ ಸದ್ಯ ಕಾಲಿವುಡ್ , ಟಾಲಿವುಡ್ , ಸ್ಯಾಂಡಲ್ ವುಡ್ ನ ಹಲವು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಇತ್ತಿಚೆಗೆ ಮಜಲಿ ಚಿತ್ರದಲ್ಲಿ ಮಾಸ್ ಆಗಿ ತೆರೆ ಮೇಲೆ ಕಾಣಿಸಿಕೊಂಡಿದ್ದ ನಾಗಚೈತನ್ಯರ ಕೈನಲ್ಲಿ ಕೂಡ ಇದೀಗಾ ಟಾಲಿವುಡ್ ನ ಹಲವು ಸಿನಿಮಾಗಳಿದೆ, ಸದ್ಯ ಈ ಜೋಡಿಯ ಸಿನಿಮಾವೊಂದು ಹೊಸ ಚಿತ್ರದ ಟೈಟಲ್ ಲಾಂಚ್ ಆಗಿದೆ.

ಸತತ ಸೋಲುಗಳಿಂದ ಕೆಂಗಟ್ಟಿದ್ದ ನಟ ನಾಗಚೈತನ್ಯ ಇತ್ತೀಚೆಗಷ್ಟೇ ಪತ್ನಿ ಸಮಂತ ಜೊತೆ ಮಜಿಲಿ’ ಸಿನಿಮಾದಲ್ಲಿ ನಟಿಸಿ ಮತ್ತೆ ಸಕ್ಸಸ್ ಕಂಡರು . ಇನ್ನೂ ಈ ಚಿತ್ರ ಟಾಲಿವುಡ್ ಗಲ್ಲಾಪೆಟ್ಟಿಗೆಯಲ್ಲಿಯೂ ತಕ್ಕ ಮಟ್ಟಿಗೆ ಸೌಂಡ್ ಮಾಡಿತ್ತು.

ಮಜಿಲಿ ಚಿತ್ರದ ಬಳಿಕ ನಾಗ ಚೈತನ್ಯ ತನ್ನ ಮಾವ ವೆಂಕಟೇಶ್​ ಜತೆ ‘ವೆಂಕಿ ಮಾವ’ ಸಿನಿಮಾದಲ್ಲಿ ಅಭಿನಯಿಸಲಿದ್ದು, ಇದರಲ್ಲಿ ಸೇನಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಅದಲ್ಲದೆ ಇನ್ನೂ ಮೂರು- ನಾಲ್ಕು ಚಿತ್ರದಲ್ಲಿ ಸಿನಿಮಾಗಳು ನಾಗ ಚೈತನ್ಯ ಕೈನಲ್ಲಿದ್ದು, ಮಾಲಯಾಳಂ ಬೆಡಗಿ ಪಿಂಪಲ್ ಕ್ವೀನ್ ಸಾಯಿ ಪಲ್ಲವಿ ಜೊತೆ ಮತ್ತೊಂದು ಹೊಸ ಸಿನಿಮದಲ್ಲಿಯೂ ಕೂಡ ನಟಿಸಲಿದ್ದಾರೆ. ಜೊತೆಗೆ ಹಿಂದಿಯ ಹಿಟ್​ ಸಿನಿಮಾ ‘ಬದಾಯಿ ಹೋ’ ತೆಲುಗು ರಿಮೇಕ್​ನಲ್ಲಿ ಕೂಡ ನಾಗಚೈತನ್ಯ ಬಣ್ಣ ಹಚ್ಚಲಿದ್ದಾರೆ.

ಈ ಮಧ್ಯೆ ದಿಲ್​ ರಾಜು ನಿರ್ಮಾಣದ ಹೊಸ ಸಿನಿಮಾದಲ್ಲಿ ನಾಗ ಚೈತನ್ಯ ಅಭಿನಯಿಸಲಿದ್ದು, ನಾಗ ಚೈತನ್ಯ ಜೊತೆ ನಟಿ ರಶ್ಮಿಕ ಮಂದಣ್ಣ ಡ್ಯೂಯೆಟ್ ಆಡಲಿದ್ದಾರೆ. ಇನ್ನೂ ಚಿತ್ರಕ್ಕೆ ‘ಅದೇ ನುವ್ವು ಅದೇ ನೇನು’ ಎಂದು ಶೀರ್ಷಿಕೆ ನೀಡಲಾಗಿದ್ದು, ಚಿತ್ರಕ್ಕೆ ಹೊಸ ನಿರ್ದೇಶಕರೊಬ್ಬರು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಮಾಹಿತಿ ಇದೆ. ಸದ್ಯ ಈ ವಿಷಯವಾಗಿ ಜೆಮಿನಿ ಟಿವಿ ತನ್ನ ಅಧಿಕೃತ ಟ್ವಿಟರ್​ ಪುಟದಲ್ಲಿ ಪ್ರಕಟಿಸಿದೆ. ಅದರಲ್ಲೂ ಇದೇ ಮೊದಲ ಬಾರಿಗೆ ಈ ಸಿನಿಮಾ ಕುರಿತಾಗಿ ಸ್ಯಾಟಲೈಟ್​ ಹಕ್ಕುಗಳನ್ನು ಖರೀದಿಸಿರುವ ಟಿವಿ ಚಾನೆಲ್​ ಈ ಪ್ರಕಟಿಸಿರುವುದು ವಿಶೇಷ.

ಇನ್ನೂ ನಟಿ ರಶ್ಮಿಕ ಮಂದಣ್ಣ ಇತ್ತೀಚೆಗಷ್ಟೇ ಡಿಯರ್ ಕಾಮ್ರೇಡ್ ಚಿತ್ರದಲ್ಲಿ ಅಭಿನಯಿಸಿದರು. ಆದರೆ ಚಿತ್ರ ಅವರು ನೀರಿಕ್ಷಿಸಿದ ಮಟ್ಟಕ್ಕೆ ಪ್ರೇಕಕ್ಷಕರನ್ನು ರೀಚ್ ಮಾಡಲು ಆಗಲಿಲ್ಲ. ರಶ್ಮಿಕರಮುಂದಿನ ಚಿತ್ರವಾದರೂ ರಶ್ಮಿಕಗೆ ಸಕ್ಸಸ್ ತಂದು ಕೊಡುತ್ತಾ, ನಾಗಚೈತನ್ಯ ಮತ್ತು ರಶ್ಮಿಕ ಕೆಮೆಸ್ಟ್ರಿ ಸ್ಕ್ರೀನ್ ಮೇಲೆ ವರ್ಕೌಟ್ ಆಗುತ್ತಾ ಎಂದು ಮುಂಬರುವ ದಿನಗಳಲ್ಲಿ ಕಾದು ನೋಡಬೇಕಿದೆ.

Sponsored :

Related Articles