ಕರ್ನಾಟಕದ ಕ್ರಶ್​ ರಶ್ಮಿಕಾ ಹೊಸ ಸಾಹಸ! ಫುಲ್​ ವೈರಲ್​ ಆಯ್ತು ಕೊಡಗಿನ ಬೆಡಗಿಯ ವಿಡಿಯೋ! ಇಷ್ಟಕ್ಕೂ ರಶ್ಮಿಕಾ ಮಾಡ್ತಿರೋದೇನು ಗೊತ್ತಾ?!

6232
9900071610

ಕರ್ನಾಟಕದ ಕ್ರಶ್ ನಟಿ ರಶ್ಮಿಕ ಮಂದಣ್ಣ ಕಿರಿಕ್ ಪಾರ್ಟಿ ಚಿತ್ರದ ನಂತರ ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಸದಾ ಒಂದಲ್ಲಾ ಕಾರಣಕ್ಕೆಸಾಮಾಜಿಕ ಜಾಲಾತಾಣಗಳಲ್ಲಿ ಸುದ್ದಿಯಾಗುವ ರಶ್ಮಿಕ ಇದೀಗಾ ಬ್ಯಾಕ್ ಡೈವ್ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿ ಆಗಿದ್ದಾರೆ.

ad

ಇನ್ನೂ ರಶ್ಮಿಕ ಬ್ಯಾಕ್ ಡೈವ್ ಮಾಡುತ್ತಿರುವ  ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ತೆಲುಗಿನ ಮೋಸ್ಟ್ ಹ್ಯಾಂಡ್ಸಮ್ ನಟ ಪ್ರಿನ್ಸ್ ಮಹೇಶ್ ಬಾಬು ಜೊತೆ ‘ಸರಿಲೇರು ನೀಕೆವರು’ ಹಾಗೂ ಅಲ್ಲು ಅರ್ಜುನ್ ಜೊತೆ ಅವರ 20ನೇ ಸಿನಿಮಾದಲ್ಲಿ ರಶ್ಮಿಕ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ಹೀಗಾಗಿ ಫಿಟನೆಸ್​ಗೆ ಮತ್ತಷ್ಟು ಆದ್ಯತೆ ನೀಡಿರುವ ರಶ್ಮಿಕಾ ಇದಕ್ಕಾಗಿ ವರ್ಕೌಟ್ ಆರಂಭಿಸಿದ್ದಾರೆ.

ಪ್ರತಿ ದಿನ ರಶ್ಮಿಕ ಸಿಕ್ಕಾಪಟ್ಟೆ ವರ್ಕೌಟ್ ಮಾಡುವ ಮೂಲಕ ಬೆವರಿಳಿಸುತ್ತಿದ್ದಾರೆ. ಸದ್ಯ ವರ್ಕೌಟ್​ ಮಾಡುವ ವೇಳೆ ಬ್ಯಾಕ್ ಡೈವ್ ಮಾಡಿರುವ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.ಇನ್ನೂ ಈ ವಿಡಿಯೋ ನೋಡಿದ ರಶ್ಮಿಕ ಅಭಿಮಾನಿಗಳು ಇಷ್ಟೇಲ್ಲಾ ಭರ್ಜರಿ ತಯಾರಿ ನಡೆಸುತ್ತಿರುವುದು ರಶ್ಮಿಕ ಯಾವ ಚಿತ್ರಕ್ಕಾಗಿ ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿಸಿದೆ,ಇನ್ನೊಂದೆಡೆ ರಶ್ಮಿಕರ ಹೊಸ ಪ್ರಯತ್ನಕ್ಕೆ ಎಲ್ಲೆಡೆ  ಪ್ರಶಂಸೆ ವ್ಯಕ್ತವಾಗುತ್ತಿದೆ.

ಇತ್ತೀಚೆಗೆ ನಟ ಚಾಲೆಂಜಿಗ್ ಸ್ಟಾರ್ ದರ್ಶನ್ ಹಾಗೂ ರಶ್ಮಿಕ ಮಂದಣ್ಣ ಅಭಿನಯದ ಯಜಮಾನ ಚಿತ್ರ ಶತದಿನ ಪೂರೈಸಿದೆ. ಜೊತೆಗೆ ಟಾಲಿವುಡ್ ನಟ ವಿಜಯ್ ದೇವರಕೊಂಡ ಅಭಿನಯದ ಡಿಯರ್ ಕಾಮ್ರೇಡ್ ಚಿತ್ರದಲ್ಲಿ ಕಿರಿಕ್ ಹುಡುಗಿ ರಶ್ಮಿಕ ನಟಿಸಿದ್ದು, ಈ ಚಿತ್ರ ಜುಲೈ 26 ರಂದು ತೆರೆ ಮೇಲೆ ಬರಲಿದೆ. ಅಲ್ಲದೆ ಕನ್ನಡದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಪೊಗರು, ಕಾಲಿವುಡ್ ನಲ್ಲಿ ನಟ ಕಾರ್ತಿಕ್ ಜೊತೆ, ಟಾಲಿವುಡ್ ನಲ್ಲಿ ನಾನಿ ಜೊತೆ ಭೀಷ್ಮ ಸಿನಿಮಾಗಳ ್ಣ ಹಚ್ಚಿದ್ದಾರೆ.

Sponsored :


9900071610