ಸ್ಯಾಂಡಲವುಡ್​ಗೆ ಜ್ಯೂನಿಯರ್​ ರಣಧೀರ! ತ್ರಿವಿಕ್ರಮ ಮೂಲಕ ತೆರೆಗೆ ಬರ್ತಿದ್ದಾರೆ ವಿಕ್ರಮ್!!

924

ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ರ ಎರಡನೇ ಪುತ್ರ ವಿಕ್ರಮ್ ಸ್ಯಾಂಡಲ್ ವುಡ್ ಸಿನಿರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಹಲವು ದಿನಗಳಿಂದ ಪುತ್ರಿ ಮದುವೆ ಕೆಲಸದಲ್ಲಿ ಬ್ಯುಸಿಯಾಗಿದ್ದ ರವಿಮಾಮ ಇದೀಗಾ ಎರಡನೇ ಮಗ ವಿಕ್ರಮ್ ರನ್ನು ಸ್ಯಾಂಡಲ್ ವುಡ್ ಸಿನಿರಂಗಕ್ಕೆ ಅದ್ದೂರಿಯಾಗಿ ಪರಿಚಯಿಸಲು ನಿರ್ಧರಿಸಿದ್ದಾರೆ.

ad

ಈಗಾಗಲೆ ಮೊದಲ ಮಗ ಮನೋರಂಜನ್ ರನ್ನು ಚಿತ್ರರಂಗಕ್ಕೆ ಪರಿಚಯಿಸಿ ಎರಡು ವರ್ಷ ಕಳೆದಿದ್ದು ಇದೀಗಾ ಎರಡನೇ ಮಗನು ಸಿನಿ ಪಯಣ ಆರಂಭಿಸಲು ಭರ್ಜರಿ ಎಂಟ್ರಿ ಕೊಡಿಸಲು ಅದ್ಧೂರಿಯಾಗಿ ತಯಾರಿ ನಡೆಸಲಾಗುತ್ತಿದೆ.ಅಲ್ಲದೆ ವಿಕ್ರಮ್ ರವರ ಮೊದಲ ಚಿತ್ರದ ಬಗೆಗೆ ಒಂದಿಷ್ಟು ಮಾಹಿತಿ ಬಹಿರಂಗವಾಗಿದೆ. ಅದೆನೆಂದು ತಿಳಿಯುವ ಕುತೂಹಲ ನಿಮಗಿದ್ದರೆ ಈ ಕೆಳಗಿನ ಸ್ಟೋರಿ ಓದಿ..

ಹೌದು ವಿಕ್ರಮ್ ಮೊದಲ ಸಿನಿಮಾಗೆ ‘ತ್ರಿವಿಕ್ರಮ’ ಎಂದು ಟೈಟಲ್ ಇಡಲಾಗಿದ್ದು, ‘ರೋಸ್’ ಮತ್ತು ‘ಮಾಸ್ ಲೀಡರ್’ ಖ್ಯಾತಿಯ ನಿರ್ದೇಶಕ ಸಹನಾ ಮೂರ್ತಿ ರವಿಚಂದ್ರನ್ ಎರಡನೇ ಮಗನ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಗೌರಿ ಎಂಟಟೈನರ್ಸ್ ಬ್ಯಾನರ್ ನಲ್ಲಿ ಸೋಮಣ್ಣ ಮತ್ತು ಸುರೇಶ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಜೊತೆಗೆ ಚಿತ್ರಕ್ಕೆ ಸಂತೋಷ್ ರೈ ಛಾಯಾಗ್ರಹಣವಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಇನ್ನೂ ಚಿತ್ರಕ್ಕೆ ‘ಹೈ ವೋಲ್ಟೇಜ್ ಲವ್ ಸ್ಟೋರಿ’ ಎಂದು ಟ್ಯಾಗ್ ಲೈನ್ ನೀಡಲಾಗಿದೆ.

ಕಳೆದ ಎರಡು ವರ್ಷಗಳ ಹಿಂದೆಯೇ ಸಿನಿಮಾಗೆ ಎಂಟ್ರಿ ನೀಡಬೇಕಾಗಿದ್ದ ವಿಕ್ರಮ್ ಕಾರಣಾಂತರಗಳಿಂದ ಅಭಿನಯಿಸಲು ಸಾಧ್ಯವಾಗಿರಲ್ಲಿಲ್ಲ.ಅಲ್ಲದೆ ಈ ಹಿಂದೆ ಕ್ರೇಜಿ ಸ್ಟಾರ್ ಎಂಬ ಚಿತ್ರವೊಂದರಲ್ಲಿ ರವಿಮಾಮನ ಜೊತೆ ಸಣ್ಣದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದ ವಿಕ್ರಮ್ ಇದೀಗಾ ಅಭಿನಯಿಸಲು ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದಾರೆ.ಅಭಿನಯ ತರಂಗದಲ್ಲಿ ಅಭಿನಯವನ್ನು, ಸಾಹಸ ನಿರ್ದೇಶಕ ಮತ್ತು ನಿರ್ದೇಶಕ ರವಿವರ್ಮ ಅವರಿಂದ ಆಕ್ಷನ್ ಸೀಕ್ವೆನ್ಸ್, ನೃತ್ಯ ನಿರ್ದೇಶಕರಾದ ಮುರಳಿ ಮತ್ತು ಕಲೈ ಅವರಿಂದ ನೃತ್ಯವನ್ನು ಸಹ ಕಲಿತಿದ್ದಾರೆ. ಎಲ್ಲಾ ರೀತಿಯ ಸಕಲ ತಯಾರಿ ನಡೆಸಿರುವ ವಿಕ್ರಮ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿ ಫುಲ್ ರೆಡಿಯಾಗಿದ್ದಾರೆ.

ಈ ವರ್ಷದ ಮುಂದಿನ ತಿಂಗಳು ಆಗಸ್ಟ್ ನಲ್ಲಿ ವರಮಹಾಲಕ್ಷ್ಮೀಗೆ ವಿಕ್ರಮ್ ಮೊದಲ ಚಿತ್ರ ಅದ್ಧೂರಿಯಾಗಿ ಸೆಟ್ಟೇರುತ್ತಿದೆ. ಹಾಗೂ ದೊಡ್ಡ ಸಮಾರಂಭದ ಮೂಲಕ ವಿಕ್ರಮ್ ಅವರನ್ನು ಲಾಂಚ್ ಮಾಡಲು ಕ್ರೇಜಿಸ್ಟಾರ್ ರವಿಚಂದ್ರನ್ ಪ್ಲಾನ್ ಮಾಡಿದ್ದಾರೆ.
ಸದ್ಯ ಪ್ರಿ ಪ್ರೊಡಕ್ಷನ್ ಹಂತದ ಕೆಲಸ ಮುಗಿಸಿರುವ ಚಿತ್ರತಂಡ ನಾಯಕಿಯ ಹುಡುಕಾಟದಲ್ಲಿ ಬ್ಯುಸಿಯಾಗಿದೆ. ಚಿತ್ರಕ್ಕೆ ಹೊಸ ನಾಯಕಿಯರು ಬೇಕಾಗಿದ್ದು, ಅದರಲ್ಲೂ ಕನ್ನಡತಿಯೆ ವಿಕ್ರಮ್ ಗೆ ಜೋಡಿಯಾಗಿ ಹುಡುಕಲು ಚಿತ್ರತಂಡ ನಿರ್ಧರಿಸಿದೆ. ಜೊತೆಗೆ ನಟನೆ ಆಸಕ್ತಿ ಇರುವವರು 18 ರಿಂದ 23ರ ವಯೋಮಾನದ ಹುಡುಗಿಯರು ಆಡಿಷನ್ ನಲ್ಲಿ ಭಾಗವಹಿಸಲು ಚಿತ್ರತಂಡ ಗ್ರೀನ್ ಸಿಗ್ನಲ್ ನೀಡಿದೆ.

Sponsored :

Related Articles