ಕೊನೆಗೂ ಸ್ಪೀಕರ್ ಕಚೇರಿಗೆ ತಲುಪಿದ ಅತೃಪ್ತರು! ರಮೇಶ್ ಕುಮಾರ್ ಅಂಗಳದಲ್ಲಿ ರೆಬೆಲ್​ಗಳ ಭವಿಷ್ಯ!!

203

ಸಮ್ಮಿಶ್ರ ಸರ್ಕಾರದ ಸಂಕಷ್ಟಕ್ಕೆ ಕ್ಲೈಮ್ಯಾಕ್ಸ್​ ಹತ್ತಿರವಾದಂತಿದ್ದು, ಅತೃಪ್ತಿಯೊಂದಿಗೆ ರಾಜೀನಾಮೆ ನೀಡಿ ಮುಂಬೈ ಸೇರಿದ್ದ 10 ಶಾಸಕರು ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಗರಕ್ಕೆ ವಾಪಸ್ಸಾಗಿದ್ದು, ಪ್ಲೈಟ್ ವಿಳಂಬ ಹಾಗೂ ಟ್ರಾಫಿಕ್​ ನಲ್ಲಿ ಸಿಲುಕಿದ ಪರಿಣಾಮ ನಿಗದಿತ ಸಮಯದಲ್ಲಿ ಸ್ಪೀಕರ್​ ಕಚೇರಿ ತಲುಪಲು ಪರದಾಡಿದ್ದಾರೆ.


ಹೌದು ಅತೃಪ್ತ ಶಾಸಕರ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್​ ಸಂಜೆ 6 ಗಂಟೆಯೊಳಗೆ ವಿಧಾನಸೌಧದ ಸ್ಪೀಕರ್ ಕಚೇರಿಗೆ ಹಾಜರಾಗುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಮುಂಬೈ ಬಿಟ್ಟ ಅತೃಪ್ತ ಶಾಸಕರು ಎರಡು ವಿಶೇಷ ವಿಮಾನದಲ್ಲಿ ಎಚ್ಎಎಲ್​ ವಿಮಾನ ನಿಲ್ದಾಣಕ್ಕೆ ಬಂದಿಳಿದರು.

ad


ಆದರೆ ಹವಾಮಾನ ವೈಪರಿತ್ಯದಿಂದಾಗಿ ವಿಮಾನ ಕೆಳಕ್ಕೆ ಇಳಿಯುವಲ್ಲಿ ಅಂದಾಜು ಅರ್ಧ ಗಂಟೆ ವಿಳಂಬವಾಯಿತು. ಈ ಹಿನ್ನೆಲೆಯಲ್ಲಿ 6 ಗಂಟೆಯೊಳಗೆ ಸ್ಪೀಕರ್ ಕಚೇರಿಗೆ ತಲುಪುವುದು ಕಷ್ಟ ಸಾಧ್ಯವಾಗಿತ್ತು. ಹೀಗಾಗಿ ಶರವೇಗದಲ್ಲಿ ಬಸ್​​ನಲ್ಲಿ ಕುಳಿತು ವಿಧಾನಸೌಧಕ್ಕೆ ಹೊರಟ ಅತೃಪ್ತರು ಸಮಯಕ್ಕೆ ಸರಿಯಾಗಿ ತಲುಪುವುದು ಅನುಮಾನವಾಗಿದ್ದ ಕಾರಣ ಟೆನ್ಸನ್​ ನಲ್ಲೇ ಇದ್ದರು.


ಕೊನೆಗೂ 6 ಗಂಟೆ ಮೂರು ನಿಮಿಷಕ್ಕೆ ಅತೃಪ್ತ ಶಾಸಕರು ವಿಧಾನಸೌಧ ತಲುಪಿದರು. ಬಸ್​ ಇಳಿಯುತ್ತಿದ್ದಂತೆ ದಾಖಲೆಗಳೊಂದಿಗೆ ಓಡಲು ಆರಂಭಿಸಿದ ಶಾಸಕ ಭೈರತಿ ಬಸವರಾಜು ಓಡುತ್ತಲೇ ಸ್ಪೀಕರ್​ ಕಚೇರಿ ತಲುಪಿದರು. ಒಟ್ಟಿನಲ್ಲಿ ಸುಪ್ರೀಂ ಕೋರ್ಟ್​ ಆದೇಶದ ಹಿನ್ನೆಲೆಯಲ್ಲಿ ಶಾಸಕರ ಕಚೇರಿ ತಲುಪಲೇ ಬೇಕಿದ್ದ ಶಾಸಕರು ಪರದಾಡಿಕೊಂಡು, ಓಡೋಡಿ ಬಂದಿದ್ದು ಮಾತ್ರ ವಿಶೇಷವಾಗಿತ್ತು.

Sponsored :

Related Articles